Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶಿವರಾತ್ರಿಗೆ ಸ್ಪೆಷಲ್ ಅಡುಗೆ ಈ ಪ್ಯಾನ್ ಕೇಕ್

ಬೇಕಾಗುವ ಸಾಮಾಗ್ರಿಗಳು:
* 1 ದೊಡ್ಡ ಆಲೂಗೆಡ್ಡೆ
* 1 ಸಿಹಿ ಕುಂಬಳಕಾಯಿ
* 2 ಹಸಿ ಮೆಣಸು
* ಒಂದು ಚಿಕ್ಕ ತುಂಡು ಶುಂಠಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
* 1/4 ಕಪ್ ಮೊಸರು
* 1 ಕಪ್ ಕುಟ್ಟೂ ಕಾ ಆಟಾ ಪುಡಿ (ಸೂಪರ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)
* 1/2 ಕಪ್ ಸಿಂಗಾರೆ ಕಾ ಆಟಾ ಪುಡಿ (ಸೂಪರ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಶುಂಠಿ ಮತ್ತು ಹಸಿಮೆಣಸನ್ನು ಅನ್ನು ಪೇಸ್ಟ್ ಮಾಡಿ ಒಂದು ಚಿಕ್ಕ ಬಟ್ಟಲಿನಲ್ಲಿಡಿ.
2. ಒಂದು ಬಟ್ಟಲಿಗೆ ತಣ್ಣೀರು ಹಾಕಿ , ಸ್ವಲ್ಪ ಉಪ್ಪು ಹಾಕಬೇಕು. ಈಗ ಆ ನೀರಿಗೆ ಆಲೂಗೆಡ್ಡೆ ಮತ್ತು ಸಿಹಿಕುಂಬಳಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಬೇಕು.
3. ಮತ್ತೊಂದು ದೊಡ್ಡ ಬಟ್ಟಲಿನಲ್ಲಿ ಆಟಾ ಪುಡಿಗಳನ್ನು ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಬೇಕು.
4. ಈಗ ಸಿಹಿಕುಂಬಳಕಾಯಿ ಮತ್ತು ಆಲೂಗೆಡ್ಡೆಯಲ್ಲಿರುವ ನೀರನ್ನು ಚೆಲ್ಲಿ ಅದನ್ನು ಆಟಾ ಮಿಶ್ರಣದ ಜೊತೆ ಬೆರೆಸಬೇಕು.
5. ಈ ಮಿಶ್ರಣಕ್ಕೆ ಶುಂಠಿ ಮತ್ತು ಹಸಿಮೆಣಸಿನ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ( ಕಲ್ಲುಪ್ಪನ್ನು ನೀರು ಮಾಡಿ ಸೇರಿಸಿ) ಹಾಕಿ ಹಿಟ್ಟು ಗಟ್ಟಿಯಾಗಿರುವಂತೆ (ದೋಸೆಗೆ ಮಾಡುವ ರೀತಿಯಲ್ಲಿ )ಕಲೆಸಿ 30 ನಿಮಿಷ ಕಾಲ ಇಡಬೇಕು.
6. ಈಗ ಒಂದು ಚಮಚ ಬಿಸಿ ಎಣ್ಣೆಯನ್ನು ಈ ಮಿಶ್ರಣದ ಜೊತೆ ಸೇರಿಸಿ ಚೆನ್ನಾಗಿ ಕಲೆಸಬೇಕು.
7. ನಾನ್ ಸ್ಟಿಕ್ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ 1 ಚಮಚ ಎಣ್ಣೆ ಹಾಕಿ ಹಿಟ್ಟನ್ನು ಮಧ್ಯದಲ್ಲಿ ಸುರಿದು ಅದು ಆ ಬಾಣಲೆ ತುಂಬಾ ಹರಡುವಂತೆ ಬಾಣಲೆಯನ್ನು ಸ್ವಲ್ಪ ಎತ್ತಿ ಕೈಯಿಂದ ತಿರುಗಿಸಬೇಕು. ಹಾಗೆ ಮಾಡಿದಾಗ ಪಾನ್ ಕೇಕ್ (ಪಾನ್ ಕೇಕ್ ತೆಳ್ಳಗೆ ಇರಲಿ) ಹಿಟ್ಟು ಬಾಣಲೆ ತುಂಬಾ ಹರಡುತ್ತದೆ.
8. ಅದರ ಮೇಲೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿ. ಈ ತಿಂಡಿಯನ್ನು ಒಮ್ಮೆ ಮಗುಚಿ ಹಾಕಿ ಕುರಕಲು ತಿಂಡಿಯಾಗಿರುವರೆಗೆ ಬೇಯಿಸಬೇಕು.
9. ತಯಾರಾದ ಆಲೂಗೆಡ್ಡೆ ಸಿಹಿಕುಂಬಳ ಪ್ಯಾನ್ ಕೇಕ್ ಅನ್ನು ಚಟ್ನಿ ಜೊತೆ ಸೇವಿಸಿದರೆ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
