Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!
ಸಂಜೆ ತಿಂಡಿ ಕೇವಲ ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಅಗತ್ಯವಿದೆ. ಊಟವಾದ 4-5 ಗಂಟೆ ನಂತರ ಹೊಟ್ಟೆಗೆ, ರುಚಿ ರುಚಿಯಾಗಿರುವ ಏನಾದರೂ ಬೇಕೆನಿಸುತ್ತದೆ. ಹಾಗೆಯೆ, ಸಂಜೆ ಕಚೇರಿಯಿಂದ ಮನೆಗೆ ಮರಳಿದಾಗ ಬಿಸಿಬಿಸಿ ಕಾಫಿ ಅಥವಾ ಚಹಾದ ಜೊತೆ ಏನನ್ನಾದರೂ ಬಾಯಾಡಿಸಲು ನಾಲಿಗೆ ಹಪಹಪಿಸುತ್ತಿರುತ್ತದೆ.
ಹಾಗಾದರೆ ಇನ್ನೇಕೆ ತಡ? ಬನ್ನಿ ಇಂದು ಬೋಲ್ಡ್ ಸ್ಕೈ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಬಿಸಿ ಬಿಸಿಯಾದ ಕಡ್ಲೆಬೇಳೆ ಆಂಬೋಡೆ ಮಾಡುವ ವಿಧಾನವನ್ನು ನಿಮ್ಮ ಮುಂದಿಡುತ್ತಿದೆ.
ಬಾಯಿಯಲ್ಲಿ ನೀರೂರಿಸುವ ಮಂಗಳೂರು ಬಜ್ಜಿ ರೆಸಿಪಿ

ಬೇಕಾಗುವ ಸಾಮಗ್ರಿಗಳು:
*ಕಡ್ಲೆಬೇಳೆ - ಒಂದು ಬೌಲ್
*ಹಸಿಮೆಣಸಿನಕಾಯಿ- 3 (ಸಣ್ಣಗೆ ಕತ್ತರಿಸಲಾಗಿರುವ)
*ಒಂದು ಚೆಕ್ಕೆ, ಲವಂಗ
*ಶುಂಠಿ - ಒಂದು ಇಂಚು
*ಕೊತ್ತುಂಬರಿ ಸೊಪ್ಪು - ಸ್ವಲ್ಪ
*ಈರುಳ್ಳಿ - 1 (ಸಣ್ಣಗೆ ಕತ್ತರಿಸಲಾಗಿರುವ)
*ಉಪ್ಪು ರುಚಿಗೆ
ತಯಾರಿಸುವ ವಿಧಾನ:
*ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆ ನೆನೆಸಿ.
*ನೆನೆದ ಕಡ್ಲೆಬೇಳೆಯನ್ನು, ನೀರು ಸೋಸಿಕೊಂಡು ಅದನ್ನು ಹಸಿಮೆಣಸಿನಕಾಯಿ, ಚೆಕ್ಕೆ, ಲವಂಗ, ಶುಂಠಿ, ಉಪ್ಪು ಮತ್ತು ಕೊತ್ತುಂಬರಿಸೊಪ್ಪು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
*ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ.
*ಕಲೆಸುವಾಗ ನೀರು ಹಾಕಬೇಡಿ, ಕಲೆಸಲು, ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಅಂಗೈನಲ್ಲಿ ಸ್ವಲ್ಪ ದಪ್ಪವಾಗಿ ತಟ್ಟಿಕೊಂಡು ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ, ಬೇಯಿಸಿ.
*ಎಣ್ಣೆಗೆ ಹಾಕಿದ ತಕ್ಷಣ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ.
*ಇದೇ ರೀತಿ ಮಿಕ್ಕ ಎಲ್ಲಾ ವಡೆಗಳನ್ನು ತಯಾರಿಸಿ. ರುಚಿಯಾದ ಕಡ್ಲೆಬೇಳೆ ಆಂಬೋಡೆ ತಿನ್ನಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಲು ಇನ್ನಷ್ಟು ರುಚಿಕರವಾಗಿರುತ್ತದೆ.



Click it and Unblock the Notifications
