Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾಯಿಯಲ್ಲಿ ನೀರೂರಿಸುವ ಕೋಲ್ಕತ್ತಾದ ವಿಶೇಷ ರೆಸಿಪಿ ಜಾಲ್ ಮುರೈ
ಕೋಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳದವರಿಗೆ ಅತಿ ಮೆಚ್ಚಿನ ಖಾದ್ಯ ಆಗಿದೆ ಜಾಲ್ ಮುರೈ. ನೀವು ಕೋಲ್ಕತ್ತಾಕ್ಕೆ ಎಂದಾದರೂ ಭೇಟಿ ಕೊಡುವುದಿದ್ದರೆ ಈ ವಿಶಿಷ್ಟವಾದ ತಿಂಡಿಯನ್ನು ಸವಿಯದೇ ಬರಬೇಡಿ. ಈ ಖಾದ್ಯದ ತಯಾರಿಯನ್ನು ನೋಡುವುದೇ ಮಜವಾದ ಅಂಶವಾಗಿದೆ ಹಾಗಿದ್ದರೆ ಈ ತಿಂಡಿಯ ಸವಿ ಹೇಗಿರಬಹುದೆಂಬುದನ್ನು ಒಮ್ಮೆ ಆಲೋಚಿಸಿ.
ಬಂಗಾಳಿಯಲ್ಲಿ ಜಾಲ್ ಅಂದರೆ ಖಾರ ಮತ್ತು ಮುರಿ ಅಂದರೆ ಅವಲಕ್ಕಿಯಾಗಿದೆ. ಹಾಗಿದ್ದರೆ ಅವಲಕ್ಕಿಯನ್ನು ಖಾರದೊಂದಿಗೆ ಬೆರೆಸಿ ಕೆಲವೊಂದು ಸಾಮಾಗ್ರಿಗಳನ್ನು ಸೇರ್ಪಡಿಸಿ ಈ ವಿಶೇಷವಾದ ಖಾದ್ಯವನ್ನು ಸಿದ್ಧಪಡಿಸಲಾಗುತ್ತದೆ. ಇದನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾಗಿದ್ದು ನೀವು ಇದನ್ನು ಎಷ್ಟು ಬೇಕಾದರೂ ಸೇವಿಸಬಹುದು ಇದು ನಿಮ್ಮನ್ನು ದಪ್ಪಗಾಗಿಸುವುದಿಲ್ಲ. ಏಕೆಂದರೆ ಇದಲ್ಲಿ ಬೆರೆಸುವ ಸಾಮಾಗ್ರಿಗಳು ಆರೋಗ್ಯಕರವಾಗಿದ್ದು ನಿಮ್ಮ ದೇಹದಲ್ಲಿ ಕೊಬ್ಬಿನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತದೆ.
ಮಳೆಗಾಲದ ಸಮಯದಲ್ಲಿ ನಿಮ್ಮ ನಾಲಿಗೆಗೆ ಸವಿಯಾದ ರುಚಿಯನ್ನು ಉಣಬಡಿಸುವ ಜಾಲ್ ಮುರೈ ನಿಮ್ಮಲ್ಲಿ ಸೇವಿಸುವ ತುಡಿತವನ್ನು ಇನ್ನಷ್ಟು ಉಂಟುಮಾಡುವುದಂತೂ ಸುಳ್ಳಲ್ಲ. ಹಾಗಿದ್ದರೆ ಇಲ್ಲಿ ನಾವು ಕೊಟ್ಟಿರುವ ಕೋಲ್ಕತ್ತಾದ ಈ ವಿಶೇಷ ರೆಸಿಪಿಯ ತಯಾರಿ ವಿಧಾನದತ್ತ ಗಮನ ಹರಿಸಿ ಮತ್ತು ಸುಲಭವಾಗಿ ಇದನ್ನು ತಯಾರಿಸಿ.

ರುಚಿ ರುಚಿಯಾದ ನೂಡಲ್ಸ್ ಕಟ್ಲೇಟ್ ಖಾದ್ಯ
ಸಾಮಾಗ್ರಿಗಳು
*ಅವಲಕ್ಕಿ - 2 ಕಪ್‌ಗಳು
*ಆಲೂಗಡ್ಡೆ - 2 (ಬೇಯಿಸಿದ್ದು ಮತ್ತು ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಹಸಿಮೆಣಸು - 4 (ಕೊನೆಯದಾಗಿ ಕತ್ತರಿಸಿದ್ದು)
*ಸೇವ್ - 1/2 ಕಪ್
*ಉದ್ದಿನ ಬೇಳೆ - 1/2 ಕಪ್ (ನೆನೆಸಿದ್ದು)
*ಉಪ್ಪು - ರುಚಿಗೆ ತಕ್ಕಷ್ಟು
*ಲಿಂಬೆ ರಸ - 1 ಸ್ಪೂನ್
*ಉಪ್ಪಿನಕಾಯಿ ಮಸಾಲೆ - 1 ಸ್ಪೂನ್
*ಕೊತ್ತಂಬರಿ ಸೊಪ್ಪು - 2 ಚಮಚ (ಕತ್ತರಿಸಿದ್ದು)
*ಸಾಸಿವೆ ಎಣ್ಣೆ - 1 ಚಮಚ
ತೆಂಗಿನ ಕಾಯಿ ಚೂರುಗಳು - ಅಲಂಕಾರಕ್ಕಾಗಿ
ಮಾಡುವ ವಿಧಾನ
1. ನೆನೆಸಿರುವ ಉದ್ದಿನ ಬೇಳೆದಿಂದ ನೀರನ್ನು ಬಸಿಯಿರಿ.
2. ಮಿಶ್ರಣ ಮಾಡುವ ಪಾತ್ರೆಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ
3. ಕೈ ಅಥವಾ ಸೌಟ್‌ನಿಂದ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ.
4. ತೆಂಗಿನ ಕಾಯಿ ಚೂರಿನಿಂದ ಅಲಂಕರಿಸಿ.
ಜಾಲ್ ಮುರೈ ಬಡಿಸಲು ಸಿದ್ಧವಾಗಿದೆ. ತಂಪಾದ ಮಳೆಗಾಲದ ದಿನದಲ್ಲಿ ಈ ವಿಶೇಷ ಖಾದ್ಯದ ರೆಸಿಪಿಯನ್ನು ಸವಿಯಿರಿ.



Click it and Unblock the Notifications
