Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಯಲ್ಲಿಟ್ಟರೆ ಕರಗುತ್ತೆ ಬಿಸಿ ಬಿಸಿ ಬೇಬಿ ಕಾರ್ನ್ ಫ್ರೈ

ಬೇಬಿ ಕಾರ್ನ್ ಫ್ರೈ ಗೆ ಬೇಕಾಗುವ ಸಾಮಾನು:
* 250 ಗ್ರಾಂ ಬೇಬಿ ಕಾರ್ನ್
* 1/2 ಕಪ್ ಜೋಳದ ಹಿಟ್ಟು
* 2 ಈರುಳ್ಳಿ
* 4-5 ಹಸಿರು ಮೆಣಸಿನಕಾಯಿ
* 1 ಕ್ಯಾಪ್ಸಿಕಂ
* 1 ಚಮಚ ನಿಂಬೆರಸ
* 1 ಚಮಚ ಸೋಯಾ ಸಾಸ್
* 1 ಚಮಚ ಚಿಲ್ಲಿ ಸಾಸ್
* ಟೊಮೆಟೊ ಕೆಚಪ್
* ಕೆಂಪು ಮೆಣಸಿನ ಪುಡಿ, ಉಪ್ಪು, ಮೆಣಸಿನ ಪುಡಿ, ಎಣ್ಣೆ
* ಕತ್ತರಿಸಿದ ಸಾಂಬಾರು ಈರುಳ್ಳಿ (ಈರುಳ್ಳಿ ಹೂವು)
ಬೇಬಿ ಕಾರ್ನ್ ಫ್ರೈ ತಯಾರಿಸುವ ವಿಧಾನ:
* ಬೇಬಿ ಕಾರ್ನ್ ಗಳನ್ನು ಉದ್ದುದ್ದವಾಗಿ ಕತ್ತರಿಸಿಕೊಂಡು ನೀರಿನಲ್ಲಿ ಸ್ವಲ್ಪ ಉಪ್ಪಿನೊಂದಿಗೆ ಬೇಯಿಸಬೇಕು. ಇದು ಮೃದುವಾಗುವವರೆಗೂ ಬೇಯಿಸಿ ಬಸಿದು ಒಂದೆಡೆ ಇಡಬೇಕು.
* ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು, ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ಉಪ್ಪನ್ನು ಬೆರೆಸಿ ಅದರಲ್ಲಿ ಬೇಯಿಸಿದ ಬೇಬಿ ಕಾರ್ನ್ ಗಳನ್ನು ಹಾಕಿ ತಿರುಗಿಸಿ ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ ಸ್ವಲ್ಪ ನಿಂಬೆರಸ ಬೆರೆಸಬೇಕು.
* ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಬೇಬಿ ಕಾರ್ನ್ ಗಳನ್ನು ಸ್ವಲ್ಪ ಕೆಂಪಗಾಗುವವರೆಗೂ ಹುರಿದು ಒಂದೆಡೆ ಇಟ್ಟುಕೊಳ್ಳಬೇಕು.
* ಅದೇ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗೆ ಹುರಿದು ನಂತರ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ 3-4 ನಿಮಿಷ ತಿರುಗಿಸಬೇಕು.
* ರುಚಿಗೆ ತಕ್ಕಷ್ಟು ಉಪ್ಪು, ಕೆಂಪು ಮೆಣಸಿನ ಪುಡಿ, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಮೆಣಸಿನ ಪುಡಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು.
* ಕೊನೆಯಲ್ಲಿ ಈ ಮಿಶ್ರಣಕ್ಕೆ ಬೇಬಿ ಕಾರ್ನ್ ಹಾಕಿ ಅದು ಚೆನ್ನಾಗಿ ಮಿಶ್ರಣದೊಂದಿಗೆ ಹೊಂದಿಕೊಳ್ಳುವವರೆಗು ಹುರಿಯಬೇಕು. ಕೊನೆಗೆ ಉರಿಯನ್ನು ಆರಿಸಿ ಮೇಲೆ ಈರುಳ್ಳಿಯ ಹೂವನ್ನು ಹಾಕಿ ಅಲಂಕರಿಸಿದರೆ ಬೇಬಿ ಕಾರ್ನ್ ಫ್ರೈ ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
