Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪೇರಳೆ ಹಣ್ಣಿನ ಸಿಹಿ
ಪೇರಲ(ಪೇರಳೆ)ಹಣ್ಣಿನಿಂದ ಸಿಹಿತಿನಿಸೇ ? ರುಚಿನೋಡಿ, ಆಮೇಲೆ ಮಾತಾಡಿ...
- ಜೇನ್ ಡಿಸೋಜಾ
ಬೇಕಾಗುವ ಸಾಮಗ್ರಿಗಳು :
ಪೇರಳೆ ಹಣ್ಣಿನ ತಿರುಳು - 2 ಕಪ್
ಸಕ್ಕರೆ - 2ಕಪ್
ತುಪ್ಪ - 1 ಚಮಚ
ನಿಂಬೆ ರಸ - 2 ಚಮಚ
ಮಾಡುವ ವಿಧಾನ : ಪೇರಳೆ ಹಣ್ಣಿನ ಸಿಪ್ಪೆ ಸುಲಿದು ಚೆನ್ನಾಗಿ ಜಜ್ಜಿ ಬೀಜಗಳನ್ನು ತೆಗೆಯಿರಿ. ಈ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಮಿಶ್ರಣ ಮಾಡಿ. ಪೇರಳೆ ಹಣ್ಣಿನ ಮಿಶ್ರಣದಷ್ಟೇ ಪ್ರಮಾಣದ ಸಕ್ಕರೆ ಬೇಕು. ಈ ಸಕ್ಕರೆ ಮತ್ತು ಪೇರಳೆಯ ತಿರುಳನ್ನು ಚೆನ್ನಾಗಿ ಬೆರೆಸಿ.
ದಪ್ಪ ತಳವಿರುವ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹಾಕಿ ಕಡಿಮೆ ಉರಿಯಲ್ಲಿ ಒಂದು ಗಂಟೆಯವರೆಗೆ ಮಗ ಚುತ್ತಾ ಇರಿ. ನಂತರ ಒಂದು ಚಮಚ ತುಪ್ಪ ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಬೆರೆಸಿ. ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಸುರಿದು ಸಮತಟ್ಟಾಗಿ ಹರಡಿ.
ಇದು ಅರ್ಧದಷ್ಟು ತಣ್ಣಗಾದ ಮೇಲೆ ಬೇಕಾದ ಗಾತ್ರ ಹಾಗೂ ಆಕಾರದಲ್ಲಿ ಕತ್ತರಿಸಿ. ಈ ತುಂಡುಗಳ ಮೇಲೆ ಸ್ವಲ್ಪ ಮೈದಾ ಹಿಟ್ಟನ್ನು ಸಿಂಪಡಿಸಿ ತಟ್ಟೆಯಲ್ಲಿ ಮಗುಚಿ ಹಾಕಿ ಇಡಿ. ಪೆರಾರ್ದ್ ಪೂರ್ತಿಯಾಗಿ ತಣ್ಣಗಾದ ನಂತರ ಅದರ ಸ್ವಾದ ಸವಿಯಿರಿ..
(ಸ್ನೇಹ ಸೇತು: ವಿಜಯ ಕರ್ನಾಟಕ )



Click it and Unblock the Notifications
