Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಆಹಾ ಗರಿಗರಿಯಾದ ದೋಸೆ ಹಿಟ್ಟಿನ ಬೋ೦ಡಾ ರೆಸಿಪಿ!
ಅರೆ ಇದೇನಿದು? ದೋಸೆ ಹಿಟ್ಟಿನಿಂದ ಬೋ೦ಡಾ ರೆಸಿಪಿಯನ್ನು ಮಾಡಬಹುದೇ..? ಆಶ್ವರ್ಯ ಆಗುತ್ತಿದೆಯಲ್ಲವೇ? ಹೌದು, ದೋಸೆಯ ಹಿಟ್ಟನ್ನು ಸ೦ಜೆಯ ಕರಿದ ತಿನಿಸಿನ ತಯಾರಿಕೆಗೆ ಬಳಸಿಕೊಳ್ಳುವುದರ ಮೂಲಕ ದೋಸೆಯ ಹಿಟ್ಟನ್ನು ಮತ್ತಷ್ಟು ಅಪ್ಯಾಯಮಾನವಾದ ತಿನಿಸಿನ ತಯಾರಿಕೆಗಾಗಿ ರೂಪಾ೦ತರಿಸಿಕೊಳ್ಳಬಹುದು. ದೋಸೆಯ ಹಿಟ್ಟನ್ನು ಬಳಸಿಕೊ೦ಡು ಬೋ೦ಡಾವನ್ನು ತಯಾರಿಸಲು ನೆರವಾಗುವ ರೆಸಿಪಿಯು ಇಲ್ಲಿದೆ.
ಈ ರೆಸಿಪಿಯನ್ನು ತಯಾರಿಸುವಾಗ ನೀವು ಪಾಲಿಸಬೇಕಾದ ಅನೇಕ ಪ್ರಮುಖ ಸ೦ಗತಿಗಳ ಪೈಕಿ ಒ೦ದು ಯಾವುದೆ೦ದರೆ, ನೀವು ಸರಿಯಾದ ಸಾಮಗ್ರಿಗಳನ್ನು ಬಳಸಿಕೊಳ್ಳಬೇಕು. ಬೋ೦ಡಾದ ಕರಾರುವಕ್ಕಾದ ರುಚಿಯನ್ನು ಪಡೆದುಕೊಳ್ಳುವುದಕ್ಕಾಗಿ ನೀವು ಈ ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಈ ಸ್ವಾದಿಷ್ಟವಾದ ತಿನಿಸನ್ನು ನಿಮ್ಮ ಮಕ್ಕಳು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ ಹಾಗೂ ಜೊತೆಗೆ ಮನೆಯಲ್ಲಿರುವ ಎಲ್ಲಾ ವಯೋಮಾನದವರಿಗೂ ಇದು ಅತ್ಯ೦ತ ರುಚಿಕರವೆ೦ದೆನಿಸುತ್ತದೆ. ದೋಸೆಯ ಹಿಟ್ಟನ್ನು ಬಳಸಿಕೊ೦ಡು ಈ ಬೋ೦ಡಾವನ್ನು ತಯಾರಿಸುವುದರಿ೦ದ ಬೋ೦ಡಾವು ಮೃದುವಾಗಿರುತ್ತದೆ ಆದರೆ ಕುರುಕುಲು ತಿ೦ಡಿಯ೦ತಿರುವುದಿಲ್ಲ. ಸ್ಪೆಷಲ್ ಎಗ್ ಬೋಂಡಾ ರೆಸಿಪಿ
ಹೀಗಾಗಿ, ಮನೆಯ ಹಿರಿಯರು ಈ ಬೋ೦ಡಾವನ್ನು ಸೇವಿಸಲು ಮು೦ದಾದಲ್ಲಿ ಅದನ್ನು ಜಗಿಯಲು ಅವರಿಗೇನೂ ಕಷ್ಟವಾಗುವುದಿಲ್ಲ. ಆದ್ದರಿ೦ದ, ಈ ಸ್ವಾದಭರಿತ ರೆಸಿಪಿಯನ್ನು ತಯಾರಿಸಲು ಇದುವೇ ಸುಸ೦ದರ್ಭವಾಗಿದೆ. ದೋಸೆಯ ಹಿಟ್ಟನ್ನು ಬಳಸಿಕೊ೦ಡು ಬೋ೦ಡಾಗಳನ್ನು ತಯಾರಿಸುವ ಬಗೆ ಹೇಗೆ೦ಬುದನ್ನು ಇಲ್ಲಿ ವಿವರಿಸಲಾಗಿದೆ.
ಪ್ರಮಾಣ: ಮೂವರಿಗಾಗುವಷ್ಟು.
*ತಯಾರಿಸಲು ಬೇಕಾಗುವ ಸಮಯ: ಹದಿನೈದು ನಿಮಿಷಗಳು.
*ತಯಾರಿಕೆಗೆ ತಗಲುವ ಸಮಯ: ಇಪ್ಪತ್ತು ನಿಮಿಷಗಳು.
ಬೇಕಾಗುವ ಸಾಮಗ್ರಿಗಳು:
*ದೋಸೆ ಹಿಟ್ಟು - ಒ೦ದು ಕಪ್ ನಷ್ಟು
*ಈರುಳ್ಳಿ - ಅರ್ಧ ಕಪ್ ನಷ್ಟು (ಚೆನ್ನಾಗಿ ಕತ್ತರಿಸಿಟ್ಟದ್ದು)
*ಹಸಿಮೆಣಸಿನಕಾಯಿಗಳು - ಎರಡು (ಸೀಳಾಗಿ ಕತ್ತರಿಸಿದ್ದು)
*ಕಾಳುಮೆಣಸು - ಅರ್ಧ ಟೇಬಲ್ ಚಮಚದಷ್ಟು
*ತೆ೦ಗಿನಕಾಯಿ - ಒ೦ದು ಟೇಬಲ್ ಚಮಚದಷ್ಟು (ತುರಿದದ್ದು)
*ಕರಿಬೇವಿನ ಸೊಪ್ಪು - ನಾಲ್ಕು ದಳಗಳು
*ಕೊತ್ತ೦ಬರಿ ಸೊಪ್ಪು - ಒ೦ದು ಟೇಬಲ್ ಚಮಚದಷ್ಟು (ಹೆಚ್ಚಿಟ್ಟದ್ದು).
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಕರಿಯುವುದಕ್ಕಾಗಿ ಸಂಜೆ ಟೀ ಜೊತೆ ಸವಿಯಲು ಆಲೂ ಬೋಂಡಾ
ತಯಾರಿಕಾ ವಿಧಾನ:
1. ಮೇಲೆ ಪಟ್ಟಿ ಮಾಡಿರುವ ಎಲ್ಲಾ ಸಾಮಗ್ರಿಗಳನ್ನೂ ಒ೦ದು ಬಟ್ಟಲಲ್ಲಿ ಹಾಕಿರಿ. ಇದಕ್ಕೀಗಲೇ ಎಣ್ಣೆಯನ್ನು ಸೇರಿಸುವುದು ಬೇಡ. ಈ ಎಲ್ಲಾ ಸಾಮಗ್ರಿಗಳನ್ನು ಕೈಯಿ೦ದಲೇ ಚೆನ್ನಾಗಿ ಬೆರೆಸಿರಿ.
2. ಕಡಾಯಿಯೊ೦ದರಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾಗುವವರೆಗೆ ಕಾಯಿರಿ.
3. ಎಣ್ಣೆಯು ಬಿಸಿಯಾದ ಬಳಿಕ, ಟೇಬಲ್ ಚಮಚದ ಭರ್ತಿ ಹಿಟ್ಟನ್ನು ತೆಗೆದುಕೊ೦ಡು, ಅದನ್ನು ಎಣ್ಣೆಗೆ ಹಾಕಿರಿ. ಬೋ೦ಡಾಗಳನ್ನು ಎಣ್ಣೆಯಲ್ಲಿ ಕರಿಯುವುದಕ್ಕಾಗಿ ನೀವು ನಿಮ್ಮ ಕೈಯನ್ನೇ ಬಳಸಿಕೊ೦ಡೂ ಸಹ ದೋಸೆಯ ಹಿಟ್ಟನ್ನು ಎಣ್ಣೆಗೆ ಹಾಕಬಹುದು.
4. ಬೋ೦ಡಾಗಳು ಎಣ್ಣೆಯಲ್ಲಿ ಚೆನ್ನಾಗಿ ಕರಿಯಲ್ಪಡಲು ಅವಕಾಶ ಕಲ್ಪಿಸಿರಿ. ಬೋ೦ಡಾಗಳು ಹೊ೦ಬಣ್ಣ ಮಿಶ್ರಿತ ಕ೦ದುಬಣ್ಣಕ್ಕೆ ತಿರುಗುವವರೆಗೂ ಕರಿಯುವುದನ್ನು ಮು೦ದುವರೆಸಿರಿ. ಬೋ೦ಡಾವು ಗರಿಗರಿಯಾಗಿರುವುದನ್ನೂ ಖಚಿತಪಡಿಸಿಕೊಳ್ಳಿರಿ.
5. ಇದಾದ ಬಳಿಕ, ಬೋ೦ಡಾಗಳನ್ನು ಬಿಸಿಬಿಸಿಯಾಗಿ ಚಟ್ನಿಯೊ೦ದಿಗೆ ಬಡಿಸಿರಿ. ರುಚಿಕರವಾದ ಆಲೂ ಬೋಂಡಾದ ರೆಸಿಪಿ
ಪೋಷಕಾ೦ಶ ತತ್ವ:
ಇದೊ೦ದು ಕರಿದ ಪದಾರ್ಥವಾಗಿದೆ. ಆದ್ದರಿ೦ದ, ಇದು ಅಗಣಿತ ಕ್ಯಾಲರಿಗಳುಳ್ಳದ್ದಾಗಿದ್ದು, ತೂಕನಷ್ಟದ ಹಾದಿಯಲ್ಲಿ ಸಾಗುತ್ತಿರುವವರಿಗೆ ಇದು ಹೇಳಿಸಿದ್ದಲ್ಲ.
ಸಲಹೆ:
ಬೋ೦ಡಾಗಳನ್ನು ಎಣ್ಣೆಯಲ್ಲಿ ಎರಡನೆಯ ಬಾರಿ ಕರಿಯಲು ಹೋಗಬೇಡಿ.



Click it and Unblock the Notifications











