Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರುಚಿಕರವಾದ ಬ್ರೆಡ್ ರೋಲ್ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್ ತುಂಡು 8-10
* ಅಲೂಗೆಡ್ಡೆ 2-3 (ಬೇಯಿಸಿದ್ದು)
* ಬೇಯಿಸಿದ ಬಟಾಣಿ ಅರ್ಧ ಕಪ್
* ನಿಂಬೆ ರಸ ಒಂದು ಚಮಚ
* ಕರಿಮೆಣಸಿನ ಪುಡಿ 2 ಚಮಚ
* ಚೀಸ್ 9-10
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಆಲೂಗಡ್ಡೆಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಹಿಸುಕಬೇಕು. ನಂತರ ಬೇಯಿಸಿದ ಬಟಾಣಿ, ನಿಂಬೆ ರಸ, ಕರಿಮೆಣಸಿನ ಪುಡಿ, ಚೀಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬದಿಯಲ್ಲಿಡಬೇಕು.
2. ಈಗ ಬ್ರೆಡ್ ಪೇಸ್ (ಬ್ರೆಡ್ ಚೂರು) ತೆಗೆದುಕೊಂಡು ಅದರ ತುದಿಯನ್ನು ಚಾಕುವಿನಿಂದ ಕತ್ತರಿಸಬೇಕು. ನಂತರ ಅದರ ಎರಡೂ ಬದಿಗೆ ನೀರು ಚಿಮುಕಿಸಬೇಕು. ಆದರೆ ನೆನಪಿಡಿ ಬ್ರೆಡ್ ತುಂಬಾ ಮೆತ್ತಗಾಗಬಾರದು.
3. ನಂತರ ಬ್ರೆಡ್ ಅನ್ನು ಮೆತ್ತಗೆ ಅದುಮಿ ಅದರಲ್ಲಿರುವ ಅಧಿಕ ನೀರನ್ನು ಹಿಂಡಿ ತೆಗೆಯಬೇಕು. ನಂತರ ಅದರ ಒಳಗೆ ಆಲೂಗೆಡ್ಡೆ ಮಿಶ್ರಣ ಹಾಕಿ ಬ್ರೆಡ್ ಅನ್ನು ರೋಲ್ ಮಾಡಬೇಕು. ನಂತರ ಬ್ರೆಡ್ ರೋಲ್ ಮಾಡಿ ಅದರ ತುದಿಯನ್ನು ಮೆಲ್ಲಗೆ ಅದುಮಿದರೆ ಬ್ರೆಡ್ ಅಂಟಿಕೊಳ್ಳುತ್ತದೆ. ಈ ರೀತಿ ಎಲ್ಲಾ ಬ್ರೆಡ್ ತುಂಡುಗಳನ್ನು ಮಾಡಬೇಕು.
4. ಈಗ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಎಣ್ಣೆ ಸರಿಯಾಗಿ ಕಾದ ನಂತರ ಅದರಲ್ಲಿ ಬ್ರೆಡ್ ರೋಲ್ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಬ್ರೆಡ್ ರೋಲ್ ರೆಡಿ.



Click it and Unblock the Notifications
