Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಕಿಚನ್ ನಲ್ಲಿ ಜೋಳದ ಮಂಚೂರಿಯನ್

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಬೇಯಿಸಿದ ಜೋಳ
* 2 ಚಮಚ ಜೋಳದ ಹಿಟ್ಟು
* 1 ಚಮಚ ಮೈದಾ
* 1 ಚಮಚ ಕಡಲೆಹಿಟ್ಟು
* ರುಚಿಗೆ ತಕ್ಕ ಉಪ್ಪು
* 1 ಚಮಚ ಮೆಣಸಿನ ಪುಡಿ
* ಒಂದು ಚಿಟಿಕೆಯಷ್ಟು ಸೋಡಾ
* ಎಣ್ಣೆ
ಮಂಚೂರಿಯನ್ ಗೆ ಬೇಕಾಗುವ ಸಾಮಾಗ್ರಿಗಳು:
* 1 ದೊಡ್ಡ ಮೆಣಸು
* 1 ಈರುಳ್ಳಿ
* 1/2 ಚಮಚ ಕರಿಮೆಣಸಿನ ಪುಡಿ
* 1 ಚಮಚ ಶುಂಠಿ ಪೇಸ್ಟ್
* 1 ಚಮಚ ಟೊಮೆಟೊ ಸಾಸ್
* 1 ಚಮಚ ಸೋಯಾ ಸಾಸ್
* ರುಚಿಗೆ ತಕ್ಕ ಉಪ್ಪು
* 1 ಚಮಚ ಎಣ್ಣೆ
ತಯಾರಿಸುವ ವಿಧಾನ:
1. ಎಲ್ಲಾ ಹಿಟ್ಟನ್ನು ಮಿಶ್ರ ಮಾಡಿ ಉಪ್ಪು ಮತ್ತು ಸೋಡಾ ಹಾಕಿ ಹಿಟ್ಟು ಗಟ್ಟಿಯಾಗಿರುವಂತೆ ಕಲೆಸಬೇಕು. ಅದಕ್ಕೆ ಬೇಯಿಸಿದ ಜೋಳ ಮತ್ತು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಮಿಶ್ರ ಮಾಡಬೇಕು.
2. ಈ ಮೇಲಿನ ಮಿಶ್ರಣವನ್ನು ಚಿಕ್ಕ ಉಂಡೆ ಮಾಡಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಪ್ರತ್ಯೇಕವಾದ ಬಾಣಲೆಯಲ್ಲಿ ಮಂಚೂರಿಯನ್ ತರಕಾರಿಗಳನ್ನು ಕತ್ತರಿಸಿ ಹಾಕಿ, ಅದಕ್ಕೆ ಕರಿಮೆಣಸಿನ ಪುಡಿ, ಟೊಮೆಟೊ ಮತ್ತು ಸೋಯಾ ಸಾಸ್ ಸೇರಿಸಿ ಮಿಶ್ರ ಮಾಡಬೇಕು.
4. ಬಾಣಲೆಯಲ್ಲಿ ಎಣ್ಣೆ ಹಾಕಿ ಮಂಚೂರಿಯನ್ ಮಿಶ್ರಣವನ್ನು ಇದರಲ್ಲಿ ಹಾಕಿ ಮೆಣಸು ಮೆತ್ತಗಾಗುವರೆಗೆ ಸ್ವಲ್ಪ ಹೊತ್ತು ಬಿಸಿಮಾಡಬೇಕು.
5. ಎಣ್ಣೆಯಲ್ಲಿ ಕರಿದ ಜೋಳವನ್ನು ಮಂಚೂರಿಯನ್ ಮಿಶ್ರಣದ ಜೊತೆ ಸೇರಿಸಬೇಕು.



Click it and Unblock the Notifications
