Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿರೋಟಿ ರವೆ ಶ್ಯಾವಿಗೆ-ಸ್ನ್ಯಾಕ್ಸ್ ರೆಸಿಪಿ
ಶ್ಯಾವಿಗೆ, ಉಪ್ಪಿಟ್ಟು ಈ ಅಡುಗೆಗಳ ಸ್ಪೆಷಾಲಿಟಿ ಅಂದರೆ ಬೆಳಗ್ಗೆ ಮಾಡಿದರೆ ಬ್ರೇಕ್ ಫಾಸ್ಟ್, ಅದೇ ಅದನ್ನು ಸಂಜೆ ಹೊತ್ತಿಗೆ ಮಾಡಿದರೆ ಸ್ನ್ಯಾಕ್ಸ್. ಸಾಮಾನ್ಯವಾಗಿ ನಾವು ಸಂಜೆ ಸ್ನ್ಯಾಕ್ಸ್ ಗೆ ಹೆಚ್ಚಾಗಿ ಬೋಂಡಾ, ಬಜ್ಜಿ ಎಂದು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುತ್ತೇವೆ. ಬಾಯಿಗೆ ರುಚಿಯೆಂದು ಅವುಗಳನ್ನು ತಿಂದು ಮೈ ತೂಕ ಹೆಚ್ಚಾದ ಬಳಿಕ ಅವಸ್ಥೆ ಪಡುವ ಬದಲು, ಈ ರೀತಿಯ ಕಡಿಮೆ ಕ್ಯಾಲೋರಿಗಳ ಆಯ್ಕೆ ಬೆಸ್ಟ್.
ಮೈ ತೂಕ ಹೆಚ್ಚಾಗಬಾರದು ಆದರೆ ಡಯಟ್ ಮಾಡಲಾರೆ ಎಂಬ ಪಾಲಿಸಿ ಪಾಲಿಸುವವರು ನೀವಾದರೆ ಈ ಚಿರೋಟಿ ರವೆ ಶ್ಯಾವಿಗೆ ಖಂಡಿತ ನಿಮಗಿಷ್ಟವಾಗುವುದು. ಮಾಡಲು ತುಂಬಾ ಸರಳವಾದ ಈ ಚಿರೋಟಿ ರವೆ ಶ್ಯಾವಿಗೆಯ ರೆಸಿಪಿ ನೋಡೋಣವೇ?

ಬೇಕಾಗಿರುವ ಸಾಮಾಗ್ರಿಗಳು
ಚಿರೋಟಿ ರವೆ 1ಕಪ್
ನೀರು 1ಕಪ್
ಉಪ್ಪು ರುಚಿಗೆ
ತಯಾರಿಸುವ ವಿಧಾನ:
* 1ಕಪ್ ಚಿರೋಟಿ ರವೆಗೆ 1ಕಪ್ ನೀರು,1ಚಮಚ ಎಣ್ಣೆ,ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿ ನಂತರ ಇಡ್ಲಿ ತಟ್ಟೆಗೆ ಹಾಕಿ 10ರಿಂದ 15 ನಿಮಿಷ ಬೇಯಿಸಿ.
* ನಂತರ ಶ್ಯಾವಿಗೆ ಒರಳಿಗೆ ಹಾಕಿ ಒತ್ತಿದರೆ ಶ್ಯಾವಿಗೆ ಸಿದ್ದ, ಇದನ್ನು ಕಾಯಿಹಾಲಿನ್ನೊಂದಿಗೂ ತಿನ್ನ ಬಹುದು ಅಥವಾ ಖಾರ ಇಷ್ಟ ಪಡುವವರು ನಿಂಬೆ ಹಣ್ಣಿನ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿದಂತೆ ಮಾಡಿ ಶ್ಯಾವಿಗೆ ಹಾಕಿ ಕಲೆಸಿದರೆ ಶ್ಯಾವಿಗೆ ಚಿತ್ರಾನ್ನ ಸಿದ್ದ . ಮಧುಮೇಹಿಗಳು ಸಹ ಸವಿಯಬಹುದು .



Click it and Unblock the Notifications
