Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಾಬೂದಾಣಿ ವಡಿ ಮಾಡೋಣ ನಡಿ

ದಕ್ಷಿಣ ಭಾರತದಲ್ಲಿ ಸೀಮೆ ಅಕ್ಕಿ ಅಥವಾ ಸಬ್ಬಕ್ಕಿ ಸಂಡಿಗೆ, ಪಾಯಸಗಳಲ್ಲಿ ಉಪಯುಕ್ತವಾದರೆ ಕೇರಳದಲಿ ಮರಚೀನಿ (ಸಬ್ಬಕ್ಕಿ ಅನ್ನ) ಕೋಳಿ, ಮೀನು ಸಾರು, ಸಿಹಿ ಅಥವಾ ಉಪ್ಪು ಹಾಕಿದ ಸಬ್ಬಕ್ಕಿ ಗಂಜಿಗೆ ಉಪಯೋಗಿಸಲ್ಪಡುತ್ತದೆ.
ಸಾಬೂದಾಣಿ ವಡಿ ಮಾಡಿದಾಗಲೆಲ್ಲಾ ಹೋಮಿಯೋಪಥಿ ಔಷಧಿಯ ಗೋಲಿಗಳನ್ನು ಹೋಲುವ ಸಾಬೂದಾನಾ, ಸಾಬೂದಾಣಿ, ಸಬ್ಬಕ್ಕಿ, ಸಾಗೂ, ಜವರ್ಶಿ(ತಮಿಳು), ಯಾವುದರಿಂದ ಮಾಡಿದ್ದು ಎಂದು ಕೇಳುತ್ತಿದ್ದ ಮಗನ ಪ್ರಶ್ನೆಗೆ "ಗೊತ್ತಿಲ್ಲ" ಉತ್ತರ ಸದಾ ಸಿದ್ಧವಾಗಿರುತ್ತಿತ್ತು. ಮೈದಾ/ಅಕ್ಕಿಯಿಂದ ಮಾಡುತ್ತಾರೇನೊ, ನೆನೆಸಿದರೆ ಪಿಚ ಪಿಚ ಅನ್ನುತ್ತೆ ಎಂದುಕೊಳ್ಳುತ್ತಿದ್ದೆ. ಸಬ್ಬಕ್ಕಿ ಹೇಗೆ ಮಾಡ್ತಾರೆ ಅನ್ನೋದು ತಿಳಿಯೋಕ್ಕೆ ಹೋಗಿರಲಿಲ್ಲ. ಖಿಚಡಿ ನೋಡಿ ವಡಿ ರೆಸಿಪಿ ಬರೆಯಬೇಕು ಎನಿಸಿದಂತೆ ಮಾಹಿತಿಯ ಮೊರೆಹೊಕ್ಕಾಗ ಅರಿತದ್ದು ಸಾಬೂದಾಣಿಯ ಮೂಲ ಮರಗೆಣಸು. ಅದೇ ಅಲ್ಲದೆ ಮೈದಾ ಹಿಟ್ಟಿನ ಮೂಲ ಕೂಡ ಮರಗೆಣಸು ಎಂದು.
ಇದೀಗ ಮಳೆಗಾಲ, ಎಲ್ಲರಿಗೂ ಇಷ್ಟ ಕೋತಿನಾಷ್ಟ. ದಿಢೀರ್ ಎಂದು ಮಳೆ ಸುರಿದರೂ ದಿಢೀರ್ ಮಾಡಲಾಗದು ಈ ಸಬ್ಬಕ್ಕಿ ವಡೆ. ಸೊ ಪ್ರೀ ಪ್ಲಾನಿಂಗ್ ಮಾಡಿ, ಸಬ್ಬಕ್ಕಿ ಎರಡು ಗಂಟೆ ಮೊದಲೇ ನೆನೆಸಿಡಿ.
ಬೇಕಾಗುವ ಸಾಮಾನುಗಳು :
1 ದೊಡ್ಡ ಬೇಯಿಸಿದ ಆಲೂಗಡ್ಡೆ
1 ಕಪ್ ನೆನೆಹಾಕಿದ ಸಾಬೂದಾನಾ
1/2 ಕಪ್ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹಿಂಗು, ಜೀರಿಗೆ, ಉಪ್ಪು
(ಮಸಾಲೆ ಅವರವರ ನಾಲಿಗೆಗೆ ತಕ್ಕಂತೆ)
ಮಾಡುವ ವಿಧಾನ :
ಎಲ್ಲವನ್ನೂ ಚೆನ್ನಾಗಿ ಕಲೆಸಿ, ವಡೆ ತಟ್ಟಿ ಬಿಸಿ ಎಣ್ಣೆಯಲಿ ಹಾಕಿ ಕರಿಯಿರಿ. ಸ್ವಲ್ಪ ಕೆಂಬಣ್ಣ ತಿರುಗಿದ ಮೇಲೆ ಮೇಲೆ ಕ್ರಿಸ್ಫಿ, ಸಾಫ್ಟೀ ಸೀಮೆಅಕ್ಕಿ ವಡೆ ರೆಡಿ. ಆಮೇಲೆ ತಿನ್ನುವ ಅಥವಾ ಮಿಗಿಸುವ ಗೋಜಿಗೆ ಹೋಗಬೇಡಿ. ಇಟ್ಟರೆ ತಣ್ಣನೆ, ರಬ್ಬರಿನಂತೆ ಆಗಿ ಪಿಚ, ಪಿಚ ವಡೆ ಆಗಿ ಹೋಗುತ್ತೆ. ಹಾಗಾಗಿ ಬಿಸಿಬಿಸಿಯಿದ್ದಾಗಲೇ ಸವಿಯಿರಿ.
ಕೊತ್ತಂಬರಿ, ಮೆಣಸಿನಕಾಯಿ ಚಟ್ನಿ ಅಥವಾ ತಣ್ಣನೆಯ ಸಕ್ಕರೆ ಹಾಕಿದ ಗಟ್ಟಿ ಮೊಸರಿನೊಂದಿಗೆ ತಿನ್ನುವ ಸಾಬೂದಾಣಿ ವಡಿಯ ಸವಿ ತಿಂದವನೇ ಬಲ್ಲ. ಅದು ಬೇಡ ಎಂದರೆ ಬಿಸಿ ಕಾಫಿ, ಮಸಾಲೆ ಚಾಯ್‌ನೊಂದಿಗೆ ಸವಿಯಿರಿ.



Click it and Unblock the Notifications
