Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಸ್ವಾದಿಷ್ಟ ಆಲೂ ಪಕೋಡದ ರೆಸಿಪಿ
ತಿಂಡಿಗಳಲ್ಲಿ ಹೊಸ ರುಚಿ ಮಾಡ ಬೇಕೆಂದು ಬಯಸುವವರು ಈ ಆಲೂ ಪಕೋಡ ಟ್ರೈ ಮಾಡಬಹುದು. ಸಾಮಾನ್ಯವಾಗಿ ಪಕೋಡವನ್ನು ಈರುಳ್ಳಿಯಲ್ಲಿ ತಯಾರಿಸಲಾಗುವುದು, ಪಕೋಡಕ್ಕೆ ಬಳಸುವ ಸಾಮಾಗ್ರಿಗಳನ್ನು ಬದಲಾಯಿಸಿದರೆ ಅನೇಕ ರುಚಿಯ ಪಕೋಡ ತಯಾರಿಸಬಹುದು.
ಇಲ್ಲಿ ನಾವು ಅವಲಕ್ಕಿ ಹಾಗೂ ಆಲೂಗೆಡ್ಡೆ ಬಳಸಿ ಮಾಡುವ ಆಲೂ ಪಕೋಡದ ರೆಸಿಪಿ ನೀಡಲಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
ಆಲೂಗೆಡ್ಡೆ 4-5
ಅವಲಕ್ಕಿ ಅರ್ಧ ಕಪ್
ಮೈದಾ 1 ಕಪ್
ಹಸಿ ಮಣಸಿನ ಕಾಯಿ 3-4
ಜೀರಿಗೆ 1 ಚಮಚ
ಗರಂ ಮಸಾಲ 1 ಚಮಚ
ಅರಿಶಿಣ ಪುಡಿ 1 ಚಮಚ
ಅಜ್ವೈನ್ ಚಿಟಿಕೆಯಷ್ಟು
ಅಡುಗೆ ಸೋಡಾ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
* ಆಲೂಗೆಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿ ಅದಕ್ಕೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಗರಂ ಮಸಾಲ, ಅಡುಗೆ ಸೋಡಾ ಅವಲಕ್ಕಿ ಹಾಕಿ ಚೆನ್ನಾಗಿ ಕಲೆಸಬೇಕು.
* ಈಗ ಮೈದಾಕ್ಕೆ ರುಚಿಗೆ ತಕ್ಕ ಉಪ್ಪು ಸ್ವಲ್ಪ ಗಟ್ಟಿಯಾಗಿ ಕಲೆಸಬೇಕು.
* ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಉರಿಯಲ್ಲಿಟ್ಟು ಕಾಯಿಸಬೇಕು. ಎಣ್ಣೆ ಚೆನ್ನಾಗಿ ಕಾದ ನಂತರ ಆಲೂಗೆಡ್ಡೆ ಮಿಶ್ರಣದಿಂದ ಉಂಡೆ ಕಟ್ಟಿ ಅದನ್ನು ಮೈದಾದಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಎಣ್ಣೆಯಿಂದ ತೆಗೆದರೆ ರುಚಿಕರವಾದ ಆಲೂ ಪಕೋಡ ರೆಡಿ.



Click it and Unblock the Notifications
