Latest Updates
-
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಗರಿಗರಿಯಾದ ಅವರೆಕಾಳಿನ ವಡೆ
ಕಡಲೆ ಬೇಳೆಯ ವಡೆಯನ್ನು ಎಲ್ಲಾ ಕಾಲದಲ್ಲೂ ಮಾಡಬಹುದು. ಆದರೆ ಅವರೆಕಾಳಿನ ವಡೆಯನ್ನು ಈ ಸಮಯದಲ್ಲಿ ಮಾತ್ರ ತಯಾರಿಸಲು ಸಾಧ್ಯ. ಕಡಲೆ ಬೇಳೆಯ ವಡೆ ಮತ್ತು ಅವರೆ ಕಾಳಿನ ವಡೆ ತಯಾರಿಸುವ ವಿಧಾನ ಸ್ವಲ್ಪ ಒಂದೇ ರೀತಿಯಿದ್ದರೂ ಇದು ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ.
ಸಂಕ್ರಾಂತಿ ಹಬ್ಬಕ್ಕೆ ವಡೆ ಮಾಡುವ ಪ್ಲಾನ್ ಇದ್ದರೆ ಈ ವಡೆಯನ್ನು ಟ್ರೈ ಮಾಡಿ. ಅವರೆಕಾಳಿನ ವಡೆ ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಗಿಗಳು :
ಹೆಸರುಬೇಳೆ 1 ಕಪ್
ಕಡಲೆ ಬೇಳೆ 1 ಕಪ್
ಹಿಸುಕಿದ ಅವರೆ ಕಾಳು 1 ಹಿಡಿ
ಹೆಚ್ಚಿದ ಈರುಳ್ಳಿ 1 ಕಪ್
4 ಹಸಿಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ್ದು)
ಕೊತ್ತಂಬರಿ
ಸ್ವಲ್ಪ ಕರಿಬೇವು
ಸ್ವಲ್ಪ ಪುದಿನಾ
ಸ್ವಲ್ಪ ಸಬ್ಬಸಿಗೆ ಸೊಪ್ಪು
1 ಇಂಚಿನಷ್ಟು ದೊಡ್ಡದಿರುವ ಶುಂಠಿ
ರುಚಿಗೆ ತಕ್ಕ ಉಪ್ಪು
ಎಣ್ಣೆ
ಮಾಡುವ ವಿಧಾನ :
1. ಹೆಸರುಬೇಳೆ, ಕಡಲೆ ಬೇಳೆ ಹಾಗೂ ಹಿಸುಕಿದ ಅವರೆ ಕಾಳುಗಳನ್ನು ಬೇರೆ ಬೇರೆ ಪಾತ್ರೆಯಲ್ಲಿ 1 ಗಂಟೆ ಕಾಲ ನೆನೆ ಹಾಕಿ.
2. ನಂತರ ಅವುಗಳ ನೀರು ತೆಗೆದು ಸ್ವಲ್ಪ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
3. ಈಗ ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ ಅದಕ್ಕೆ ಕರಿಬೇವು, ಪುದೀನಾ ಎಲೆ, ಸಬ್ಬಸಿಗೆ ಸೊಪ್ಪು, ಜಜ್ಜಿದ ಶುಂಠಿ, ಈರುಳ್ಳಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಬೇಕು.
4. ನಂತರ ಈ ಮಿಶ್ರಣದಿಂದ ಉಂಡೆ ಕಟ್ಟಿ ವಡೆಗೆ ತಟ್ಟಿದಂತೆ ತಟ್ಟಿ.
5. ಇದೇ ಸಮಯಕ್ಕೆ ಅರ್ಧ ಬಾಣಲಿಯಷ್ಟು ಎಣ್ಣೆ ಹಾಕಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕುದಿ ಬರುವಾಗ ಅದರಲ್ಲಿ ತಟ್ಟಿದ ವಡೆ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಗರಿಗರಿಯಾದ ಅವರೆಕಾಳಿನ ವಡೆ ರೆಡಿ.



Click it and Unblock the Notifications
