Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ದಸರೆ ಸ್ಪೆಷಲ್; ಬಿಸಿಬಿಸಿ ಬೋಂಡಾ
ಈಗ ಎಲ್ಲೆಲ್ಲೂ ಮೈಸೂರು ದಸರಾ ಸಂಭ್ರಮ. ಮೈಸೂರು ಅಡುಗೆಗಳನ್ನು ನಾಲಿಗೆ ಬಯಸುತ್ತದೆ. ಅದನ್ನು ತಣಿಸಲೆಂದೆ ಮೈಸೂರಿನಿಂದ ಸುನಂದಾ ಅವರು ಮೈಸೂರು ಬೋಂಡಾವನ್ನು ರವಾನಿಸಿದ್ದಾರೆ. ತಯಾರಿಸುವುದು ಅಷ್ಟು ಕಷ್ಟ ಅಲ್ಲ. ಕರಿದ ಪದಾರ್ಥ, ಎಣ್ಣೆ ಪದಾರ್ಥ ಎಂದು ದೂರದೆ ಒಂದೆರಡು ಮೈಸೂರು ಬೋಂಡಾಗಳನ್ನು ಮನಸಾರೆ ಸವಿಯಿರಿ!
ಬೇಕಾಗುವ ಪದಾರ್ಥಗಳು
ಮೈದಾ: 1 ಕಪ್ಪು
ಹುಳಿ ಮಜ್ಜಿಗೆ: 1 ಕಪ್ಪು
ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ: 1
ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ: 2
ಹೆಚ್ಚಿಕೊಂಡ ಕೊತ್ತಂಬರಿ: ½ ಹಿಡಿ
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೇಲಿನ ಎಲ್ಲ ವಸ್ತುಗಳನ್ನು ಅಗಲವಾದ ಪಾತ್ರೆಗೆ ಹಾಕಿ ಚೆನ್ನಾಗಿ ನಾದಿಕೊಂಡು ಬೋಂಡಾ ಹಿಟ್ಟನ್ನು ತಯಾರಿಸಿಕೊಳ್ಳಿ. ಉದ್ದನೆಯ ಸೌಟಿನಲ್ಲಿ ನಾದಿದ ಹಿಟ್ಟನ್ನು ತೆಗೆದುಕೊಂಡು ಬಿಸಿಯಾದ ಎಣ್ಣೆಗೆ ಬಿಡಿ (ಒದ್ದೆ ಮಾಡಿಕೊಂಡು ಬರಿಗೈನಿಂದಲೂ ಬೋಂಡಾ ಹಿಟ್ಟನ್ನ್ನು ಎಣ್ಣೆಗೆ ಬಿಡಬಹುದು. ಆದರೆ ಎಚ್ಚರಿಕೆ ಅಗತ್ಯ). ತೇವವಿಲ್ಲದ ಮಗಚುವ ಕೈ ಹಾಗೂ ಸೌಟಿನಿಂದ ಹಿಟ್ಟನ್ನು ಚೆನ್ನಾಗಿ ಕರಿಯಿರಿ. ಹೊಂಬಣ್ಣಕ್ಕೆ ತಿರುಗುವವರೆಗೂ ಕರಿಯಿರಿ. ನಂತರ ಮಗಚುವ ಕೈನಿಂದ ಕರಿದ ಬೋಂಡಾವನ್ನು ಎಣ್ಣೆಯಿಂದ ಹೊರತೆಗೆಯಿರಿ.ಬಿಸಿಬಿಸಿಯಾದ ಮೈಸೂರು ಬೋಂಡಾಗಳನ್ನು ಚಟ್ನಿಯೊಂದಿಗೆ ಅಥವಾ ಕಾಫಿ/ಟೀಗಳೊಂದಿಗೆ ಬಡಿಸಿ.



Click it and Unblock the Notifications
