Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಿನ್ನಲು ಬಲು ರುಚಿಯಾಗಿರುತ್ತೆ ಅಣಬೆ ಆಮ್ಲೇಟ್

ಆಮ್ಲೇಟ್ ಮಾಡುವಾಗ ಟೊಮೆಟೊ ಕತ್ತರಿಸಿ ಹಾಕಬಹುದು, ಮತ್ತೆ ಕೆಲವರು ಆಲೂಗೆಡ್ಡೆ ಬೇಯಿಸಿ ಅದನ್ನು ಹಿಸುಕಿ ಮೊಟ್ಟೆ ಜೊತೆ ಮಿಶ್ರ ಮಾಡಿ ಸ್ವಲ್ಪ ಮಸಾಲೆ ಪುಡಿ ಹಾಕಿ ಆಮ್ಲೇಟ್ ಮಾಡುತ್ತಾರೆ. ಇವತ್ತು ನಾವು ರುಚಿಕರವಾದ ಅಣಬೆ ಆಮ್ಲೇಟ್ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಾಗ್ರಿಗಳು:
1. ಮೊಟ್ಟೆ 2
2. ಕತ್ತರಿಸಿದ ಅಣಬೆ 2 ಚಮಚ (ಬಟನ್ ಮಶ್ರೂಮ್)
3. ಚಿಕ್ಕ ಗಾತ್ರದ ಈರುಳ್ಳಿ 5
4. ಕರಿಮೆಣಸಿನ ಪುಡಿ 1/2 ಚಮಚ
5. ರುಚಿಗೆ ತಕ್ಕ ಉಪ್ಪು
6. ಕೆಂಪು ಮೆಣಸಿನ ಪುಡಿ
ತಯಾರಿಸುವ ವಿಧಾನ:
1. ಮೊಟ್ಟೆಯನ್ನು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಕರಿಮೆಣಸಿನ ಪುಡಿ, ಸ್ವಲ್ಪ ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
2. ಈಗ ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿಮಾಡಬೇಕು. ಈಗ ಅಣಬೆಯನ್ನು ಚೆನ್ನಾಗಿ ತೊಳೆದು ಬೆಣ್ಣೆಯಲ್ಲಿ ಹಾಕಿ 2-3 ನಿಮಿಷ ಹುರಿಯಬೇಕು.
3. ಈಗ ತವಾದಲ್ಲಿ ಬೆಣ್ಣೆ ಹಾಕಿ ಅದಕ್ಕೆ ಕಲೆಸಿದ ಮೊಟ್ಟೆ ಮಿಶ್ರಣವನ್ನು ಹಾಕಬೇಕು. ನಂತರ ಹುರಿದ ಅಣಬೆಯನ್ನು ಅದರ ಮೇಲೆ ಉದುರಿಸಬೇಕು.
4. ಮೊಟ್ಟೆ ಸ್ವಲ್ಪ ಬೆಂದಾಗ ಅದನ್ನು ಮಗುಚಿ ಹಾಕಿ ನಂತರ ತಯಾರಾದ ಆಮ್ಲೇಟ್ ಅನ್ನು ತೆಗೆದು ತಟ್ಟೆಯಲ್ಲಿ ಹಾಕಿ. ಈಗ ತಯಾರಾದ ಅಣಬೆ ಆಮ್ಲೇಟ್ ಬಿಸಿಯಾಗಿರುವಾಗಲೆ ತಿಂದರೆ ತುಂಬಾ ರುಚಿಕರವಾಗಿರುತ್ತೆ.



Click it and Unblock the Notifications
