Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾರ್ನ್ ಅಂಡ್ ಚೀಸ್ ಬಾಲ್ ರೆಸಿಪಿ
ಇಲ್ಲಿ ನಾನು ಕಾರ್ನ್ ಅಂಡ್ ಚೀಸ್ ಬಾಲ್ ಎಂಬ ಸ್ಪೆಷಲ್ ರೆಸಿಪಿ ಪರಿಚಯಿಸುತ್ತಿದ್ದೇನೆ. ನಾನು ಮೊದಲ ಸಲ ರೆಸಿಪಿ ಮಾಡಿದಾಗ ಮನೆಯಲ್ಲಿ ಎಲ್ಲರಿಗೂ ತುಂಬಾ ಇಷ್ಟವಾಯಿತು, ಆ ದಿನ ಮಗ, ಗಂಡ ಎಲ್ಲಾ ನನ್ನ ಹೊಗಳಿದ್ದೇ-ಹೊಗಳಿದ್ದು, ಅಲ್ಲಿಂದ ತುಂಬಾ ಸಲ ಈ ಸ್ನ್ಯಾಕ್ಸ್ ತಯಾರಿಸಿದ್ದೇನೆ.
ಈ ರುಚಿಕರವಾದ ಸ್ಪೆಷಲ್ ಸ್ನ್ಯಾಕ್ಸ್ ನ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನೀವು ಇದನ್ನು ಟ್ರೈ ಮಾಡಿ, ಖಂಡಿತ ಇದರ ರುಚಿ ನಿಮಗೆ ಇಷ್ಟವಾಗುವುದು.

ಬೇಕಾಗುವ ಪದಾರ್ಥಗಳು
ಜೋಳ 1 ಕಪ್
ಪನೀರ್ 100 ಗ್ರಾಂ
ಚೀಸ್ 3/4 ಕಪ್
ಜೋಳದ ಹಿಟ್ಟು 2 ಚಮಚ
ಮೈದಾ 1/4 ಕಪ್
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 1
ಕೊತ್ತಂಬರಿ ಸೊಪ್ಪು 2 ಚಮಚ
ಅಡುಗೆ ಸೋಡಾ 1/2 ಚಮಚ
ಹಾಲು 1/4 ಕಪ್
ಬ್ರೆಡ್ ಚೂರು 1/4 ಕಪ್
ಡೀಪ್ ಫ್ರೈ ಮಾಡಲು ಎಣ್ಣೆ
ಮಾಡುವ ವಿಧಾನ:
ಮಾಡುವ ವಿಧಾನ:
* ಜೋಳವನ್ನು ಬೇಯಿಸಿ. ನಂತರ ನೀರನ್ನು ಬಸಿದು ತರಿತರಿಯಾಗಿ ರುಬ್ಬಿ.
* ಪನೀರ್ ಅನ್ನು ತರಿತರಿಯಾಗಿ ತುರಿಯಿರಿ. ಪನೀರ್ ಬದಲು ಆಲೂಗಡ್ಡೆಯನ್ನು ತುರಿದು ಹಾಕಬಹುದು.
* ಈಗ ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ರುಬ್ಬಿದ ಜೋಳ, ಪನೀರ್, ಚೀಸ್, ಜೋಳದ ಹಿಟ್ಟು, ಮೈದಾ, ರುಚಿಗೆ ತಕ್ಕ ಉಪ್ಪು, ಸಕ್ಕರೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ.
* ನಂತರ ಇವುಗಳಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ. ನಂತರ 20 ನಿಮಿಷ ಫ್ರಿಜ್ ನಲ್ಲಿಡಿ.
* ಉಂಡೆಯನ್ನು ಹಾಲಿನಲ್ಲಿ ಅದ್ದಿ, ನಂತರ ಬ್ರೆಡ್ ಚೂರುನಲ್ಲಿ ಹೊರಳಾಡಿಸಿ ಮತ್ತೆ ಫ್ರಿಜ್ ನಲ್ಲಿ 15 ನಿಮಿಷ ಇಡಿ.
* ಈಗ ಉಂಡೆಗಳನ್ನು ಫ್ರಿಜ್ ನಿಂದ ತೆಗೆದು ರೂಮಿನ ಉಷ್ಣತೆಯಲ್ಲಿ ಇಡಿ.
* ನಂತರ ಡೀಪ್ ಫ್ರೈ ಮಾಡಲು ಪ್ಯಾನ್ ಗೆ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ಎಣ್ಣೆ ಕಾದಾಗ ಉಂಡೆಗಳನ್ನು ಹಾಕಿ, ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಕಾರ್ನ್ ಅಂಡ್ ಚೀಸ್ ಬಾಲ್ ರೆಡಿ.
* ಕರಿದ ಉಂಡೆ ಬಿಸಿ-ಬಿಸಿ ಇರುವಾಗಲೇ ಟೊಮೆಟೊ ಕೆಚಪ್ ಜೊತೆ ಸವಿಯಿರಿ.



Click it and Unblock the Notifications
