Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸ್ವಾದಿಷ್ಟಕರ ಮಿಶ್ರ ವೆಜ್ ಕಟ್ಲೇಟ್
ಕಟ್ಲೇಟ್ ನಲ್ಲಿ ಎಣ್ಣೆಯಲ್ಲಿ ಕರಿದು ಮಾಡುವ ತಿಂಡಿಯಷ್ಟು ಕ್ಯಾಲೋರಿ ಅಂಶವಿರುವುದಿಲ್ಲ. ಆದ್ದರಿಂದ ಕಟ್ಲೇಟ್ ನಲ್ಲಿ ತರಕಾರಿ ಮತ್ತು ಜೋಳದ ಹಿಟ್ಟು ಬಳಸಿ ತಯಾರಿಸುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ. ಆದ್ದರಿಂದ ಡಯಟ್ ನಲ್ಲಿ ಇರುವವರು ಕೂಡ ಇದನ್ನು ತಿನ್ನಬಹುದಾಗಿದೆ. ಇಲ್ಲಿ ಮಿಶ್ರ ವೆಜ್ ಕಟ್ಲೇಟ್ ಮಾಡುವ ವಿಧಾನ ಹೇಳಲಾಗಿದೆ ನೋಡಿ:
ಬೇಕಾಗುವ ಸಾಮಾಗ್ರಿಗಳು
* ಆಲೂಗೆಡ್ಡೆ 4-5
* ಟೊಮೆಟೊ 2 (ಪೇಸ್ಟ್ ಮಾಡಬೇಕು)
* 1 ಚಮಚ ಜೀರಿಗೆ
* ಬೀನ್ಸ್ ಕಾಲು ಕಪ್
* ಅರ್ಧ ಕಪ್ ಜೋಳದ ಹಿಟ್ಟು
* ಅಮೆಚ್ಯೂರ್ ಅರ್ಧ ಚಮಚ
* ಕೊತ್ತಂಬರಿ ಪುಡಿ ಅರ್ಧ ಚಮಚ
* ಕೊತ್ತಂಬರಿ ಸೊಪ್ಪು ಕಾಲು ಕಪ್ (ಕತ್ತರಿಸಿದ್ದು)
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಚಿಟಿಕೆಯಷ್ಟು ಕರಿಮೆಣಸಿನ ಪುಡಿ
* 1/4 ಕಪ್ ಕ್ಯಾರೆಟ್
* ಎಣ್ಣೆ
* ರುಚಿಗೆ ತಕ್ಕ ಉಪ್ಪು
* 1/4 ಕಪ್ ಬಟಾಣಿ
ನಾನ್ ವೆಜೆಟೇರಿಯನ್ ತಿನ್ನುವವರು ಮೊಟ್ಟೆ ಸೇರಿಸಬಹುದು

ಸ್ಟೆಪ್-1
ಆಲೂಗೆಡ್ಡೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಒಂದು ಪಾತ್ರೆಯನ್ನು ಚೆನ್ನಾಗಿ ಹಿಸುಕಬೇಕು. ಉಳಿದ ತರಕಾರಿಗಳಾದ ಟೊಮೆಟೊ, ಬಟಾಣಿ, ಕ್ಯಾರೆಟ್, ಬೀನ್ಸ್ ಇವುಗಳನ್ನು ಬೇಯಿಸಿ ಬೆಳ್ಳುಳ್ಳಿ , ಜೀರಿಗೆ ಹಾಕಿ ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಬೇಕು.

ಸ್ಟೆಪ್-2
ನಂತರ ಹಿಸುಕಿದ ಆಲೂಗೆಡ್ಡೆ ಮತ್ತು ತರಕಾರಿಯನ್ನು ಹಾಕಿ ಮಿಶ್ರಣ ಮಾಡಿ ಚೆನ್ನಾಗಿ ಹಿಸುಕಬೇಕು.

ಸ್ಟೆಪ್-3
ಈಗ ಜೋಳದ ಹಿಟ್ಟು ಹಾಕಿ, ಅಮೆಚ್ಯೂರ್ (ಮೊಟ್ಟೆ ತಿನ್ನುವವರು ಮೊಟ್ಟೆ ಸೇರಿಸಬಹುದು) , ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಸ್ಟೆಪ್-4
ನಂತರ ಅದನ್ನು ಟಿಕ್ಕಿಯ ಆಕಾರದಲ್ಲಿ ತಟ್ಟಿ ಸ್ವಲ್ಪ ಎಣ್ಣೆ ಸವರಿ ಗ್ರಿಲ್ ಮಾಡಿದರೆ ಮಿಕ್ಸ್ ವೆಜ್ ಟಿಕ್ಕಿ ರೆಡಿ. ಗ್ರಿಲ್ ನಲ್ಲಿ ಮಾಡುವುದಾದರೆ ಟಿಕ್ಕಿಯನ್ನು ತುಂಬಾ ದಪ್ಪವಾಗಿ ತಟ್ಟಬೇಡಿ. ಗ್ರಿಲ್ ಇಲ್ಲದಿದ್ದರೆ ಈ ಕೆಳಗಿನ ವಿಧಾನದಲ್ಲಿ ತಯಾರಿಸಬಹುದು.

ಸ್ಟೆಪ್-5
ತವಾವನ್ನು ಬಿಸಿ ಮಾಡಿ, ಅದರಲ್ಲಿ ಸ್ವಲ್ಪ ಎಣ್ಣೆ ಟಿಕ್ಕಿಯನ್ನು ಹಾಕಿ ಟಿಕ್ಕಿಯ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಹುರಿದರೆ ಟಿಕ್ಕಿ ರುಚಿಯಾದ ಮಿಕ್ಸ್ ವೆಜ್ ಸವಿಯಲು ರೆಡಿ.
ತಯಾರಿಸುವ ವಿಧಾನ:
1. ಆಲೂಗೆಡ್ಡೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಒಂದು ಪಾತ್ರೆಯನ್ನು ಚೆನ್ನಾಗಿ ಹಿಸುಕಬೇಕು. ಉಳಿದ ತರಕಾರಿಗಳಾದ ಟೊಮೆಟೊ, ಬಟಾಣಿ, ಕ್ಯಾರೆಟ್, ಬೀನ್ಸ್ ಇವುಗಳನ್ನು ಬೇಯಿಸಿ ಬೆಳ್ಳುಳ್ಳಿ ಪೇಸ್ಟ್ , ಜೀರಿಗೆ ಹಾಕಿ ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಬೇಕು.
2. ನಂತರ ಹಿಸುಕಿದ ಆಲೂಗೆಡ್ಡೆ ಮತ್ತು ತರಕಾರಿಯನ್ನು ಹಾಕಿ ಮಿಶ್ರಣ ಮಾಡಿ ಚೆನ್ನಾಗಿ ಹಿಸುಕಬೇಕು.
3. ಈಗ ಜೋಳದ ಹಿಟ್ಟು ಹಾಕಿ, ಅಮೆಚ್ಯೂರ್ (ಮೊಟ್ಟೆ ತಿನ್ನುವವರು ಮೊಟ್ಟೆ ಸೇರಿಸಬಹುದು) , ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
4. ನಂತರ ಅದನ್ನು ಟಿಕ್ಕಿಯ ಆಕಾರದಲ್ಲಿ ತಟ್ಟಿ ಸ್ವಲ್ಪ ಎಣ್ಣೆ ಸವರಿ ಗ್ರಿಲ್ಡ್ ಮಾಡಿದರೆ ಮಿಕ್ಸ್ ವೆಜ್ ಟಿಕ್ಕಿ ರೆಡಿ. ಗ್ರಿಲ್ ನಲ್ಲಿ ಮಾಡುವುದಾದರೆ ಟಿಕ್ಕಿಯನ್ನು ತುಂಬಾ ದಪ್ಪವಾಗಿ ತಟ್ಟಬೇಡಿ. ಗ್ರಿಲ್ ಇಲ್ಲದಿದ್ದರೆ ಈ ಕೆಳಗಿನ ವಿಧಾನದಲ್ಲಿ ತಯಾರಿಸಬಹುದು.
ತವಾವನ್ನು ಬಿಸಿ ಮಾಡಿ, ಅದರಲ್ಲಿ ಸ್ವಲ್ಪ ಎಣ್ಣೆ ಟಿಕ್ಕಿಯನ್ನು ಹಾಕಿ ಟಿಕ್ಕಿಯ ಎರಡೂ ಬದಿ ಕಂದು ಬಣ್ಣ ಬರುವವರೆಗೆ ಹುರಿದರೆ ಟಿಕ್ಕಿ ರುಚಿಯಾದ ಮಿಕ್ಸ್ ವೆಜ್ ಕಟ್ಲೇಟ್ ಸವಿಯಲು ರೆಡಿ.



Click it and Unblock the Notifications
