Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಉಳಿದ ಚಪಾತಿಯಿಂದ ಹೆಲ್ತಿ ಸ್ನ್ಯಾಕ್ಸ್-ಚಪಾತಿ ರೋಲ್
ಬೆಳಗ್ಗೆ ಚಪಾತಿ ಮಾಡಿದ್ದು ಉಳಿದಿದ್ದರೆ ಅವುಗಳಿಂದ ಸಂಜೆಗೆ ರುಚಿಕರವಾದ ಚಪಾತಿ ರೋಲ್ ಸ್ನ್ಯಾಕ್ಸ್ ಮಾಡಬಹುದು. ಈ ಚಪಾತಿ ರೋಲ್ ಮಕ್ಕಳಿಗಂತೂ ತುಂಬಾ ಇಷ್ಟವಾಗುವುದು.
ಈ ರೋಲ್ ಮಾಡುವುದೇನು ಕಷ್ಟವಲ್ಲ, ಚಪಾತಿ ಒಳಗೆ ತುಂಬಲು ಮಸಾಲೆ ರೆಡಿ ಮಾಡಿದರೆ ಸಾಕು, ಬನ್ನಿ ಸಂಜೆ ಟೀಗೆ ಚಪಾತಿ ರೋಲ್ ರೆಡಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಚಪಾತಿ 4
ಈರುಳ್ಳಿ
ಈರುಳ್ಳಿ 2 ಎಸಳು
ಬೀನ್ಸ್ 5-6
ಕ್ಯಾರೆಟ್ 1, ಜೋಳ ಇದ್ದರೆ ಅರ್ಧ ಕಪ್ ಜೋಳ
ಎಲೆಕೋಸು ಅರ್ಧ ಕಪ್
ಖಾರದ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಬೆಳ್ಳುಳ್ಳಿ 2 ನಿಮಿಷ ಹುರಿಯಿರಿ, ನಂತರ, ತರಕಾರಿ, ಜೋಳ ಹಾಕಿ 3-4 ನಿಮಿಷ ಹುರಿಯಿರಿ.
* ಈಗ ಕೊತ್ತಂಬರಿ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ 10 ನಿಮಿಷ ಬೇಯಿಸಿ.
* ಈ ರೀತಿ ಬೇಯಿಸುವಾಗ ಆಗಾಗ ತಳ ಹಿಡಿಯದಿರಲು ಆಗಾಗ ಸೌಟ್ ನಿಂದ ಆಡಿಸಿ.
* ಈಗ ಗಟ್ಟಿಯಾದ ಮಸಾಲೆಯನ್ನು ಚಪಾತಿ ಒಳಗೆ ಹಾಕಿ ರೋಲ್ ಮಾಡಿ, ಅದನ್ನು silver foilನಲ್ಲಿ ಸುತ್ತಿದರೆ ಚಪಾತಿ ರೋಲ್ ರೆಡಿ.



Click it and Unblock the Notifications
