Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರಿಗರಿ ಚಕ್ಕುಲಿ ಮುರುಕು ಮುರಿದು ತಿನ್ನಿ

ನೋಡಿದೊಡನೆಯೇ ಬಾಯಲ್ಲಿ ನೀರೂರಿಸುವ ಈ ಚಕ್ಕುಲಿ ಮುರುಕು ಅಥವಾ ಬೆಣ್ಣೆ ಮುರುಕು ತಮಿಳುನಾಡಿನಲ್ಲಿ ಬಹಳ ಜನಪ್ರಿಯವಾದ ತಿನಿಸು. ಬಾಯಲ್ಲಿಟ್ಟರೆ ಕರಗಿಯೇ ಹೋಗುವುದೇನೋ ಎನ್ನುವಷ್ಟು ಗರಿಗರಿ. ಚಕ್ಕುಲಿ ಮುರುಕನ್ನು ತಯಾರಿಸುವಾಗ ಡಬ್ಬದ ತುಂಬ ತಯಾರಿಸಿದಂತೆ ಅನ್ನಿಸಿದರೂ ನೋಡ-ನೋಡುತ್ತಿದ್ದಂತೆಯೇ ಖರ್ಚಾಗಿಬಿಡುತ್ತದೆ!
ಬೇಕಾಗುವ ಸಾಮಗ್ರಿ:
ಮೈದಾಹಿಟ್ಟು: 1 ಲೋಟ
ಕಡಲೆಹಿಟ್ಟು : 1 ಲೋಟ
ಪುಟಾಣಿ ಹಿಟ್ಟು : 1 ಲೋಟ
ಕೆಂಪು ಮೆಣಸಿನ ಪುಡಿ : ಒಂದೂವರೆ ಟೀ ಚಮಚದಷ್ಟು (ಖಾರಕ್ಕೆ ತಕ್ಕಂತೆ)
ಜೀರಿಗೆ : 1 ಟೀ ಚಮಚ (ಓಮ ಸೇರಿಸಿದರೂ ಚೆನ್ನಾಗಿರುತ್ತದೆ)
ಬಿಳಿ ಎಳ್ಳು : 1 ಟೀ ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ಅಡುಗೆ ಸೋಡಾ : 1 ಚಿಟಿಕೆ
ಬೆಣ್ಣೆ : 1 ನಿಂಬೆಗಾತ್ರದಷ್ಟು
ನೀರು : ಸ್ವಲ್ಪ (ಹಿಟ್ಟನ್ನು ಕಲಸಲು)
ಕರಿಯಲು ಎಣ್ಣೆ
ಮಾಡುವ ವಿಧಾನ: ಎಲ್ಲ ಬಗೆಯ ಹಿಟ್ಟುಗಳು, ಮೆಣಸಿನ ಪುಡಿ, ಉಪ್ಪು, ಎಳ್ಳು, ಜೀರಿಗೆ, ಸೋಡಾ - ಇಷ್ಟನ್ನೂ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಬೆಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಂಡು ಹಿಟ್ಟಿನ ಮಿಶ್ರಣದ ಮೇಲೆ ಸುರಿಯಿರಿ. ಹಿಟ್ಟನ್ನು ಒಮ್ಮೆ ಕಲಸಿಕೊಂಡು, ನಂತರ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿಕೊಳ್ಳುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಕಲಸಿದ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಹಾಕಿಕೊಂಡು ಕಾದ ಎಣ್ಣೆಯಲ್ಲಿ ಹಿಟ್ಟನ್ನು ಚಕ್ಕುಲಿ ಒರಳಿನಿಂದ ಒತ್ತುತ್ತಾ ಹೋಗಿ. ಉರಿ ತುಂಬಾ ಜೋರಾಗಿದ್ದರೆ ಮುರುಕು ಚೆನ್ನಾಗಿ ಬೇಯುವುದಿಲ್ಲ. ಮಧ್ಯಮ ಉರಿಯಲ್ಲಿ ಕೆಂಪಗೆ ಕರಿದು ಒಂದು ಟಿಶ್ಯೂ ಪೇಪರ್ ಮೇಲೆ ಹರವಿ, ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ.ಹಿಟ್ಟಿಗೆ ಬೆಣ್ಣೆ ಸೇರಿಸುವಾಗ ತುಂಬ ಜಾಸ್ತಿ ಬೆಣ್ಣೆ ಸೇರಿಸಲು ಹೋಗಬೇಡಿ. ಬೆಣ್ಣೆಯ ಪ್ರಮಾಣ ಹೆಚ್ಚಾದರೆ ಚಕ್ಕುಲಿ ಮುರುಕು ಪುಡಿಪುಡಿಯಾಗಿಬಿಡುತ್ತದೆ.



Click it and Unblock the Notifications
