Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಚಾಟ್ಸ್ ಪ್ರಿಯರಿಗಾಗಿ ಬೂಂದಿ ಚಾಟ್ ಮಸಾಲ ರೆಸಿಪಿ
ಸಂಜೆ ಹೊತ್ತಿನಲ್ಲಿ ಬೀದಿ ಬದಿಯಲ್ಲಿ ಅನೇಕ ಬೀದಿ ಬದಿಯ ಚಾಟ್ ಅಂಗಡಿಗಳನ್ನು ಕಾಣುವಾಗ ತಿನ್ನಬೇಕೆನಿಸುತ್ತದೆ. ಆದರೆ ಹೈಜೆನಿಕ್ (ಸ್ವಚ್ಛತೆ) ಬಗ್ಗೆ ಯೋಚಿಸುವಾಗ ತಿನ್ನುವುದು ಬೇಡ ಅನಿಸುತ್ತದೆ.
ಬೀದಿ ಬದಿಯ ಚಾಟ್ ಗಳನ್ನು ಅಷ್ಟೇ ರುಚಿಕರವಾಗಿ ಮನೆಯಲ್ಲೂ ಮಾಡಬಹುದು. ಇಲ್ಲಿ ನಾವು ಬೂಂದಿ ಚಾಟ್ ನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
100 ಗ್ರಾಂ ಬೂಂದಿ
2-3 ತುಂಡು ಬ್ರೆಡ್
ಸ್ವಲ್ಪ ಸೇವ್
ಚಾಟ್ ಮಸಾಲ ಪುಡಿ ಅರ್ಧ ಚಮಚ
ಚಿಟಿಕೆಯಷ್ಟು ಗರಂ ಮಸಾಲ
ನಿಂಬೆ ಹಣ್ಣು 1
ಎಣ್ಣೆ 1 ಚಮಚ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
* ಬೂಂದಿಯನ್ನು ತಟ್ಟೆಯಲ್ಲಿ ಹಾಕಿಡಿ.
* ಬಾಣಲೆಯಲ್ಲಿ ಅ ಚಮಚ ಎಣ್ಣೆ ಹಾಕಿ ಅದರಲ್ಲಿ ಬ್ರೆಡ್ ತುಂಡುಗಳನ್ನು ಹುರಿಯಿರಿ. ನಂತರ ಅದನ್ನು ಬೂಂದಿ ತಟ್ಟೆಯಲ್ಲಿ ಹಾಕಿ.
* ಈಗ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನ ಕಾಯಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ , ಗರಂ ಮಸಾಲ, ಚಾಟ್ ಮಸಾಲ ಹಾಕಿ ಕಲೆಸಿ, ನಿಂಬೆ ರಸ ಹಿಂಡಿ ಮಿಶ್ರ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿರುಚಿಯಾದ ಚಾಟ್ ರೆಡಿ.



Click it and Unblock the Notifications
