Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರುಚಿಕರ ಸ್ಟ್ರಿಂಗ್ ರೋಲ್ ಮಾಡುವ ಸುಲಭ ವಿಧಾನ

ಸ್ಟ್ರಿಂಗ್ ರೋಲ್ ಒಳಗೆ ಬಳಸುವ ತರಕಾರಿ ಮತ್ತು ಮಸಾಲೆಯಲ್ಲಿ ಸ್ಟ್ರಿಂಗ್ ರೋಲ್ ರುಚಿ ಅಡಗಿರುತ್ತದೆ. ಇದನ್ನು ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದು.
ರೋಲ್ ಗೆ ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಮೈದಾ
* 1/2 ಕಪ್ ಅಕ್ಕಿಪುಡಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ರೋಲ್ ಒಳಗಡೆ ಹಾಕಲು ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಎಲೆಕೋಸು
* 1 ಕಪ್ ಕತ್ತರಿಸಿದ ಈರುಳ್ಳಿ
* 1/2 ಚಮಚ ಶುಂಠಿ ಪೇಸ್ಟ್
* 2 ಹಸಿಮೆಣಸು(ಕತ್ತರಿಸಿದ್ದು)
* ರುಚಿಗೆ ತಕ್ಕಷ್ಟು ಉಪ್ಪು
* ಒಂದು ಚಮಚ ಎಣ್ಣೆ
ತಯಾರಿಸುವ ವಿಧಾನ:
1. ರೋಲ್ ಗೆ ಬೇಕಾಗುವ ಸಾಮಾಗ್ರಿಗಳಲ್ಲಿ ಎಣ್ಣೆಯನ್ನು ಬಿಟ್ಟು ಉಳಿದ ಸಾಮಾಗ್ರಿಗಳನ್ನು ಮಿಶ್ರ ಮಾಡಬೇಕು.
2. ಒಂದು ಬಟ್ಟಲಿನಲ್ಲಿ ಎಲೆಕೋಸು, ಈರುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್, ಉಪ್ಪು ಮಿಶ್ರ ಮಾಡಬೇಕು. ಈಗ ಬಾಣಲೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ಬರುವವರಿಗೆ ಹುರಿಯಬೇಕು. ನಂತರ ಅದನ್ನು ಆರಲು ಬಿಡಬೇಕು.
3. ಈಗ ರೋಲ್ ಗೆ ಕಲಿಸಿಟ್ಟ ಹಿಟ್ಟನ್ನು ಉಂಡೆ ಮಾಡಿ ಅದನ್ನು ಚಪಾತಿಗೆ ತಟ್ಟುವ ಹಾಗೆ ತಟ್ಟಿ ಅದರಲ್ಲಿ ಒಳಗಡೆ ತುಂಬಲು ಇಟ್ಟಿರುವ ಪದಾರ್ಥಗಳನ್ನು ಹಾಕಿ ನಂತರ ರೋಲ್ ಮಾಡಬೇಕು.
4. ಈಗ ಉದ್ದವಾಗಿ ಮಾಡಿದ ರೋಲ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದನ್ನು ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿ ರೋಲ್ ಕಂದು ಬಣ್ಣ ಬರುವಾಗ ತೆಗೆಯಬೇಕು. ಹೀಗೆ ಮಾಡಿದರೆ ರುಚಿಕರವಾದ ವೆಜಿಟೇಬಲ್ ಸ್ಪ್ರಿಂಗ್ ರೋಲ್ ರೆಡಿ.



Click it and Unblock the Notifications
