Latest Updates
-
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ!
ಸಂಜೆ ಕಾಫಿಯ ಸಂಗಾತಿ ಆಲೂಗಡ್ಡೆ ಕಟ್ಲೇಟ್

* ಚೈತ್ರಾ ಕೌಡ್ಲೆ, ಯು.ಕೆ.
ಬೇಕಾಗುವ ಸಾಮಗ್ರಿಗಳು :
ಮಧ್ಯಮ ಗಾತ್ರದ 2 ಆಲೂಗಡ್ಡೆ
ಈರುಳ್ಳಿ 1
ಸ್ವಲ್ಪ ತುರಿದ ಶುಂಠಿ, ಬೆಳ್ಳುಳ್ಳಿ
ಗರಮ್ ಮಸಲಾ 1/2 ಚಮಚ
ಜೋಳದ ಹಿಟ್ಟು 4 ಟೀ ಚಮಚ
ರವೆ ಹಿಟ್ಟು 3 ಟೀ ಚಮಚ
ಕೊತ್ತಂಬರಿ ಸೊಪ್ಪು 8-10 ಎಸಳು
ಒಗ್ಗರಣೆಗೆ ಸಾಸಿವೆ, ಉದ್ದಿನ ಬೆಳೆ, ಕಡಲೆ ಬೆಳೆ, ಕರಿಬೇವು
ಮಾಡುವ ವಿಧಾನ : ಆಲೂಗಡ್ಡೆಗಳನ್ನು ಚೆನ್ನಾಗಿ ಕುದಿಸಿ, ಅವು ಚೆನ್ನಾಗಿ ಬೆಂದ ನಂತರ ಕಿವುಚಿ ಒಂದೆಡೆ ತೆಗೆದಿಡಿ. ಸ್ಟೋವ್ ಮೇಲೆ ಒಂದು ಬಾಣಲೆಯನ್ನಿಟ್ಟು ಸ್ವಲ್ಪ ಎಣ್ಣೆ ಹಾಕಿ. ಅದರಲ್ಲಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ, ಗರಮ್ ಮಸಾಲೆ, ಹಸಿಮೆಣಸಿನ ಕಾಯಿ ಹಾಕಿ. ಅನಂತರ ಕಿವುಚಿಟ್ಟ ಆಲೂಗಡ್ಡೆಯನ್ನು ಅದರೊಳಗೆ ಸೇರಿಸಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಕಿ ಸ್ಟೋವ್ನಿಂದ ಕೆಳಗೆ ಇಳಿಸಿ. 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
ಇನ್ನೊಂದೆಡೆ ಜೋಳದ ಹಿಟ್ಟು ಮತ್ತು ರವೆಯನ್ನು ಸ್ವಲ್ಪ ಬಿಸಿ ನೀರನ್ನು ಹಾಕಿ ಬೆರೆಸಿಟ್ಟುಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಕಟ್ಲೇಟ್ ಆಕಾರಕ್ಕೆ ತಟ್ಟಿಕೊಳ್ಳಿ. ತಟ್ಟಿಕೊಂಡ ಆಲೂಗಡ್ಡೆ ಮಿಶ್ರಣದ ಎರಡು ಬದಿ ರವೆ ಹಿಟ್ಟು, ಜೋಳದ ಹಿಟ್ಟಿನ ಮಿಶ್ರಣ ಹಚ್ಚಿ. ನಂತರ ಸ್ಟೋವ್ ಹೊತ್ತಿಸಿ ಬೋಗುಣಿಯಲ್ಲಿ ಕಾಯ್ದ ಎಣ್ಣೆಯಲ್ಲಿ ಒಂದೊಂದೆ ಕಟ್ಲೇಟ್ ತೇಲಿ ಬಿಡಿ. ಕಟ್ಲೇಟ್ ಕೆಂಪಾದ ಬಳಿಕ ಹೊರ ತೆಗೆಯಿರಿ. ರುಚಿಯಾದ ಕಟ್ಲೇಟ್ ಈಗ ತಿನ್ನಲು ರೆಡಿ.
ಟೊಮೆಟೊ ಸಾಸ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಕಟ್ಲೇಟ್ ತಿನ್ನಲು ಚೆನ್ನಾಗಿರುತ್ತದೆ. ಚಳಿಗಾಲದಲ್ಲಿ ಕಟ್ಲೇಟಿನ ಜೊತೆ ಬಿಸಿಬಿಸಿ ಕಾಫಿ ಅಥವಾ ಚಹಾ ಹೀರುತ್ತಿದ್ದರೆ ಸಂಜೆ ಸರಿದದ್ದೇ ಗೊತ್ತಾಗುವುದಿಲ್ಲ.



Click it and Unblock the Notifications
