Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬನಾನ- ಕೋಕನೆಟ್ ಬ್ರೆಡ್ ಟ್ರೈ ಮಾಡಿದ್ದೀರಾ?
ಹೊಸ ರುಚಿಯ ಅಡುಗೆ ಮಾಡುವುದು ನನ್ನ ಹಾಬಿ. ಮೊದಲೆಲ್ಲಾ ನಾನು ಬರೀ ಬಾಳೆ ಹಣ್ಣಿನಿಂದ ಬ್ರೆಡ್ ಮಾಡುತ್ತಿದೆ. ಒಂದೇ ರುಚಿಯ ಬ್ರೆಡ್ ಗಿಂತ ಸ್ವಲ್ಪ ವಿಭಿನ್ನವಾಗಿ ಮಾಡಬೇಕೆಂದು ಯೋಚಿಸಿದೆ. ಆಗ ರೆಡಿಯಾಗಿದ್ದೇ ಬನಾನ-ಕೋಕನೆಟ್ ಬ್ರೆಡ್.
ಮೈಕ್ರೋ ಓವನ್ ನಲ್ಲಿ ಈ ಬ್ರೆಡ್ ಅನ್ನು ಸುಲಭದಲ್ಲಿ ತಯಾರಿಸಬಹುದು. ಈ ಬ್ರೆಡ್ ಅನ್ನು ಮಕ್ಕಳ ಸ್ನ್ಯಾಕ್ಸ್ ಡಬ್ಬಿಗೆ ತುಂಬಬಹುದು, ಬ್ರೇಕ್ ಫಾಸ್ಟ್ ಮಾಡಲು ಪುರುಸೊತ್ತು ಇಲ್ಲದಿದ್ದರೆ ಇದನ್ನೇ ತೆಗೆದುಕೊಂಡಬಹುದು.

ಬೇಕಾಗುವ ಸಾಮಾಗ್ರಿಗಳು
ಮೈದಾ 2 ಕಪ್
ಅಡುಗೆ ಸೋಡಾ 3/4 ಚಮಚ
ಉಪ್ಪು ಅರ್ಧಚಮಚ
ಸಕ್ಕರೆ 1 ಕಪ್
ಎಣ್ಣೆ ಅರ್ಧ ಕಪ್
ಮೊಟ್ಟೆ 3
ಮೊಸರು 1 ಕಪ್
ನಿಂಬೆರಸ 1 ಚಮಚ
ಹಣ್ಣಾದ ಬಾಳೆಹಣ್ಣು 2 (ಪಚ್ಚೆ ಬಾಳೆಹಣ್ಣು)
ಹುರಿದ ತೆಂಗಿನ ತುರಿ ಅರ್ಧ ಕಪ್
ವೆನಿಲ್ಲಾ ಎಸೆನ್ಸ್ ಅರ್ಧ ಚಮಚ
ಮಾಡುವ ವಿಧಾನ:
* ಓವನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಬೇಕು.
* ಈಗ ಎಣ್ಣೆ ಮತ್ತು ಬ್ರೆಡ್ ಪ್ಯಾನ್ ಅನ್ನು ತೆಗೆದು ಪಕ್ಕದಲ್ಲಿ ಇಟ್ಟುಕೊಳ್ಳಿ.
* ಈಗ ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ಮೈದಾ, ಅಡುಗೆ ಸೋಡಾ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮತ್ತೊಂದು ಬಟ್ಟಲಿನಲ್ಲಿ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಎಣ್ಣೆ, ಮೊಸರು, ನಿಂಬೆರಸ ಹಾಕಿ ಚೆನ್ನಾಗಿ ಕದಡಿ.
* ಈಗ ಹಿಸುಕಿದ ಬಾಳೆ ಹಣ್ಣು ಹಾಕಿ, ಸ್ವಲ್ಪ ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಕಲೆಸಿದ ಮೈದಾವನ್ನು ನಿಧಾನಕ್ಕೆ ಹಾಕಿ ಮಿಕ್ಸ್ ಮಾಡಿ. ತುಂಬಾ ಮಿಕ್ಸ್ ಮಾಡಬೇಡಿ.
* ಈಗ ಈ ಎಣ್ಣೆ ಹಾಕಿಟ್ಟ ತಟ್ಟೆಗೆ ಸುರಿಯಿರಿ. ಅದರ ಮೇಲೆ ತೆಂಗಿನ ತುರಿಯನ್ನು ಉದುರಿಸಿ. 30 ನಿಮಿಷ ಇಟ್ಟು ಅಲ್ಯುಮಿನಿಯಂ ಕವರ್ ಅನ್ನು ಮುಚ್ಚಿ ಮತ್ತೆ ಅರ್ಧ ಗಂಟೆ ಬೇಯಿಸಿ. ಈಗ ನೈಫ್ ನಿಂದ ಬೆಂದಿದೆಯೇ ಎಂದು ಪರೀಕ್ಷಿಸಿ. ಬೆಂದ ನಂತರ ಮೈಕ್ರೋ ಓವನ್ ನಿಂದ ಹೊರತೆಗೆದು 10 ನಿಮಿಷ ಹಾಗೇ ಇಡಿ. ನಂತರ ಕತ್ತರಿಸಿ. ಇಷ್ಟು ಮಾಡಿದರೆ ರುಚಿಕರವಾದ ಬ್ರೆಡ್ ರೆಡಿ.
ಇದನ್ನು ಒಂದು ದಿನ ಇಟ್ಟು ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ. ಪ್ಲಾಸ್ಟಿಕ್ ನಲ್ಲಿ ಹಾಕಿಟ್ಟರೆ ಈ ಬ್ರೆಡ್ ಅನ್ನು 3-4 ದಿನಗಳ ಕಾಲ ಇಡಬಹುದು.



Click it and Unblock the Notifications
