Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡೈಮಂಡ್ ಬಿಸ್ಕೆಟ್ ಬೇಕಾ ನಿಮಗೆ?
ಇದನ್ನು ಒಮ್ಮೆ ಮಾಡಿ ಡಬ್ಬದಲ್ಲಿಟ್ಟು ವಾರಗಳವರೆಗೆ ಇಟ್ಟು ತಿನ್ನಬಹುದು, ಇದನ್ನು ಮಾಡುವ ವಿಧಾನವಂತೂ ತುಂಬಾ ಸರಳವಾಗಿದ್ದು ರೆಸಿಪಿ ನೋಡಿ ನಿಮ್ಮ ಮುಂದಿದೆ.
ಬೇಕಾಗುವ ಸಾಮಾಗ್ರಿಗಳು
ಮೈದಾ 1 ಕಪ್
ಸಕ್ಕರೆ ಅರ್ಧ ಕಪ್( ನಿಮಗೆ ಸಿಹಿ ಎಷ್ಟು ಬೇಕೋ ಅಷ್ಟು ಹಾಕಿ ಕೊಳ್ಳಿ)
ಬೆಣ್ಣೆ 5 ಚಮಚ
ಏಲಕ್ಕಿ ಅರ್ಧ ಚಮಚ
ನೀರು 1 ಕಪ್
ಎಣ್ಣೆ (ಡೀಪ್ ಫ್ರೈ ಮಾಡಲು)
ಮಾಡುವ ವಿಧಾನ:
* ಈ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಗೆ ಹಾಕಿ (ಎಣ್ಣೆ ಹಾಕಬೇಡಿ), ಸ್ವಲ್ಪವೇ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ.
* ನಂತರ ಅವುಗಳಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ. ನಂತರ ದಪ್ಪವಾಗಿ ಚಪಾತಿಗೆ ತಟ್ಟಿದ ರೀತಿ ತಟ್ಟಿ.
* ನಂತರ ತಟ್ಟಿದ ಮಿಶ್ರಣವನ್ನು ಚಾಕು ಬಳಸಿ, ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ. ಕತ್ತರಿಸುವಾಗ ತ್ರಿಭುಜಾಕಾರದಲ್ಲಿ ಕತ್ತರಿಸಿ.
* ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ.
* ಈಗ ಕಾದ ಎಣ್ಣೆಗೆ ಕತ್ತರಿಸಿದ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಅವುಗಳನ್ನು ಎಣ್ಣೆಯಿಂದ ತೆಗೆದು ಎಣ್ಣೆ ಹೋಗಲು ಪೇಪರ್ ಮೇಲೆ ಹಾಕಿ. ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಎರಡು ವಾರಗಳಿಗಿಂತಲೂ ಅಧಿಕ ಕಾಲ ಇಡಬಹುದು.



Click it and Unblock the Notifications

