Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಕ ಚಕ ಮಾಡಬಹುದು ಈ ಚೈನೀಸ್ ಬೇಲ್

ಚೈನೀಸ್ ಬೇಲ್ ಗೆ ಏನು ಬೇಕು?
* ನೂಡಲ್ಸ್
* ಕತ್ತರಿಸಿದ ಈರುಳ್ಳಿ, ಸೌತೆಕಾಯಿ, ಕ್ಯಾಪ್ಸಿಕಂ, ಕ್ಯಾರೆಟ್
* ಟೊಮೆಟೊ
* ಟೊಮೆಟೊ ಸಾಸ್
* ಮೈದಾ
* ಕಾರ್ನ್ ಫ್ಲೋರ್ (ಜೋಳದ ಹಿಟ್ಟು)
* ಮೆಣಸಿನ ಪುಡಿ, ಉಪ್ಪು
* ಕೊತ್ತಂಬರಿ
ಚೈನೀಸ್ ಬೇಲ್ ಮಾಡೋದು ಹೇಗೆ?
1. ಮೊದಲು ನೂಡಲ್ಸ್ ಬೇಯಿಸಿ ತಣ್ಣಗಿನ ನೀರಿನಿಂದ ತೊಳೆದು ಹರಡಬೇಕು. ನೂಡಲ್ಸ್ ಅಂಟಬಾರದೆಂದರೆ ಬೇಯಿಸುವಾಗ ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಬೇಕು.
2. ನೂಡಲ್ಸ್ ಮೇಲೆ ಎಣ್ಣೆ ಹಾಕಿ ಅದರ ಮೇಲೆ ಮೈದಾ ಮತ್ತು ಕಾರ್ನ್ ಫ್ಲೋರ್ ಹಿಟ್ಟನ್ನು ಉದುರಿಸಬೇಕು.
3. ಈಗ ನೂಡಲ್ಸ್ ಅನ್ನು ಎಣ್ಣೆಯಲ್ಲಿ ಹುರಿದುಕೊಳ್ಳಬೇಕು.
4. ನಂತರ ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿಟ್ಟುಕೊಂಡಿದ್ದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಕ್ಯಾಪ್ಸಿಕಂ, ಕ್ಯಾರೆಟ್ ಹಾಕಿ 5-7 ನಿಮಿಷ ಹುರಿದುಕೊಳ್ಳಬೇಕು.
5. ಈ ತರಕಾರಿಯ ಮಿಶ್ರಣಕ್ಕೆ ತಕ್ಕಂತೆ ಮೆಣಸಿನ ಪುಡಿ, ಉಪ್ಪು ಮತ್ತು ಟೊಮೆಟೊ ಸಾಸ್ ಹಾಕಬೇಕು.
6. ಕೊನೆಗೆ ಎಣ್ಣೆಯಲ್ಲಿ ಹುರಿದಿದ್ದ ನೂಡಲ್ಸ್ ಗೆ ತರಕಾರಿ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕದಡಿ 3-4 ನಿಮಿಷ ಚೆನ್ನಾಗಿ ತಿರುಗಿಸಬೇಕು.
ಈಗ ಚೈನೀಸ್ ಬೇಲ್ ತಿನ್ನಲು ತಯಾರಾಗಿದೆ. ಬಿಸಿಬಿಸಿಯಾದ ಚೈನೀಸ್ ಬೇಲ್ ರಜಾ ದಿನಕ್ಕೆ ಹೇಳಿ ಮಾಡಿಸಿದಂತಿರುತ್ತೆ.



Click it and Unblock the Notifications
