Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಟೀ ಜೊತೆ ಸವೆಯಲು ನೂಡಲ್ಸ್ ಪಕೋಡ

ಬೇಕಾಗುವ ಸಾಮಾಗ್ರಿಗಳು:
* 250 ಗ್ರಾಂ ನೂಡಲ್ಸ್
* ಒಂದೂವರೆ ಕಪ್ ಮೈದಾ
* ಕತ್ತರಿಸಿದ ಈರುಳ್ಳಿ 1
* ಸ್ವಲ್ಪ ಕರಿಮೆಣಸಿನ ಪುಡಿ
* ಶುಂಠಿ ಪೇಸ್ಟ್ 1 ಚಮಚ
* 5-6 ಹಸಿಮೆಣಸಿನ ಕಾಯಿ
* 1/2 ಕಪ್ ಮೈದಾ
* 1 ಕಪ್ ಹಾಲು
* 1/2 ಕಪ್ ಬ್ರೆಡ್ ಚೂರುಗಳು
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ಮಾಡುವ ವಿಧಾನ:
1. ನೂಡಲ್ಸ್ ಅನ್ನು ಚಿಟಿಕೆಯಷ್ಟು ಉಪ್ಪು ಹಾಕಿ ಬಿಸಿನೀರಿನಲ್ಲಿ ಹಾಕಿ ಬೇಯಿಸಬೇಕು. ಅಂಟದಿರಲು ಸ್ವಲ್ಪ ಎಣ್ಣೆ ಹಾಕಬೇಕು.
2. ಈಗ ಬೆಂದ ನೂಡಲ್ಸ್ಗೆ ಶುಂಠಿ ಪೇಸ್ಟ್, ಕರಿಮೆಣಸಿನ ಪುಡಿ, ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಹಾಕಿ ಮಿಶ್ರ ಮಾಡಿ ಪಕೋಡಕ್ಕೆ ಉಂಡೆ ಕಟ್ಟಿದ ರೀತಿ ಕಟ್ಟಬೇಕು.
3. ಈಗ ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಬ್ರೆಡ್ ಚೂರುಗಳನ್ನು ಹಾಕಿ ಹುರಿದು ತಟ್ಟೆಯಲ್ಲಿ ಇಡಬೇಕು.
4. ಈಗ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಅದಕ್ಕೆ ಮೈದಾ ಹಾಕಿ 1 ನಿಮಿಷದ ಬಳಿಕ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಮೈದಾ ಸ್ವಲ್ಪ ಗಟ್ಟಿ ಪೇಸ್ಟ್ ಆದ ಮೇಲೆ ಉರಿಯಿಂದ ತೆಗೆಯಬೇಕು.
5. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಬೇಕು.
6. ಈಗ ನೂಡಲ್ಸ್ ಪಕೋಡವನ್ನು ಈ ಮೈದಾ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಚೂರುಗಳ ಮೇಲೆ ಉರುಳಿಸಿ ಎಣ್ಣೆಯಲ್ಲಿ ಹಾಕಬೇಕು. ಪಕೋಡ ಕಂದು ಬಣ್ಣಕ್ಕೆ ಬಂದಾಗ ತೆಗೆದರೆ ರುಚಿಕರವಾದ ಪಕೋಡ ರೆಡಿ.



Click it and Unblock the Notifications
