Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಉಂಡ್ಲಿಗೆ : ಮಲೆನಾಡ ಸಾಂಪ್ರದಾಯಿಕ ತಿಂಡಿ

ನಮ್ಮ ಮಲೆನಾಡ ಮನೆಗಳಲ್ಲಿ ಬಲವಾದ ಮರದ ಬಾಗಿಲುಗಳು ಮತ್ತು ಆರೆಂಟು ಅಂಗುಲಕ್ಕೂ ಮೀರಿದ ಎತ್ತರದ ಹೊಸಿಲುಗಳು ಕಂಡುಬರುತ್ತವೆ. ಮನೆಯ ಪುಟ್ಟ ಮಗು ಡೊಗ್ಗಾಲಲ್ಲಿ ಹರಿದಾಡುತ್ತಾ ತನ್ನ ಕೋಣೆಯ ಹೊಸಲನ್ನು ದಾಟಿತೇ? ಮನೆಯ ಅಜ್ಜಿಗೆ ಎಲ್ಲಿಲ್ಲದ ಸಡಗರ!
ಮನೆಯ ಪುಟ್ಟ ಮಗು ಹೊಸಿಲು ದಾಟುವಷ್ಟು ಶಕ್ತವಾಗಿದೆ. ಅಂದರೆ, ಕೈಕಾಲುಗಳಲ್ಲಿ ಶಕ್ತಿ ಮೂಡಿಸಿಕೊಂಡು ಹೊಸಲು ದಾಟಿದೆ! ಅಷ್ಟರಲ್ಲೇ, ಅದಕ್ಕೆ ಹಾಲು ಹಲ್ಲು ಕಾಣಿಸಿಕೊಂಡು ಗಟ್ಟಿ ಪದಾರ್ಥ ಅಗಿಯಲು ಮಗು ತವಕ ಪಡುತ್ತಿದೆ. ಆಗ, ಆ ಮಗುವಿನ ಅಜ್ಜಿ ತನ್ನ ಪ್ರೀತಿಯ ಮೊಮ್ಮಗುವಿಗೆ ಉಂಡ್ಲಿಗೆ ತಯಾರಿಸುತ್ತಾಳೆ. ಅಷ್ಟೇ ಅಲ್ಲ, ಒಂದು ಹೊಸಾ ಹುಲ್ಲಿನ ಚಾಪೆಯ ಮೇಲೆ ಮಗುವನ್ನು ಕುಳ್ಳಿರಿಸಿ, ಅದರ ತಲೆಯ ಮೇಲೆ ಒಂದು ಕೊಳಗದಷ್ಟು ಉಂಡ್ಲಿಗೆ ಸುರಿದು ಸಂಭ್ರಮಿಸುತ್ತಾಳೆ.
ಪುಟ್ಟ ಮಗು ಅಜ್ಜಿ ತಯಾರಿಸಿದ ಉಂಡ್ಲಿಗೆ ಒಂದನ್ನು ಹೆಕ್ಕಿಕೊಂಡು ಬಾಯಿಗೆ ಹಾಕಿಕೊಳ್ಳುತ್ತೆ. ಪುಟ್ಟ ಮಗು ಉಂಡ್ಲಿಗೆ ಮೆದ್ದ ನಂತರವೇ, ಆಕೆ ಇತರೇ ಮನೆ ಮಂದಿಗೆ ತಿನ್ನಲು ಉಂಡ್ಲಿಗೆ ನೀಡುತ್ತಾಳೆ. ಘಮಘಮಿಸುವ ಉಂಡ್ಲಿಗೆ ತಿನ್ನುವ 'ಖುಷಿ" ತಿಂದು ಅನುಭವಿಸಿದವರಿಗೆ ಮಾತ್ರ ಗೊತ್ತು!
ಈ ಸಾಂಪ್ರದಾಯಿಕ ತಿಂಡಿ ನೀವೂ ತಯಾರಿಸಿ ನೋಡಿ. ವಿವರಗಳನ್ನು ನಾವು ನೀಡುತ್ತೇವೆ..
ಬೇಕಾಗುವ ಪದಾರ್ಥಗಳು :
ಎರಡು ಕಪ್ ಬೆಳ್ತಿಗೆ ಅಕ್ಕಿ
ಅರ್ಧ ಹೋಳು ತೆಂಗಿನಕಾಯಿ
ಒಂದು ಟೀ ಚಮಚ ಜೀರಿಗೆ
ಒಂದು ಟೀ ಚಮಚ ಕೊತ್ತಂಬ್ರಿ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ತಯಾರಿಸುವ ವಿಧಾನ : ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿರಿ. ನೀರು ಬಸಿದು ಅಕ್ಕಿ, ತೆಂಗಿನಕಾಯಿ ತುರಿ, ಜೀರಿಗೆ, ಕೊತ್ತಂಬರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವನ್ನು ಸ್ವಲ್ಪ ರುಬ್ಬಿರಿ(ತೀರ ನುಣ್ಣಗೆ ರುಬ್ಬಬಾರದು).
ಕರಿಯುವ ಎಣ್ಣೆ ಬಿಸಿಮಾಡಿಕೊಂಡು, ಈ ರುಬ್ಬಿದ ಹಿಟ್ಟನ್ನು ನೆಲಗಡಲೇ ಬೀಜದ ಗಾತ್ರಕ್ಕೆ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು, ಕೆಂಪಗಾಗುವ ತನಕ, ಅಂದರೆ ಕೋಡುಬಳೆಯ ಬಣ್ಣ ಬರುವಷ್ಟಕ್ಕೆ ಕರೆಯಿರಿ. ಬಿಸಿ ಆರಿದನಂತರ ಉಪಯೋಗಿಸಿ.
ಸೂಚನೆ : ಉಂಡ್ಲಿಗೆ ಲಘುವಾದ ಕುರುಕು ತಿಂಡಿ. ಇದನ್ನು ಎಲ್ಲಾ ಸಂದರ್ಭಗಳಿಗೂ ನಮ್ಮ ಮಲೆನಾಡಿನಲ್ಲಿ ತಯಾರಿಸುತ್ತಾರೆ. ಇತರೇ ಸಂದರ್ಭಗಳಲ್ಲಿ ಉಂಡ್ಲಿಗೆ ತಯಾರಿಸುವಾಗ ರುಚಿಗೆ ಸ್ವಲ್ಪ ಖಾರ ಬೇಕಾದಲ್ಲಿ ಎರಡು ಅಥವಾ ಮೂರು ಒಣ ಮೆಣಸಿನ ಕಾಯಿ ಸೇರಿಸಿಕೊಳ್ಳಬಹುದು.
ವಿಶಿಷ್ಟ ರುಚಿಯ ಉಂಡ್ಲಿಗೆ ತಯಾರಿಸಬೇಕಾದರೆ, ಅಕ್ಕಿ ರುಬ್ಬುವಾಗ ಸ್ವಲ್ಪ ಈರುಳ್ಳಿಯ ಹೋಳುಗಳನ್ನು ಸೇರಿಸ ಬಹುದು. ಮಲೆನಾಡಿನಲ್ಲಿ ಕೆಲವೊಮ್ಮೆ ಈರುಳ್ಳಿಯ ಬದಲು ಉಪ್ಪುನೀರಲ್ಲಿ ಸಂಗ್ರಹಿಸಿದ ಹಲಸಿನ ತೊಳೆಗಳನ್ನು ಸೇರಿಸುವ ವಾಡಿಕೆಯೂ ಇದೆ.



Click it and Unblock the Notifications
