Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಈ ಆಲೂಗಡ್ಡೆ ಖಾದ್ಯದ ಸ್ಪೆಷಾಲಿಟಿ ಏನು?

ಮಸಾಲೆ ಆಲೂಗಡ್ಡೆ ಮಾಡುವ ವಿಧಾನ:
* 4-5 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ
* 2-3 ಈರುಳ್ಳಿ, 1 ಕ್ಯಾಪ್ಸಿಕಂ
* 1 1/2 ಕ್ಯಾರೆಟ್, ಸ್ವಲ್ಪ ಬಟಾಣಿ
* 1 ಟೊಮೆಟೊ, ಹಸಿರು ಮೆಣಸಿನಕಾಯಿ
* 2 ಚಮಚ ಬೆಳ್ಳುಳ್ಳಿ ಪೇಸ್ಟ್
* ಚಾಟ್ ಮಸಾಲಾ, ಅರಿಶಿಣ, ಕೆಂಪು ಮೆಣಸಿನ ಪುಡಿ
* ಮೆಣಸಿನ ಪುಡಿ, ಉಪ್ಪು
* ಟೊಮೆಟೊ ಕೆಚಪ್
* ಜೀರಿಗೆ, ಎಣ್ಣೆ, ಕೊತ್ತಂಬರಿ
* ಚೀಸ್ (ಬೇಕಿದ್ದರೆ)
ಮಸಾಲೆ ಆಲೂಗಡ್ಡೆ ತಯಾರಿಸುವುದು ಹೇಗೆ?
* ಬೇಯಿಸಿದ ಆಲೂಗಡ್ಡೆಯನ್ನು ಎರಡು ಭಾಗವಾಗಿ ಕತ್ತರಿಸಿ ಅದರ ಮಧ್ಯದ ಭಾಗವನ್ನು ಚಮಚದ ಸಹಾಯದಿಂದ ನಿಧಾನವಾಗಿ ತೆಗೆದು ಒಂದೆಡೆ ಇಡಬೇಕು. ಇದನ್ನು ಕತ್ತರಿಸುವ ಮುನ್ನ ಸ್ವಲ್ಪ ಹುರಿದುಕೊಂಡಿದ್ದರೆ ಗರಿಗರಿಯಾಗಿರುತ್ತದೆ.
* ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ 1/2 ಚಮಚ ಜೀರಿಗೆಯನ್ನು ಹಾಕಬೇಕು. ಜೀರಿಗೆ ಸಿಡಿಯುತ್ತಿದ್ದಂತೆ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಈರುಳ್ಳಿ, ಬಟಾಣಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ಹಾಕಿ ಚೆನ್ನಾಗಿ ಬೆರೆಸಿ ಸ್ವಲ್ಪ ಬೇಯುವವರೆಗೂ ಕಾದು ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಅರಿಶಿಣ ಹಾಕಿ ಕೆಲವು ನಿಮಿಷ ಬೇಯಿಸಬೇಕು.
* ಈಗ ಈ ಮಿಶ್ರಣಕ್ಕೆ ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ, ಮೆಣಸಿನ ಪುಡಿ ಮತ್ತು ಟೊಮೆಟೊ ಹಾಕಬೇಕು. ಒಂದು ನಿಮಿಷ ಈ ಮಿಶ್ರಣವನ್ನು ಬೇಯಿಸಿ ಟೊಮೆಟೊ ಕೆಚಪ್ ಬೆರೆಸಬೇಕು. ಪೇಸ್ಟ್ ನಂತೆ ಆಗುತ್ತಿದ್ದಂತೆ ಉರಿಯನ್ನು ಆರಿಸಬೇಕು.
* ಚಮಚದ ಸಹಾಯದಿಂದ ಈ ಪಲ್ಯವನ್ನು ಆಲೂಗಡ್ಡೆಗೆ ಹಾಕಿ ಕೊತ್ತಂಬರಿ ಮತ್ತು ಚೀಸ್ ಹಾಕಿದರೆ ಮಸಾಲೆ ತುಂಬಿದ ಆಲೂಗಡ್ಡೆ ಖಾದ್ಯ ತಿನ್ನಲು ರೆಡಿ.



Click it and Unblock the Notifications
