Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಟೀ ಜೊತೆ ಸವಿಯಲು ಬೀನ್ಸ್ ಸುಂಡಲ್
ಕಾಳುಗಳಿಂದ ಸಾರು, ಪಲ್ಯ, ಗ್ರೇವಿ ಮಾತ್ರವಲ್ಲ ಸಾಯಾಂಕಾಲದ ಟೀಗೆ ರುಚಿಕರವಾದ ತಿಂಡಿ ತಯಾರಿಸಬಹುದು. ಸಾಮಾನ್ಯವಾಗಿ ಹೆಸರುಕಾಳು, ಕಡಲೆ ಇವುಗಳನ್ನು ಬೇಯಿಸಿ ತೆಂಗಿನ ಕಾಯಿ ಒಗ್ಗರಣೆ ಹಾಕಿ ಸಾಯಾಂಕಾಲದ ತಿಂಡಿಯಾಗಿ ತಿನ್ನಲಾಗುವುದು. ಇವತ್ತು ನಾವು ಬೀನ್ಸ್ ಸುಂಡಲ್ ತಯಾರಿಸುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
* ಬೀನ್ಸ್ ಒಂದು ಕಪ್
* ಕತ್ತರಿಸಿದ ಈರುಳ್ಳಿ ಒಂದು
* ಬೆಳ್ಳುಳ್ಳಿ 4-5 ಎಸಳು
* ಸಾಸಿವೆ ಅರ್ಧ ಚಮಚ
* ಕಡಲೆ ಬೇಳೆ ಅರ್ಧ ಚಮಚ
* ಉದ್ದಿನ ಬೇಳೆ ಅರ್ಧ ಚಮಚ
* ಕರಿ ಬೇವಿನ ಎಲೆ
* ಕೊತ್ತಂಬರಿ ಸೊಪ್ಪು 3
*ಮೆಣಸಿನ ಪುಡಿ ಅರ್ಧ ಅಥವಾ ಒಂದು ಚಮಚ
* ಚಿಟಿಕೆಯಷ್ಟು ಅರಿಶಿಣ ಪುಡಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಬೀನ್ಸ್ ಅನ್ನು 5-6 ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ಪ್ರೆಷರ್ ಕುಕ್ಕರ್ ನಲ್ಲಿ ಬೀನ್ಸ್, ಬಯಲು ನೀರು ಹಾಕಿ, ಸ್ವಲ್ಪ ಉಪ್ಪು ಸೇರಿಸಿ 2 ವಿಷಲ್ ಬರುವವರೆಗೆ ಬೇಯಿಬೇಕು
3. ನಂತರ ಬೀನ್ಸ್ ನಲ್ಲಿರುವ ನೀರನ್ನು ಸೋಸಿ, ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದಿಡಬೇಕು.
4. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
5. ನಂತರ ಬೇಯಿಸಿದ ಬೀನ್ಸ್ ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿದರೆ ರುಚಿಕರವಾದ ಬೀನ್ಸ್ ಸುಂಡಲ್ ರೆಡಿ.
ಇದನ್ನು ಬಿಸಿಬಿಸಿಯಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
