Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬ್ರೆಡ್ ಪಕೋಡ ಮಾಡಲು ನಳಪಾಕ ಗೊತ್ತಿರಬೇಕಾಗಿಲ್ಲ
ಬ್ರೆಡ್ ಹಾಗೇ ತಿನ್ನುವ ಬದಲು ಅದರಿಂದ ಸ್ಯಾಂಡ್ ವಿಚ್ ಮಾಡಿ ಅಥವಾ ಬ್ರೆಡ್ ಆಮ್ಲೇಟ್ ಮಾಡಿ ತಿನ್ನಲು ಇಷ್ಟಪಡುತ್ತೇವೆ. ಸ್ಯಾಂಡ್ ವಿಚ್ ಅನ್ನು ನಾನಾ ರುಚಿಯಲ್ಲಿ ತಯಾರಿಸಿ ತಿನ್ನಬಹುದಾಗಿದ್ದರೂ ದಿನಾ ಸ್ಯಾಂಡ್ ವಿಚ್ ಮಾಡಿಕೊಂಡು ತಿಂದರೆ ಬೋರಾಗುವುದು. ಆದರೆ ಸ್ಯಾಂಡ್ ವಿಚ್ ನಷ್ಟೇ ಸುಲಭವಾಗಿ ಇದರಿಂದ ಪಕೋಡ ತಯಾರಿಸಬಹುದು. ಅಲ್ಲದೆ ಸ್ಯಾಂಡ್ ವಿಚ್ ಕ್ಕಿಂತ ಮಳೆಗಾಲದಲ್ಲಿ ಪಕೋಡ ತಿನ್ನಲು ತುಂಬಾ ಮಜಾವಾಗಿರುವುದು. ಇದನ್ನು ಮಾಡಲು ನಳಪಾಕ ಗೊತ್ತಿರಬೇಕೆಂದಿಲ್ಲ. ತುಂಬಾ ಸುಲಭವಾಗಿ ಈ ಪಕೋಡ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್ ( ಅರ್ಧ ಭಾಗಗಳಂತೆ ಕತ್ತರಿಸಿರಬೇಕು)
* ಮೈದಾ 1 ಕಪ್
* ಉದ್ದುದ್ದವಾಗಿ ಕತ್ತರಿಸಿದ ಈರುಳ್ಳಿ 1
* ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ
* ಸ್ವಲ್ಪ ನೀರು
* ರುಚಿಗೆ ತಕ್ಕ ಉಪ್ಪು
* ಬೇಕಿದ್ದರೆ ಒಂದು ಮೊಟ್ಟೆ
ತಯಾರಿಸುವ ವಿಧಾನ:
* ಬ್ರೆಡ್ ಹೊರತು ಪಡಿಸಿ ಉಳಿದ ಎಲ್ಲಾ ಸಾಮಾಗ್ರಿಗಳನ್ನು ಕಲೆಸಬೇಕು.
* ನಂತರ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕುದಿಸಬೇಕು.
* ಈಗ ಬ್ರೆಡ್ ನ ತುಂಡನ್ನು ಕಲೆಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಬೇಕು. ಪಕೋಡ ಕಂದು ಬಣ್ಣಕ್ಕೆ ಬರುವಾಗ ತೆಗೆದರೆ ರುಚಿಕರವಾದ ಬ್ರೆಡ್ ಪಕೋಡ ರೆಡಿ.
ಸಲಹೆ:
* ಈ ಪಕೋಡ ಮಾಡುವಾಗ ಮೈದಾ ಬ್ರೆಡ್ ಬದಲು ಗೋಧಿ ಬ್ರೆಡ್ ಬಳಸುವುದು ಒಳ್ಳೆಯದು.
* ಮೊಟ್ಟೆಯನ್ನು ಬಳಸಿದರೆ ಪಕೋಡ ರುಚಿ ಹೆಚ್ಚುವುದು.
* ಈ ಪಕೋಡವನ್ನು ಟೊಮೆಟೊ ಸಾಸ್ ನಲ್ಲಿ ಅದ್ದಿ ತಿನ್ನಬಹುದು, ಇಲ್ಲದಿದ್ದರೆ ಹಾಗೇ ಕೂಡ ತಿನ್ನಬಹುದು.
ಇದು ಮಳೆಗಾಲವಾಗಿರುವುದರಿಂದ ಬಿಸಿ ಬಿಸಿ ತಿಂಡಿ ತಿನ್ನಬೇಕೆಂದು ಅನ್ನಿಸಿದಾಗ, ಮನೆಯಲ್ಲಿಯೆ ಈ ಪಕೋಡವನ್ನು ಸುಲಭದಲ್ಲಿ ತಯಾರಿಸಿ, ರುಚಿ ನೋಡಿ.



Click it and Unblock the Notifications
