Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗುಜರಾತ್‌ನ ಸಾಂಪ್ರದಾಯಕ ತಿಂಡಿ-ಡೋಕಲಾ
ಡೋಕಲಾ ಗುಜರಾತ್ ರಾಜ್ಯದ ಸಾಂಪ್ರದಾಯಕ ತಿಂಡಿಯಾಗಿದ್ದು ಇದನ್ನು ಕಟಲೆ ಹಿಟ್ಟಿನಿಂದ ತಯಾರಿಸಲಾಗುವುದು. ತುಂಬಾ ರುಚಿಕರವಾದ ಈ ತಿಂಡಿಯನ್ನು ಮಕ್ಕಳಿಗೆ ಬೆಳಗ್ಗಿನ ತಿಂಡಿಯಾಗಿ ಕೊಡಬಹುದು, ಅಲ್ಲದೆ ಇದನ್ನು ಸಾಯಾಂಕಾಲದ ಟೀ ಜೊತೆ ತಿನ್ನಲು ಕೂಡ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಕಡಲೆ ಹಿಟ್ಟು
* 1/2 ಕಪ್ ಮೊಸರು
* ಅರ್ಧ ಕಪ್ ನೀರು
* ಒಂದು ಚಮಚ ಶುಂಠಿ ಪೇಸ್ಟ್
* ಒಂದು ಚಮಚ ಹಸಿಮೆಣಸಿನ ಕಾಯಿ ಪೇಸ್ಟ್
* ಎರಡು ಚಮಚ ಎಣ್ಣೆ
* 1 ಚಮಚ ENO ಫ್ರೂಟ್ ಸಾಲ್ಟ್ (ಫುಡ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)
* ರುಚಿಗೆ ತಕ್ಕ ಉಪ್ಪು
ಒಗ್ಗರಣೆ:
* ಒಂದು ಚಮಚ ಸಾಸಿವೆ
* 1 ಚಮಚ ಜೀರಿಗೆ (ಆಯ್ಕೆ)
* 5-6 ಒಣ ಮೆಣಸಿನ ಕಾಯಿ
* ಒಂದು ಚಮಚ ಸಕ್ಕರೆ
* ಒಂದು ಚಮಚ ನಿಂಬೆರಸ
* ಕರಿಬೇವಿನ ಎಲೆ
* 3-4 ಚಮಚ ಎಣ್ಣೆ
ಅಲಂಕಾರಕ್ಕೆ :
* 2 ಚಮಚ ತುರಿದ ತೆಂಗಿನಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಎಣ್ಣೆ, ENO ಫ್ರೂಟ್ ಸಾಲ್ಟ್ ಹಾಕಿ ಸ್ಪೂನ್ ನಲ್ಲಿ ಮಿಶ್ರ ಮಾಡಬೇಕು. ನಂತರ ಮೊಸರು, ನೀರು, ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗಿರಬೇಕು.
2. ಪ್ರೆಶರ್ ಕುಕ್ಕರಿನಲ್ಲಿ ತಳಭಾಗದಲ್ಲಿ ನೀರು ಹಾಕಿ, ನಂತರ ಕುಕ್ಕರ್ ನಲ್ಲಿ ಹಿಡಿಸುವ ಪ್ಲೇಟ್ ಹಾಕಿ, ಅದರಲ್ಲಿ ಎಣ್ಣೆ ಸವರಿ ಅದರಲ್ಲಿ ಈ ಪೇಸ್ಟ್ ಅಥವಾ ಕಡಲೆ ಹಿಟ್ಟಿನ ಮಿಶ್ರಣ ಹಾಕಿ ಇಡಬೇಕು. ಅನ್ನ ಬೇಯಲು ಇಡುವ ಪಾತ್ರೆಯಾದರೂ ಸರಿ.
3. ಮಿಶ್ರಣವನ್ನು ಪಾತ್ರೆಯಲ್ಲಿ ಹಾಕುವಾಗ 2/3 ಭಾಗದಷ್ಟು ಮಾತ್ರ ಹಾಕಬೇಕು.
4. ಈಗ ಕುಕ್ಕರ್ ಬಾಯಿ ಮುಚ್ಚಿ 10-15 ನಿಮಿಷ ಬೇಯಿಸಬೇಕು. ಆದರೆ ಕುಕ್ಕರ್ ನಲ್ಲಿ ವಿಶಲ್ ಬರುವವರೆಗೆ ಕಾಯುವ ಅವಶ್ಯಕತೆಯಿಲ್ಲ. ನಂತರ ಗ್ಯಾಸ್ ಆಫ್ ಮಾಡಿ ಇನ್ನು ಒಂದು 5-10 ನಿಮಿಷ ಕುಕ್ಕರ್ ನ ಪ್ರಶರ್ ನಲ್ಲಿ ಬೇಯಲು ಬಿಡಬೇಕು. ನಂತರ ಪ್ಲೇಟ್ ಹೊರತೆಗೆದು ಬದಿಯಲ್ಲಿ ಇಡಿ.
ಒಗ್ಗರಣೆ:
1. ಈಗ ಬಾಣಲೆಯನ್ನು ಬಿಸಿಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಮಾಡುವಾಗ ಒಣ ಮೆಣಸಿನ ಕಾಯಿಯನ್ನು ಮುರಿದು ಹಾಕಬೇಕು. ನಂತರ ಉರಿಯನ್ನು ಆಫ್ ಮಾಡಬೇಕು.
2. ಈಗ ಈ ಒಗ್ಗರಣೆಗೆ ಸ್ವಲ್ಪ ನೀರು, ನಿಂಬೆ ರಸ, ಸಕ್ಕರೆ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಶ್ರ ಮಾಡಬೇಕು.
3. ಈಗ ಈ ರಸವನ್ನು ಚಮಚದಲ್ಲಿ ತೆಗೆದುಕೊಂಡು ಬೇಯಿಸಿಟ್ಟ ಡೋಕಲಾ ಮೇಲೆ ಸುರಿದು ಸ್ವಲ್ಪ ಹೊತ್ತು ಹಾಗೇ ಬಿಡಬೇಕು.
4. ನಂತರ ಅದರ ಮೇಲೆ ತುರಿದ ತೆಂಗಿನ ಕಾಯಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ, ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಡೋಕಲಾ ತಿಂಡಿ ರೆಡಿ.



Click it and Unblock the Notifications
