Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಚೀಸ್ ಮತ್ತು ಜೋಳದ ಬೋಂಡಾ ರೆಸಿಪಿ
ಚಳಿಗಾಲದಲ್ಲಿ ಕುರುಕಲು ತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತೇವೆ. ಟೀ ಜೊತೆ ಬೋಂಡಾದಂತಹ ತಿಂಡಿಯನ್ನು ತಿನ್ನಬೇಕೆಂದು ಅನಿಸುವುದು ಸಹಜ ತಾನೇ? ಈರುಳ್ಳಿ ಪಕೋಡ, ಆಲೂಗೆಡ್ಡೆ ಬೋಂಡಾ ಈ ರೀತಿಯ ತಿಂಡಿಗಳನ್ನು ಸಾಮಾನ್ಯವಾಗಿ ತಯಾರಿಸುತ್ತಿರುತ್ತೇವೆ.
ಆದರೆ ಎಂದಾದರೂ ಈ ಚೀಸ್ ಮತ್ತು ಜೋಳ ಹಾಕಿ ತಯಾರಿಸಿದ ಬೋಂಡಾದ ರುಚಿ ನೋಡಿದ್ದೀರಾ? ಇಲ್ಲ ಅಂದರೆ ಈ ತಿಂಡಿಯನ್ನು ಮನೆಯಲ್ಲಿಯೇ ಮಾಡಿ ರುಚಿಯನ್ನು ಸವಿಯಬಹುದು.ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಜೋಳ 1 ಕಪ್ (ಬೇಯಿಸಿದ್ದು)
* ಚೀಸ್ 1 ಕಪ್
* ದುಂಡು ಮೆಣಸಿನ ಕಾಯಿ ಅರ್ಧ ಕಪ್
* ಆಲೂಗೆಡ್ಡೆ 2 (ಬೇಯಿಸಿ ಹಿಸುಕಿದ್ದು)
* ಹಸಿ ಮೆಣಸಿನಕಾಯಿ 2(ಕತ್ತರಿಸಿದ್ದು)
* ಜೋಳದ ಪುಡಿ 1 ಚಮಚ
* ಮೈದಾ ಹಿಟ್ಟು 4 ಚಮಚ
* ಕರಿಮೆಣಸಿನ ಪುಡಿ 1 ಚಮಚ
* ಖಾರದ ಪುಡಿ 1 ಚಮಚ
* ಬ್ರೆಡ್ ಚೂರುಗಳು ಅರ್ಧ ಕಪ್
* ನೀರು 1 ಕಪ್
* ಎಣ್ಣೆ
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಬೇಯಿಸಿದ ಜೋಳ, ಚೀಸ್, ಆಲೂಗೆಡ್ಡೆ ಮತ್ತು ದುಂಡು ಮೆಣಸಿನಕಾಯಿ ಹಾಕಿ ಮಿಶ್ರಣ ಮಾಡಬೇಕು.
2. ಅದಕ್ಕೆ ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
3. ಮತ್ತೊಂದು ಚಿಕ್ಕ ಬಟ್ಟಲಿನಲ್ಲಿ ಮೈದಾ ಹಾಗೂ ಜೋಳದ ಹಿಟ್ಟನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಬೇಕು. ಅದಕ್ಕೆ ಚಿಟಕೆಯಷ್ಟು ಉಪ್ಪು ಮತ್ತು ಖಾರದ ಪುಡಿ ಹಾಕಬೇಕು.
4. ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.
5. ಈಗ ಉಂಡೆಯನ್ನು ಮೈದಾ ಮಿಶ್ರಣದಲ್ಲಿ ಅದ್ದಿ , ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಹಾಕಿ ಕಂಡು ಬಣ್ಣ ಬರುವವರೆಗೆ ಕರಿಯಿರಿ. ಇದನ್ನು ಬಿಸಿ-ಬಿಸಿ ಟೀ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
