Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿ ಬಯಸುವ ನಾಲಗೆಗೆ ಬಟಾಣಿ ಕಚೋರಿ

ಇದು ಭಾರತೀಯ ತಿಂಡಿಯಾಗಿದ್ದು ಸಾಮಾನ್ಯವಾಗಿ ಇದು ಬೀದಿ ಬದಿಯ ಅಂಗಡಿಗಳಲ್ಲಿ ಇದನ್ನು ಹೆಚ್ಚಾಗಿ ಮಾರುತ್ತಿರುತ್ತಾರೆ. ಈ ಕಚೋರಿ ಬಂಗಾಳಿ ಮದುವೆಯಲ್ಲಿ ಅಂತು ಕಡ್ಡಾಯವಾಗಿ ಮಾಡುತ್ತಾರೆ. ಇದನ್ನು ತಿನ್ನುವಾಗ ಒಂದು ದಿನದ ಮಟ್ಟಿಗೆ ನಿಮ್ಮ ಡಯೆಟ್ ಮರೆತು ತಿಂದು ಆನಂದಿಸಿ.
ಈ ಬಟಾಣಿ ಕಚೋರಿ ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1. ಬೇಯಿಸಿದ ಬಟಾಣಿ 250 ಗ್ರಾಂ
2. ಜಜ್ಜಿದ ಶುಂಠಿ 2 ಇಂಚು
3. ಇಂಗು 3-4 ಚಿಟುಕು
4. ಜೀರಿಗೆ ಪುಡಿ 1 ಚಮಚ
5. ಮೆಣಸಿನ ಪುಡಿ 1 ಚಮಚ
6. ಸಕ್ಕರೆ 1 ಚಮಚ
7. ಕಡಲೆ ಹಿಟ್ಟು 3 ಕಪ್
8. ಎಣ್ಣೆ 1/2 ಬಾಣಲಿಯಷ್ಟು
9. ತುಪ್ಪ ಅಥವಾ ಬೆಣ್ಣೆ 1 ಚಮಚ
10. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಬಟಾಣಿಯನ್ನು ಬೇಯಿಸಿ ಅದನ್ನು ನೀರಿನಿಂದ ತೆಗೆದು 10 ನಿಮಿಷ ಕಾಲ ಆರಲು ಇಡಬೇಕು.
2. ಕಡಲೆಹಿಟ್ಟುಗೆ ನೀರು ಹಾಕಿ ಗಟ್ಟಿಯಾಗಿ ಕಲಸಬೇಕು, ಹೀಗೆ ಕಲಸುವಾಗ ತುಪ್ಪವನ್ನು ಸೇರಿಸಬೇಕು, ಇದರಿಂದ ಎಣ್ಣೆಯಲ್ಲಿ ಕರಿದಾಗ ತಿಂಡಿ ಚೆನ್ನಾಗಿ ಬರುವುದು.
3. ಬೇಯಿಸಿದ ಬಟಾಣಿಯನ್ನು ಗಟ್ಟಿಯಾಗಿ ಮಿಕ್ಸಿಯಲ್ಲಿ ಅರೆಯಬೇಕು.
4. ಈಗ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ ಮತ್ತು ಇಂಗು ಹಾಕಬೇಕು, ನಂತರ ಬಟಾಣಿ ಪೇಸ್ಟ್ ಅನ್ನು ಬಾಣಲೆಯಲ್ಲಿ ಹಾಕಿ ತಿರುಗಿಸಬೇಕು.
5. ನಂತರ ಮೆಣಸಿನ ಪುಡಿ, ಸಕ್ಕರೆ ಮತ್ತು ಉಪ್ಪು ಹಾಕಿ ತಿರುಗಿಸುತ್ತಾ 8-10 ನಿಮಿಷ ಬೇಯಿಸಬೇಕು. ಆಗ ಗಟ್ಟಿಯಾದ ಹಸಿರು ಬಣ್ಣದ ಪೇಸ್ಟ್ ಉಂಟಾಗುತ್ತದೆ.
6. ನಂತರ ಅದನ್ನು ಉರಿಯಿಂದ ತೆಗೆದು ತಣ್ಣಗಾಗಲು ಬಿಡಬೇಕು
7. ಈಗ 1/2 ಬಾಣಲೆಯಷ್ಟು ಎಣ್ಣೆ ಹಾಕಿ ಕುದಿಸಬೇಕು.
8. ಕುದಿಯುತ್ತಿರುವ ಎಣ್ಣೆಗೆ ಕಡಲೆ ಹಿಟ್ಟನ್ನು ಉಂಡೆ ಮಾಡಿ ಅದರಲ್ಲಿ ಹೆಬ್ಬೆರಳಿನಿಂದ ಗುಂಡಿ ಮಾಡಿ ಅದರೊಳಗೆ ಬಟಾಣಿ ಪೇಸ್ಟ್ ಹಾಕಿ ಅದನ್ನು ಕೈಯಿಂದಲೆ ಮುಚ್ಚಿ ಎಣ್ಣೆಯಲ್ಲಿ ಹಾಕಬೇಕು.
9. ಹೀಗೆ ಮಾಡಿ ಹಾಕುವಾಗ ಅದು ಪೂರಿಯ ಉಂಡೆಗಿಂತ ಗಟ್ಟಿಯಾಗಿರಲಿ, ಇಲ್ಲದಿದ್ದರೆ ಅದು ಮುರಿದು ಹೋದಂತೆ ಆಗುತ್ತದೆ.
10. ಎಣ್ಣೆಗೆ ಹಾಕಿದ ಕಚೋರಿಯನ್ನು ಪೂರಿ ಮಗುಚಿ ಹಾಕಲು ಬಳಸುವ ಸೌಟ್ ನಿಂದ ಮಗುಚಿ, ಅದು ಬೆಂದಾಗ (ಪೂರಿ ಬೆಯುವ ಸಮಯ ಸಾಕು ಇದು ಬೇಯಲು) ಎಣ್ಣೆಯಿಂದ ಅದನ್ನು ತೆಗೆಯಬೇಕು.
ಈ ಬಟಾಣಿ ಕಚೋರಿಯನ್ನು ಸಾಯಂಕಾಲದ ತಿಂಡಿಯಾಗಿ ತಿನ್ನಲು ರುಚಿಕರವಾಗಿರತ್ತದೆ, ಬೇಕಾದರೆ ದಾಲ್ ಸಾರಿನ ಜೊತೆ ಕೂಡ ತಿನ್ನಬಹುದಾಗಿದೆ.



Click it and Unblock the Notifications
