Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಕ್ಕಾ ರೈಸ್ ನೂಡಲ್ಸ್: ಚೈನೀಸ್ ರೆಸಿಪಿ
ಚೈನೀಸ್ ನೂಡಲ್ಸ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು, ಅದರಲ್ಲೂ ಚೈನೀಸ್ ಹಕ್ಕಾ ನೂಡಲ್ಸ್ ಅಂತೂ ನೂಡಲ್ಸ್ ಪ್ರಿಯರ ಅಚ್ಚು ಮೆಚ್ಚಿನ ನೂಡಲ್ಸ್ ಆಗಿದೆ. ಇದನ್ನು ಚೈನೀಸ್ ರೆಸ್ಟೋರೆಂಟ್ ಗಳಲ್ಲಿ ದೊರೆಯುವಷ್ಟೇ ರುಚಿಕರವಾಗಿ ತಯಾರಿಸಬೇಕೆಂಬ ಮನಸ್ಸಿದ್ದರೆ ಈ ಹಕ್ಕಾ ರೈಸ್ ನೂಡಲ್ಸ್ ರೆಸಿಪಿ ಟ್ರೈ ಮಾಡಬಹುದು.
ಇದನ್ನು ಮಾಡುವ ವಿಧಾನ ಸರಳವಾಗಿದ್ದು, ಸವಿರುಚಿ ಹಕ್ಕಾ ನೂಡಲ್ಸ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
* ರೈಸ್ ನೂಡಲ್ಸ್ 1/2 ಪ್ಯಾಕೆಟ್
(ನೂಡಲ್ಸ್ ಅನ್ನು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ನೀರಿನಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ)
* ಕ್ಯಾರೆಟ್ 1 ಕತ್ತರಿಸಿದ್ದು
* ಈರುಳ್ಳಿ 1
* ಕ್ಯಾಪ್ಸಿಕಂ 1
* 4-5 ಬೆಳ್ಳುಳ್ಳಿ ಎಸಳು
* ಹಸಿ ಮೆಣಸಿನಕಾಯಿ 3-4
* ಸೋಯಾ ಸಾಸ್ 1 ಚಮಚ
* ಜೋಳದ ಹಿಟ್ಟು 1 ಚಮಚ
* ಹಸಿ ಮೆಣಸಿನಕಾಯಿ ಸಾಸ್ 1 ಚಮಚ
* ನೀರು 2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ 1 ಚಮಚ
ತಯಾರಿಸುವ ವಿಧಾನ:
* ಈಗ ಜೋಳದ ಹಿಟ್ಟನ್ನು 1/2 ಬಿಸಿ ನೀರಿನಲ್ಲಿ ಕಲೆಸಿ ಬದಿಯಲ್ಲಿಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಕಾಯಿಸಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಕತ್ತರಿಸಿದ ಕ್ಯಾರೆಟ್, ಕ್ಯಾಪ್ಸಿಕಂ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಫ್ರೈ ಮಾಡಿ. ಈಗ ರುಚಿಗೆ ತಕ್ಕ ಉಪ್ಪು, ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕಿ ಮಿಕ್ಸ್ ಮಾಡಿ ಮತ್ತೆ 3-4 ನಿಮಿಷ ಫ್ರೈ ಮಾಡಿ, ಈಗ ಜೋಳ ಹಿಟ್ಟು ಕಲೆಸಿದ ನೀರನ್ನು ಸುರಿದು ಕುದಿಸಿ, ನೀರು ಆರಿದ ಬಳಿಕ ನೂಡಲ್ಸ್ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಬೇಯಿಸಿದರೆ ಹಕ್ಕಾ ರೈಸ್ ನೂಡಲ್ಸ್ ರೆಡಿ.



Click it and Unblock the Notifications
