Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಬರೀ ಕಬಾಬ್ ಅಲ್ಲ, ಚೀಸ್ ಕಬಾಬ್ ರೆಸಿಪಿ
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
1. ಸಣ್ಣ ಚೂರುಗಳಾಗಿ ಕತ್ತರಿಸಿದ ಚಿಕ್ಕನ್
2. ಚೀಸ್ ( ತುರಿದ)
3. ಈರುಳ್ಳಿ 1 (ಕತ್ತರಿಸಿದ್ದು)
4. ಒಂದು ದೊಡ್ಡ ಚಮಚ ಬೆಳ್ಳುಳ್ಳಿ ಪೇಸ್ಟ್
5. ನಿಂಬೆರಸ 2 ಚಮಚ
6. ಹಸಿಮೆಣಸು 5 ( ಕತ್ತರಿಸಿದ್ದು)
7. ಹರಿಮೆಣಸು 1 ಚಮಚ
8. ಕೆಂಪು ಮೆಣಸಿನ ಪುಡಿ 1 ಚಮಚ
9. ಗರಂ ಮಸಾಲ 1 ಚಮಚ
10. ಚಕ್ಕೆ ಪುಡಿ 1 ಚಮಚ
11. ಕತ್ತರಿಸಿದ ಕೊತ್ತಂಬರಿ ಸೊಪ್ಪು (ಸ್ವಲ್ಪ)
12. 2 ಮೊಟ್ಟೆಯ ಬಿಳಿ
13. ಅಕ್ಕಿ ಪುಡಿ 1 ಚಮಚ
14. ಜೋಳದ ಪುಡಿ 2 ಚಮಚ
15. ಎಣ್ಣೆ
16. ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ದೊಡ್ಡ ಬಟ್ಟಲಿನಲ್ಲಿ ಈರುಳ್ಳಿ, ಶುಂಠಿ, ಹಸಿಮೆಣಸು, ಕರಿಮೆಣಸು, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಚಕ್ಕೆ, ರುಚಿಗೆ ತಕ್ಕ ಉಪ್ಪು ಮತ್ತು ನಿಂಬೆರಸ ಹಾಕಿ ಮಿಶ್ರ ಮಾಡಬೇಕು.
2. ಚಿಕ್ಕ ತುಂಡುಗಳಾಗಿ ಕತ್ತರಿಸಿದ ಚಿಕ್ಕನ್ ಆ ಮಿಶ್ರಣದೊಂದಿಗೆ ಚೆನ್ನಾಗಿ ಬೆರೆಸಿ ಒಂದು ಗಂಟೆ ಇಡಬೇಕು.
3. ಈಗ ಜೋಳದ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಅದನ್ನು ಚಿಕ್ಕನ್ ಜೊತೆ ಮಿಶ್ರಮಾಡಬೇಕು. ಈಗ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತದೆ.
4. ಈಗ ಅದರಿಂದ ಕಟ್ ಲೆಟ್ ಮಾಡಿ ಕೈ ಬೆರಳಿನಿಂದ ತೂತ ಮಾಡಬೇಕು, ಈಗ ಅದರಲ್ಲಿ ತುರಿದ ಚೀಸ್ ತುಂಬಿ ಅದನ್ನು ಮುಚ್ಚಬೇಕು.
5. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಬೇಕು. ಅದು ಕುದಿ ಬರುವಾಗ ಕಬಾಬ್ ಅನ್ನು ಮೊಟ್ಟೆಯಲ್ಲಿ ಅದ್ದಿ ಅದನ್ನು ಅಕ್ಕಿ ಪುಡಿಯಲ್ಲಿ ಹಾಕಿ ಎಣ್ಣೆಯಲ್ಲಿ ಹಾಕಬೇಕು. ಕಬಾಬ್ ಚೆನ್ನಾಗಿ ಕರಿದ ಮೇಲೆ ತೆಗೆಯಬೇಕು.
ಈ ಚೀಸ್ ಕಬಾಬ್ ಬಿಸಿ-ಬಿಸಿಯಾಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.
Comments
English summary
Chicken And Cheese Kebab Recipe | Non Vegetarian Recipe | ಚಿಕ್ಕನ್ ಮತ್ತು ಚೀಸ್ ಕಬಾಬ್ ರೆಸಿಪಿ | ನಾನ್ ವೆಜಿಟೇರಿಯನ್ ರೆಸಿಪಿ
Story first published: Saturday, January 21, 2012, 11:34 [IST]
Other articles published on Jan 21, 2012



Click it and Unblock the Notifications