Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೊಸರುಚಿ: ಜೋಳದ ಚಿಪ್ಸ್ ರೆಸಿಪಿ
ಜೋಳದ ಚಿಪ್ಸ್ ರುಚಿ ನೋಡಿದ್ದೀರಾ? ಸಾಮಾನ್ಯವಾಗಿ ಪಾಪ್ ಕಾರ್ನ್, ಸುಟ್ಟ ಜೋಳ, ಬೇಯಿಸಿದ ಜೋಳ, ಜೋಳದ ರೊಟ್ಟಿ ಹೀಗೆ ಅನೇಕ ಬಗೆಯಲ್ಲಿ ಜೋಳವನ್ನು ರುಚಿ ನೋಡಿರುತ್ತೇವೆ. ಜೋಳದಿಂದ ಹೊಸ ರುಚಿ ನೋಡಲು ಬಯಸಿದರೆ ಇಲ್ಲಿದೆ ನೋಡಿ ಜೋಳದ ಚಿಪ್ಸ್ ರೆಸಿಪಿ. ಇದನ್ನು ತಯಾರಿಸುವ ವಿಧಾನ ಸುಲಭವಾಗಿದ್ದು , ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು:
* 100 ಗ್ರಾಂ ಜೋಳದ ಹಿಟ್ಟು
* 50ಗ್ರಾಂ ಮೈದಾ ಹಿಟ್ಟು
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಬಡಿಸಲು (for serving):
* 2 1/4 ಕಪ್ ಜೋಳದ ಚಿಪ್ಸ್
* ಮುಕ್ಕಾಲು ಕಪ್ ಸಾಲ್ಸಾ ಡಿಪ್
* ಕತ್ತರಿಸಿದ ಹಸಿಮೆಣಸಿನ ಕಾಯಿ 2
* 3 ಚಮಚ ತುರಿದ ಚೀಸ್
* ರುಚಿಗೆ ತಕ್ಕ ಉಪ್ಪು
ಜೋಳದ ಚಿಪ್ಸ್ ತಯಾರಿಸುವ ವಿಧಾನ:
1. ಜೋಳ ಮತ್ತು ಮೈದಾದ ಹಿಟ್ಟಿಗೆ ಒಂದು ಚಮಚ ಬಿಸಿ ಎಣ್ಣೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು.
2. ನಂತರ ಬಿಸಿ ನೀರು ಹಾಕಿ ಹಿಟ್ಟನ್ನು ಹದವಾಗಿ ಕಲೆಸಬೇಕು. ಹಿಟ್ಟು ನೀರಾಗಬಾರದು. ಹದವಾಗಿರಬೇಕು.
3. ನಂತರ ಹಿಟ್ಟಿನಿಂದ ತೆಳ್ಳಗಿನ ರೋಲ್ ರೀತಿ ಮಾಡಿ ಸುರುಳಿಯಾಕಾರದಲ್ಲಿ ಮಾಡಿ ಕುದಿಯುತ್ತಿರುವ ಎಣ್ಣೆಗೆ ಹಾಕಬೇಕು.
4. ಚಿಪ್ಸ್ ಕಂದು ಬಣ್ಣ ಬರುವಾಗ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಉಪ್ಪು ನೀರನ್ನು ಚಿಮುಕಿಸಬೇಕು.
ಈಗ ತಯಾರದ ಚಿಪ್ಸ್ ಅನ್ನು ಬಡಿಸುವ ಮುನ್ನ ಈ ರೀತಿ ಮಾಡಿ:
1. ಚಿಪ್ಸ್ ಅನ್ನು ತಟ್ಟೆಯಲ್ಲಿ ಹಾಕಬೇಕು.
2. ನಂತರ ಬಡಿಸುವ ಸ್ವಲ್ಪ ಮೊದಲು ಸಾಲ್ಸಾ ಡಿಪ್ (salsa dip) ಅನ್ನು ಚಿಪ್ಸ್ ಮೇಲೆ ಹಾಕಿ ಕತ್ತರಿಸಿದ ಹಸಿ ಮೆಣಸಿನಕಾಯಿಯನ್ನು ಉದುರಿಸಬೇಕು.
3. ಚೀಸ್ ನಲ್ಲಿ ಚಿಟಿಕೆಯಷ್ಟು ಉಪ್ಪು ಹಾಕಿ ಬಿಸಿ ಮಾಡಿ ಅದನ್ನು ಕಾರ್ನ್ ಚಿಪ್ಸ್ ಮೇಲೆ ಹಾಕಬೇಕು, ನಂತರ ಗ್ರಿಲ್ ನಲ್ಲಿ 2-3 ಸೆಕೆಂಡ್ ಇಟ್ಟು ತೆಗೆದರೆ ಬಾಯಲ್ಲಿ ನೀರೂರಿಸುವ ರುಚಿಯ ಕಾರ್ನ್ ಚಿಪ್ಸ್ ರೆಡಿ.
ಸಲಹೆ: ಗ್ರಿಲ್ ಇಲ್ಲದಿದ್ದರೆ ಗ್ಯಾಸ್ ಮೇಲೆ 2 ಸೆಕೆಂಡ್ ಬಿಸಿ ಮಾಡಿದರೆ ಸಾಕು. ಈ ಚಿಪ್ಸ್ ಅನ್ನು ಬಿಸಿಬಿಸಿಯಾಗಿ ತಿನ್ನಬೇಕು.



Click it and Unblock the Notifications
