Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಾಟೇಜ್ ಚೀಸ್ ಕಟ್ಲೇಟ್ ರೆಸಿಪಿ
ಸಾಯಂಕಾಲದ ತಿಂಡಿಗೆ ಕಟ್ಲೇಟ್ ನಂತಹ ತಿಂಡಿ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಕಟ್ಲೇಟ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಅದರಲ್ಲಿ ತರಕಾರಿ ಕಟ್ಲೇಟ್ ತಯಾರಿಸಲು ಸ್ವಲ್ಪ ಸಮಯ ಹಿಡಿಯುತ್ತದೆ, ಏಕೆಂದರೆ ತರಕಾರಿಯನ್ನು ಬೇಯಿಸಿ ನಂತರ ತಯಾರಿಸಬೇಕು.
ಆದರೆ ಚೀಸ್ ಕಟ್ಲೇಟ್ ಅನ್ನು ಸುಲಭದಲ್ಲಿ ತಯಾರಿಸಬಹುದು. ಕಾಟೇಜ್ ಚೀಸ್ ಬಳಸಿ ತಯಾರಿಸುವ ಕಟ್ಲೇಟ್ ನ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಕಾಟೇಜ್ ಚೀಸ್ 2-3 ಕಪ್
* ಶುಂಠಿ ಪೇಸ್ಟ್ ಒಂದೂವರೆ ಚಮಚ
* ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* ಹಸಿ ಮೆಣಸಿನ ಕಾಯಿ 2
* ಚೀಸ್ 4-5 ಚಮಚ
* ಮೊಟ್ಟೆ 1
* ಬ್ರೆಡ್ ಚೂರುಗಳು 1 ಕಪ್
* ಎಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಾಟೇಜ್ ಚೀಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಕೈಯಿಂದ ಚೆನ್ನಾಗಿ ಹಿಸುಕಬೇಕು. ನಂತರ ಶುಂಠಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಹಸಿಮೆಣಸಿನಕಾಯಿ ಹಾಗೂ ಕತ್ತರಿಸಿದ ಈರುಳ್ಳಿ, ಮೊಟ್ಟೆ, ಬ್ರೆಡ್ ಚೂರುಗಳು, ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಮಿಶ್ರಣ ಮಾಡಬೇಕು.
2. ಈಗ ಚೀಸ್ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಬೇಕು. ಈಗ ಅದರಿಂದ ಉಂಡೆಕಟ್ಟಿ ಕಟ್ಲೇಟ್ ಗೆ ತಟ್ಟುವ ರೀತಿ ತಟ್ಟಬೇಕು.
3. ಈಗ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಅರ್ಧದಷ್ಟು ಎಣ್ಣೆ ಕಾಯಿಸಬೇಕು, ಈಗ ಕಾದ ಎಣ್ಣೆಗೆ ಕಟ್ಲೇಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದರೆ ರುಚಿಕರವಾದ ಕಟ್ಲೇಟ್ ರೆಡಿ.



Click it and Unblock the Notifications
