Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಸ್ನ್ಯಾಕ್ಸ್ ಡಬ್ಬಿಗೆ ಆರೋಗ್ಯಕರ ಚಾಕೋ ಕುಕ್ಕೀಸ್
ಚಿಕ್ಕ ಮಕ್ಕಳಿಗೆ ಗಲಾಟೆ ಮಾಡಬೇಡಿ ಎಂದು ಹೇಳಿ ತಿಂಡಿ ಲಂಚ ಕೊಟ್ಟರೆ ಸಾಕು ಸ್ವಲ್ಪ ಹೊತ್ತಿನವರೆಗೆ ಸುಮ್ಮನೆ ಕೂರುತ್ತವೆ. ಹೀಗೆ ಮಕ್ಕಳಿಗೆ ಕೊಡುವ ತಿಂಡಿಗಳನ್ನು ಹೊರಗಡೆಯಿಂದ ತರುವುದಕ್ಕಿಂತ, ಸಮಯ ಸಿಕ್ಕಿದಾಗ ಮನೆಯಲ್ಲಿಯೇ ತಯಾರಿಸುವುದು ಒಳ್ಳೆಯದು. ಈಗ ಮೈಕ್ರೋವೇವ್, ಓವನ್ ಬಂದಿರುವುದರಿಂದ ಅಡುಗೆಯನ್ನು ಸುಲಭದಲ್ಲಿ ತಯಾರಿಸಬಹುದು. ಮನೆಯಲ್ಲಿ ಮಾಡುವ ಅಡುಗೆಯ ಮತ್ತೊಂದು ಪ್ರಯೋಜನವೆಂದರೆ ಆರೋಗ್ಯಕರವಾಗಿ ತಯಾರಿಸಬಹುದು. ಇವತ್ತು ಕುಕ್ಕೀಸ್ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
* ಮುಕ್ಕಾಲು ಕಪ್ ಗೋಧಿ ಹಿಟ್ಟು
* ಒಂದು ಚಮಚ ಅಡುಗೆ ಸೋಡಾ
* ಅರ್ಧ ಕಪ್ ಸಕ್ಕರೆ
* ಅರ್ಧ ಕಪ್ ಬ್ರೌನ್ ಶುಗರ್
* ಅರ್ಧ ಕಪ್ ಬೆಣ್ಣೆ
* ಒಂದು ಚಮಚ ವೆನಿಲ್ಲಾ ರಸ
* ಒಂದು ಮೊಟ್ಟೆ ( ಸ್ವಲ್ಪ ದೊಡ್ಡ ಮೊಟ್ಟೆ ಇರಲಿ)
* ಒಂದೂವರೆ ಕಪ್ ಓಟ್ಸ್ ( ಬೇಯಿಸಿರಬಾರದು)
* ಅರ್ಧ ಕಪ್ ಒಣದ್ರಾಕ್ಷಿ
* ಒಂದು ಕಪ್ ಡಾರ್ಕ್ ಚಾಕಲೇಟ್ ಚಿಪ್ಸ್ ಮತ್ತು ಕರೆಂಟ್ (currants)
ಚಾಕಲೇಟ್ ಕುಕ್ಕೀಸ್ ತಯಾರಿಸುವ ವಿಧಾನ:
1. ಮೊದಲು ಓವನ್ ಅನ್ನು 175 ಡಿಗ್ರಿ ಉಷ್ಣತೆಗೆ ಬಿಸಿ ಮಾಡಿಡಬೇಕು.
2. ಬೇಯಿಸುವ ಶೀಟ್ ಗೆ ಎಣ್ಣೆ ಅಥವಾ ತುಪ್ಪ ಸವರಬೇಕು.
3. ಈಗ ಗೋಧಿ ಹಿಟ್ಟು, ಅಡುಗೆ ಸೋಡಾ, ಉಪ್ಪು, ಸಕ್ಕರೆ, ಬ್ರೌನ್ ಶುಗರ್, ಬೆಣ್ಣೆ, ಒಣ ದ್ರಾಕ್ಷಿ, ಮೊಟ್ಟೆ ಹಾಕಿ ಮಿಶ್ರ ಮಾಡಬೇಕು.
4. ನಂತರ ಬೇಯಸದ ಓಟ್ಸ್ ಅನ್ನು ಗೋಧಿ ಮಿಶ್ರದ ಜೊತೆ ಹಾಕಿ ಬೆರೆಸಬೇಕು.
5. ಚೆನ್ನಾಗಿ ಮಿಶ್ರ ಮಾಡಿದ ನಂತರ ಕರೆಂಟ್ (currants) ಮತ್ತು ಚಾಕಲೇಟ್ ಚಿಪ್ಸ್ ಹಾಕಿ ಕಲೆಸಬೇಕು. ನಂತರ ವೆನಿಲ್ಲಾ ರಸ ಸೇರಿಸಿ ಮತ್ತೊಮ್ಮೆ ಕಲೆಸಬೇಕು.
6. ನಂತರ ಈ ಮಿಶ್ರಣದಿಂದ ಒಂದೊಂದು ಚಮಚ ಮಿಶ್ರಣ ತೆಗೆದುಕೊಂಡು ಅದನ್ನು ಬೇಯಿಸಬೇಕಾದ ಪಾತ್ರೆಯಲ್ಲಿ ಹಾಕಬೇಕು. ಮಿಶ್ರಣವನ್ನು ಬೇಯಿಸುವ ಶೀಟ್ ನಲ್ಲಿ ಒಂದಕ್ಕೊಂದು ತಾಗುವಂತೆ ಇಡಬಾರದು.
7. ಕುಕ್ಕೀಸ್ ಗೆ ಮಿಶ್ರಣ ಕಲಿಸುತ್ತಿರುವಾಗ ಓವನ್ ಅನ್ನು ಬಿಸಿ ಮಾಡಲಿಕ್ಕೆ ಇಟ್ಟು 175 ಡಿಗ್ರಿ ಬಿಸಿಯಾದ ನಂತರ ಆಫ್ ಮಾಡಿಡಬೇಕು ಎಂದು ಮೊದಲೇ ಹೇಳಿದ್ದೇವೆ. ಈಗ ಬೇಯಿಸುವ ಶೀಟ್ ಇಟ್ಟು 12-14 ನಿಮಿಷ ಬೇಯಿಸಿದರೆ ಮಿಶ್ರ ಕಂದು ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಮಾಡಿದರೆ ರುಚಿಕರವಾದ ಕುಕ್ಕೀಸ್ ರೆಡಿ.
ಈ ರೀತಿ ತಯಾರಿಸಿದ ಕುಕ್ಕೀಸ್ ಅನ್ನು ಡಬ್ಬದಲ್ಲಿ ಹಾಕಿಟ್ಟರೆ ಶಾಲಾ ಪ್ರಾರಂಭವಾದಾಗ ಮಕ್ಕಳ ತಿಂಡಿ ಡಬ್ಬದಲ್ಲಿ ತುಂಬಿ ಕಳುಹಿಸಬಹುದು. ಅಲ್ಲದೆ ಈ ಕುಕ್ಕೀಸ್ ಸಾಯಾಂಕಾಲ ಟೀ ಜೊತೆ ತಿನ್ನಲು ಕೂಡ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
