Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಾಯಿರುಚಿಗೆ, ಆಯಾಸ ನಿವಾರಣೆಗೆ ಬ್ರೆಡ್ ಪಾಯಸ!
ಇದು ದೀಢೀರ್ ಪಾಯಸ. ಆಯಾಸವಾದಾಗ ಆಹ್ಲಾದಕರ. ಮಾಡುವಾಗಲೂ ಸುಸ್ತಾಗುವುದಿಲ್ಲ. ಕುಡಿದರೂ ಸುಸ್ತಾಗುವುದಿಲ್ಲ.
- ಎಸ್.ವಿ. ಲತಾ, ಬೆಂಗಳೂರು
[email protected]
ಬ್ರೆಡ್ ಪಾಯಸಕ್ಕೆ ಬೇಕಾಗುವ ಸಾಮಗ್ರಿ :
1/2 ಪೌಂಡ್ ಬ್ರೆಡ್,
50 ಗ್ರಾಂ ಗಸಗಸೆ,
1/2 ಬಟ್ಟಲು ಕೊಬ್ಬರಿ ತುರಿ,
1 ಬಟ್ಟಲು ಹಾಲು,
ಒಂದೆರೆಡು ಬಾಳೆಹಣ್ಣು,
1 ಬಟ್ಟಲು ಸಕ್ಕರೆ,
ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಗೂ ಒಂದು ಬಟ್ಟಲು ತುಪ್ಪ.
ಮಾಡುವ ವಿಧಾನ :
ಬ್ರೆಡ್ನ್ನು ಚಿಕ್ಕ ಚಿಕ್ಕ ತುಂಡು ತುಂಡುಗಳಾಗಿ ಕತ್ತರಿಸಿ ಬಿಸಿಲಲ್ಲಿ ಒಣಗಿಸಿ. ಬಾಣಲೆಗೆ ಸ್ವಲ್ಪ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣಗಿದ ಬ್ರೆಡ್ ಚೂರುಗಳನ್ನು ಹಾಕಿ ಕೆಂಬಣ್ಣಕ್ಕೆ ಹುರಿಯಿರಿ.
ದಪ್ಪ ತಳದ ಪಾತ್ರೆಗೆ ಹಾಲು, ಸಕ್ಕರೆ, ಸ್ವಲ್ಪ ನೀರು ಹಾಕಿ ಕಾಯಿಸುತ್ತಾ, ಸಕ್ಕರೆ ಹಾಲು ಬೆರೆತು ಕುದಿ ಬಂದ ಕೂಡಲೇ ತುಪ್ಪದಲ್ಲಿ ಹುರಿದ ಗಸಗಸೆ, ದ್ರಾಕ್ಷಿ, ಗೋಡಂಬಿ, ಕೊಬ್ಬರಿ ಹಾಕಿ ಸೌಟಿನಿಂದ ಕೈ ಆಡಿಸಿ. ನಂತರ ಹುರಿದ ಬ್ರೆಡ್ ಚೂರುಗಳನ್ನು ಹಾಕಿ ಒಂದು ಕುದಿ ಬರಿಸಿ ಕೆಳಗಿಳಿಸಿ. ಈ ಮಿಶ್ರಣಕ್ಕೆ ಬೇಕಾದರೆ ಬಾಳೆಹಣ್ಣಿನ ಬಿಲ್ಲೆಗಳನ್ನು ಕತ್ತರಿಸಿ ಹಾಕಿ.
ಬ್ರೆಡ್ ಪಾಯಸ ರುಚಿಕರವಷ್ಟೇ ಅಲ್ಲ , ಪೌಷ್ಟಿಕವೂ ಹೌದು.



Click it and Unblock the Notifications
