Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಬಾಯಿ ರುಚಿ ಹೆಚ್ಚಿಸುವ ಖಾರದ ಮೆಣಸಿನ ಪಕೋಡಾ ರೆಸಿಪಿ
ಈ ಮಳೆಗಾಲದ ಋತುವಿನಲ್ಲಿ ಗರಿಗರಿ ಪಕೋಡಾ ಮತ್ತು ಬಿಸಿ ಚಹಾದ ರುಚಿಯೊಂದಿಗೆ ಸವಿಯಲು ಬಯಸುತ್ತೀರಾ? ಈ ಮಳೆಗಾಲದ ಸಮಯ ಅಂತೂ ನಿಮಗೆ ಬಾಯಲ್ಲಿ ನೀರೂರಿಸುವ ರುಚಿಯಾದ ಕರಿದ ತಿಂಡಿಗಳನ್ನು ತಿನ್ನುವಂತೆ ಮಾಡುವುದು ಸಹಜ. ಖಾರದ ತಿನಿಸು ಅಥವಾ ಪಕೋಡಾವನ್ನು ಸೇವಿಸಲು ಈ ಸಮಯಲ್ಲಿ ನಮ್ಮ ಮನಸ್ಸು ಬಯಸುವುದು ಸಹಜವೇ ಆಗಿದೆ.
ಪಕೋಡಾಗಳು ಹುರಿದ ತಿನಿಸುಗಳಾಗಿದ್ದು ಇದನ್ನು ಹಲವಾರು ಸಾಮಾಗ್ರಿಗಳಿಂದ ತಯಾರಿಸಲಾಗುತ್ತದೆ. ಪಕೋಡಾವನ್ನು ತಯಾರಿಸಲು ಸಸ್ಯಾಹಾರಿ ಅಥವಾ ಮಾಂಸಾಹಾರಿ ಸಾಮಾಗ್ರಿಗಳನ್ನು ಕೂಡ ಬಳಸಬಹುದಾಗಿದೆ.
ಈರುಳ್ಳಿ ಪಕೋಡಾ, ಗೋಬಿ ಪಕೋಡಾ, ಆಲೂಗಡ್ಡೆ ಪಕೋಡಾ ಹೀಗೆ ಈ ಪಕೋಡಾಗಳನ್ನು ಹೆಚ್ಚಿನ ಮನೆಗಳಲ್ಲಿ ಮಳೆಗಾಲದ ಸಮಯದಲ್ಲಿ ತಯಾರಿಸಲಾಗುತ್ತದೆ. ಆದರೆ ಮೆಣಸಿನ ಪಕೋಡಾದ ಹೆಸರನ್ನು ನೀವು ಕೇಳಿದ್ದೀರಾ?

ಮೆಣಸಿನ ಪಕೋಡಾವನ್ನು ಈ ಮಳೆಗಾಲದ ಸೀಸನ್‌ನಲ್ಲಿ ಬಾಯಿಯಲ್ಲಿ ನೀರು ಬರಿಸುವ ರೀತಿಯಲ್ಲಿ ತಯಾರಿಸಬಹುದಾಗಿದೆ. ಉದ್ದ ಮೆಣಸನ್ನು ಈ ಪಕೋಡಾ ತಯಾರಿಯಲ್ಲಿ ಬಳಸಲಾಗುತ್ತದೆ. ಇದಲ್ಲದೆ ಉದ್ದವಾಗಿರುವ ಕೆಂಪು ಮೆಣಸನ್ನು ಬಳಸಬಹುದಾಗಿದೆ.
ಹಾಗಿದ್ದರೆ ಮೆಣಸಿನ ಪಕೋಡಾ ಖಾದ್ಯವನ್ನು ತಯಾರಿಸುವ ವಿಧಾನವನ್ನು ಕೆಳಗೆ ನಾವು ನೀಡಿದ್ದು ಇದರಿಂದ ಸುಲಭವಾದ ಖಾದ್ಯವನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ.
ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!
ಪ್ರಮಾಣ: 2
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು
ಸಾಮಾಗ್ರಿಗಳು
*ದೊಡ್ಡ ಹಸಿ ಮೆಣಸುಗಳು - 10
*ಕಡಲೆ ಹುಡಿ - 1 ಕಪ್
*ಕೆಂಪು ಮೆಣಸಿನ ಹುಡಿ - 1 ಚಮಚ
*ಚಾಟ್ ಮಸಾಲಾ - 3 ಚಮಚ
*ಜೀರಿಗೆ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಅರಶಿನ ಹುಡಿ - 1/2 ಚಮಚ
*ಎಣ್ಣೆ - ಚೆನ್ನಾಗಿ ಕರಿಯಲು
ಮಾಡುವ ವಿಧಾನ
1. ಕಡಲೆ ಹಿಟ್ಟು, ಅರಶಿನ ಹುಡಿ, ಮೆಣಸಿನ ಹುಡಿ, ಉಪ್ಪು, ಜೀರಿಗೆ ಮತ್ತು ಚಾಟ್ ಮಸಾಲಾವನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಚಿನ್ನಾಗಿ ಮಿಶ್ರ ಮಾಡಿಕೊಳ್ಳಿ.
2. ಇದನ್ನು ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಲು ಇದಕ್ಕೆ ಕಪ್‌ನಷ್ಟು ನೀರನ್ನು ಸೇರಿಸಿ.
3. ಅಡಿಗೆ ಮನೆಯ ಬಟ್ಟೆಯನ್ನು ತೆಗೆದುಕೊಂಡು ತೊಳೆದ ಹಸಿಮೆಣಸಿನ ನೀರನ್ನು ಚೆನ್ನಾಗಿ ತೆಗೆಯಿರಿ.
4. ಇನ್ನು ಮೆಣಸಿನ ಮಧ್ಯಭಾಗವನ್ನು ಸೀಳಿ ಮತ್ತು ಈ ಹಿಟ್ಟನ್ನು ಎಲ್ಲಾ ಭಾಗಕ್ಕೂ ಚೆನ್ನಾಗಿ ಹೀರುವಂತೆ ಮಾಡಿ.
5. ತದನಂತರ ಮೆಣಸನ್ನು ಕಡಲೆಹಿಟ್ಟಿಗೆ ಮುಳುಗಿಸಿ ಮತ್ತು ಎಲ್ಲಾ ಭಾಗವನ್ನು ಹಿಟ್ಟು ಚೆನ್ನಾಗಿ ಹೀರಿಕೊಳ್ಳಲಿ.
6. ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
7. ಮೆಣಸು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದುಕೊಳ್ಳಿ.
8. ಪೂರ್ತಿ ಆದ ನಂತರ, ಪಕೋಡಾವನ್ನು ತಟ್ಟೆಗೆ ವರ್ಗಾಯಿಸಿ.
ನಿಮ್ಮ ಮೆಣಸಿನ ಪಕೋಡಾ ರೆಸಿಪಿ ಸವಿಯಲು ಸಿದ್ಧವಾಗಿದೆ. ಈ ರುಚಿರುಚಿ ಖಾದ್ಯವನ್ನು ಚಟ್ನಿ ಅಥವಾ ಕೆಚಪ್‌ನೊಂದಿಗೆ ಸವಿಯಲು ನೀಡಿ.



Click it and Unblock the Notifications











