Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ವಾವ್! ಮನೆಯಲ್ಲಿಯೆ ಮಾಡಬಹುದು ಚನ್ನಾ ಬತುರ
ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋದಾಗ ಸಿಗುವ ಚನ್ನಾ ಬತುರ ತಿಂಡಿಯ ರುಚಿ ಸವಿದಾಗ ಇದನ್ನು ಮಾಡುವುದು ಕಷ್ಟದ ಕೆಲಸವೆಂದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ರುಚಿಕರವಾದ ಈ ತಿಂಡಿಯನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಚನ್ನಾ ಬತುರ ಮಾಡುವ ವಿಧಾನ:
ಬತುರ ಮಾಡಲು ಬೇಕಾಗುವ ಸಾಮಾಗ್ರಿಗಳು
* ಮೈದಾ 2 ಕಪ್
* ಹಾಲು 1 ಕಪ್
ಮೊಸರು 1/2 ಕಪ್
* ಅಡುಗೆ ಸೋಡಾ 1/2 ಚಮಚ
* ಸಕ್ಕರೆ 2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಚನ್ನಾ ಮಾಡಲು ಬೇಕಾಗುವ ಸಾಮಾಗ್ರಿಗಳು
* ಕಾಬೂಲಿ ಕಡಲೆ( ದೊಡ್ಡ ಕಡಲೆ) 1 ಕಪ್
* ಈರುಳ್ಳಿ 1
* ಟಿಮೆಟೊ 1
* ಹಸಿಮೆಣಸಿನ ಕಾಯಿ 2
* ಶುಂಠಿ ಪೇಸ್ಟ್
* ಮೆಣಸಿನ ಪುಡಿ 1 ಚಮಚ
* ಕೊತ್ತಬರಿ ಪುಡಿ 2 ಚಮಚ
* ಅರಿಶಿಣ 1/2 ಚಮಚ
* ಗರಂ ಮಸಾಲ 1 ಚಮಚ
* ಜೀರಿಗೆ 1 ಚಮಚ
* ಸ್ವಲ್ಪ ಚಕ್ಕೆ ಲವಂಗ, 2 ಬೆಳ್ಳುಳ್ಳಿ ಎಸಳು
* ಎಣ್ಣೆ
* ರುಚಿಗೆ ತಕ್ಕ ಉಪ್ಪು
* ಅಲಕಾರಕ್ಕೆ ಕೊತ್ತಂಬರಿ ಸೊಪ್ಪು
ಬತುರ ತಯಾರಿಸುವ ವಿಧಾನ:
1. ಎಲ್ಲಾಸಾಮಾಗ್ರಿಗಳನ್ನು ಹಾಕಿ ಮಿಶ್ರ ಮಾಡಬೇಕು. ಹಿಟ್ಟು ಮೃದುವಾಗುವವರೆಗೆ ಕಲೆಸಬೇಕು. ನಂತರ ಒಂದು ಗಂಟೆ ಕಾಲ ಇಡಬೇಕು.
2. ನಂತರ ಹಿಟ್ಟಿನಿಂದ ಸಾಧಾರಣ ಗಾತ್ರದಲ್ಲಿ ಉಂಡೆ ಕಟ್ಟಬೇಕು.
3. ಆ ಉಂಡೆಯನ್ನು ತಟ್ಟಿ ಎಣ್ಣೆಯಲ್ಲಿ ಹಾಕಿ, ಕಂದು ಬಣ್ಣ ಬರುವಾಗ ತೆಗೆಯಬೇಕು.
ಚನ್ನಾ ತಯಾರಿಸುವ ವಿಧಾನ:
1. ಕಾಬೂಲ್ ಕಡಲೆಯನ್ನು ಒಂದು ರಾತ್ರಿ ನೆನೆ ಹಾಕಬೇಕು. ನಂತರ ಅದನ್ನು ಬೇಯಿಸಬೇಕು.
2. ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಬೇಕು.
3. ಬಾಣಲೆಯನ್ನು ಉರಿಯಲ್ಲಿ ಇಟ್ಟು ಸ್ವಲ್ಪ ಎಣ್ಣೆ ಹಾಕಬೇಕು.
4. ಎಣ್ಣೆ ಬಿಸಿಯಾದಾಗ ಜೀರಿಗೆ, ಸ್ವಲ್ಪ ಬೆಳ್ಳುಳ್ಳಿ ಎಸಳು, ಚಕ್ಕೆ, ಲವಂಗ ಸೇರಿಸಬೇಕು.
5. ನಂತರ ಈರುಳ್ಳಿ ಪೇಸ್ಟ್ , ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಎಣ್ಣೆ ಆ ಮಿಶ್ರಣದ ಮೇಲೆ ತೇಲುವವರೆಗೆ ಕುದಿಸಬೇಕು.
6. ಈಗ ಎಲ್ಲಾ ಮಸಾಲೆ ಪುಡಿಗಳನ್ನು ಸೇರಿಸಿ , ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಸೌಟ್‌ನಿಂದ ಆಡಿಸಬೇಕು.
7. ಈಗ ಟೊಮೆಟೊ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬಿಸಿಮಾಡಬೇಕು. ನಂತರ ಸೌಟ್‌ನಿಂದ ಕುಟ್ಟಿ ಟೊಮೆಟೊವನ್ನು ಪೇಸ್ಟ್ ರೀತಿ ಮಾಡಬೇಕು.
8. ಈಗ ಬೇಯಿಸಿದ ಕಡಲೆಯನ್ನು ಹಾಕಿ ಮಿಶ್ರ ಮಾಡಿ ಗಟ್ಟಿ ಗ್ರೇವಿಯಾಗುವವರೆಗೆ ಬೇಯಿಸಬೇಕು. ನಂತರ ಇದನ್ನು ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚನ್ನಾ ರೆಡಿ.



Click it and Unblock the Notifications
