Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಇದು ಚಪಾತಿಯಲ್ಲ, ಚಪಾತಿ ಕೇಸಡಿಯ!

ಬೇಕಾಗುವ ಸಾಮಗ್ರಿಗಳು:
1. ಚಪಾತಿ ಹಿಟ್ಟು
2. ಒಂದು ಈರುಳ್ಳಿ
3. 1 ಕಪ್ ಪಾಲಾಕ್ ಸೊಪ್ಪು
4. 1 ಕಪ್ ತುರಿದ ಚೀಸ್
5. ಹಸಿ ಮೆಣಸಿನಕಾಯಿ 2-3
6. ಎಣ್ಣೆ
7. ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಈರುಳ್ಳಿಯನ್ನು ಸಿಪ್ಪೆ ಸುಲಿದು ಉದ್ದುದ್ದವಾಗಿ ಕತ್ತರಿಸಬೇಕು.
2. ಪಾಲಾಕ್ ಸೊಪ್ಪನ್ನು ತೊಳೆದು ಚಿಕ್ಕಾದಾಗಿ ಕತ್ತರಿಸಬೇಕು.
3. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಬೇಕು.
ಈರುಳ್ಳಿ ಮತ್ತು ಪಾಲಾಕ್ ಸಬ್ಜಿ:
1. ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
2. ನಂತರ ಹಸಿಮೆಣಸಿನ ಕಾಯಿ ಹಾಕಿ, ಪಾಲಾಕ್ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಬೇಕು. ಬೆಂದ ಮೇಲೆ ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ಹಾಕಿಡಬೇಕು.
ಚಪಾತಿ ಕೇಸಡಿಯ:
1. ಚಪಾತಿಯನ್ನು ಮಾಮೂಲಿ ತಟ್ಟುವ ರೀತಿ ತಟ್ಟಿ ತವಾದಲ್ಲಿ ಹಾಕಿ ಚಪಾತಿಯ ಎರಡೂ ಬದಿಯನ್ನು ಬೇಯಿಸಬೇಕು. ನಂತರ ಸ್ವಲ್ಪ ಪಾಲಾಕ್ ಮತ್ತು ಈ ಈರುಳ್ಳಿಯ ಸಬ್ಜಿ ತೆಗೆದುಕೊಂಡು ಅದನ್ನು ಚಪಾತಿಯ ಒಂದು ಬದಿಯಲ್ಲಿ ಹಾಕಿ, ಸ್ವಲ್ಪ ತುರಿದ ಚೀಸ್ ಹಾಕಿ ಚಪಾತಿಯನ್ನು ಮಡಚಬೇಕು. ಹೀಗೆ ಮಡಚಿದ ಚಪಾತಿಯನ್ನು 10 ರಿಂದ 15 ಸೆಕೆಂಡ್ ಬೇಯಿಸಬೇಕು.
2. ಚೀಸ್ ಕರಗಿದ ನಂತರ ತೆಗೆದು ಚಪಾತಿಯ ತುದಿಗಳನ್ನು ಕತ್ತರಿಸಬೇಕು. ಈಗ ತಯಾರಾದ ಚಪಾತಿಕೇಸಡಿಯವನ್ನು ಬಿಸಿಯಾಗಿರುವವಾಗಲೇ ಸಾಸ್ ಜೊತೆ ತಿಂದರೆ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
