Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ತಿನ್ನೋದಕ್ಕೆ ಪಕ್ಕಾ ಈ ಪನೀರ್ ಟಿಕ್ಕಾ

ಪನೀರ್ ಟಿಕ್ಕಾಗೆ ಏನೇನು ಬೇಕು?
* 300 ಗ್ರಾಂ ಪನೀರು
* 1 ಈರುಳ್ಳಿ, 1 ಟೊಮೊಟೊ
* 1 ಕ್ಯಾಪ್ಸಿಕಂ (ದುಂಡು ಮೆಣಸಿನಕಾಯಿ)
* 1 ಚಮಚ ವಿನೆಗರ್
* 1 ಚಮಚ ಹಸಿರು ಮೆಣಸಿನ ಕಾಯಿ ಪೇಸ್ಟ್
* 1 ಚಮಚ ಜೀರಿಗೆ ಪುಡಿ
* ಕೊತ್ತಂಬರಿ
* 1 ಚಮಚ ಬೆಳ್ಳುಳ್ಳಿ ಮತ್ತು 1 ಚಮಚ ಶುಂಠಿ ಪೇಸ್ಟ್
* 2 ಚಮಚ ಚಾಟ್ ಮಸಾಲ ಪೌಡರ್
* ಉಪ್ಪು, ಎಣ್ಣೆ, ಕೆಂಪು ಮೆಣಸಿನಕಾಯಿ ಪುಡಿ
ಪನೀರ್ ಟಿಕ್ಕಾ ತಯಾರಿಸುವ ವಿಧಾನ:
ಮೊದಲು ಶುಂಠಿ, ಬೆಳ್ಳುಳ್ಳಿ, ವಿನಿಗರ್, ಹಸಿಮೆಣಸಿನಕಾಯಿ ಪೇಸ್ಟ್, ಕೆಂಪು ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ ಮತ್ತು ಉಪ್ಪನ್ನು ಚೆನ್ನಾಗಿ ಕಲೆಸಿ ಅದರಲ್ಲಿ ಕತ್ತರಿಸಿಕೊಂಡ ಪನೀರನ್ನು ಅದ್ದಿಕೊಂಡು 3 ಗಂಟೆ ಫ್ರಿಡ್ಜ್ ನಲ್ಲಿ ಇಡಬೇಕು.
ನಂತರ ಈರುಳ್ಳಿ, ಟೊಮೊಟೊ, ಕ್ಯಾಪ್ಸಿಕಂ ಕತ್ತರಿಸಿಕೊಂಡು ಅದನ್ನೂ ಉಳಿದ ಪೇಸ್ಟ್ ನಲ್ಲಿ ಅದ್ದಿ ಇಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದ್ದಿ ಇಟ್ಟುಕೊಂಡಿದ್ದ ಪನೀರನ್ನು ಚೆನ್ನಾಗಿ ಕರಿಯಬೇಕು. ನಂತರ ತರಕಾರಿಗಳನ್ನೂ ಕರಿಯಬೇಕು. ಈಗ ಕರಿದ ಪನೀರ್ ಮತ್ತು ತರಕಾರಿಯನ್ನು ತಟ್ಟೆಯಲ್ಲಿ ಹಾಕಿ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಮೇಲೆ ಉದುರಿಸಬೇಕು. ಈಗ ರುಚಿಕರವಾದ ಪನೀರ್ ಟಿಕ್ಕಾ ತಿನ್ನೋದಕ್ಕೆ ರೆಡಿ...



Click it and Unblock the Notifications
