Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯಕ್ಕೆ ಒಳ್ಳೆಯದು ಗೋಡಂಬಿ ಪಕೋಡ
ಹೊರಗಡೆ ಕುರುಕಲು ತಿಂಡಿಗಳನ್ನು ತಿಂದು ಆರಗ್ಯ ಹಾಳು ಮಾಡುವ ಬದಲು ಮನೆಯಲ್ಲಿಯೆ ಆರೋಗ್ಯಕರ ತಿಂಡಿ ತಯಾರಿಸಿ ತಿನ್ನುವುದು ಒಳ್ಳೆಯದು. ಅಂತಹ ಆರೋಗ್ಯಕರ ತಿಂಡಿಗಳಲ್ಲಿ ಬಾದಾಮಿ ಪಕೋಡ ಕೂಡ ಒಂದು. ಇದನ್ನು ಚಹಾ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇವತ್ತು ನಾವು ಬಾದಾಮಿ ಪಕೋಡ ಮಾಡುವ ಸುಲಭ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಗೋಡಂಬಿ
* 1 ಕಪ್ ಕಡಲೆ ಹಿಟ್ಟು
* 1 ಚಮಚ ಕೆಂಪು ಮೆಣಸಿನ ಪುಡಿ
* ಚಿಟಿಕೆಯಷ್ಟು ಅಜ್ವೈನ್
* ರುಚಿಗೆ ತಕ್ಕ ಉಪ್ಪು
* ಚಿಟಿಕೆಯಷ್ಟು ಸೋಡಾ
* ಎಣ್ಣೆ
* 1 ಚಮಚ ತುಪ್ಪ
* 1/2 ಕಪ್ ನೀರು
ತಯಾರಿಸುವ ವಿಧಾನ:
1. ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಬಟ್ಟಲಿನಲ್ಲಿ ಹಾಕಿ ಬದಿಯಲ್ಲಿ ಇಡಬೇಕು.
2. ಮತ್ತೊಂದು ಬಟ್ಟಲಿನಲ್ಲಿ ಕಡಲೆಹಿಟ್ಟು, ರುಚಿಗೆ ತಕ್ಕ ಉಪ್ಪು, ಕೆಂಪು ಮೆಣಸಿನ ಕಾಯಿ ಪುಡಿ, ಚಿಟಿಕೆಯಷ್ಟು ಸೋಡಾ ಮತ್ತು ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
3. ಈಗ ಹುರಿದ ಗೋಡಂಬಿಯನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಅದರಿಂದ ಪಕೋಡಕ್ಕೆ ಉಂಡೆ ಕಟ್ಟಬೇಕು.
4. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕುದಿಸಿ, ಅದಕ್ಕೆ ಪಕೋಡ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರ ಮತ್ತು ಆರೋಗ್ಯಕರ ಪಕೋಡ ರೆಡಿ.



Click it and Unblock the Notifications
