ಸಿಂಗಾರೆ ಹಿಟ್ಟಿನಿಂದ ಮಾಡಿದ ಬಿಸಿ ಬಿಸಿ ಪಕೋಡ ರೆಸಿಪಿ

By: jayasubramanya
Subscribe to Boldsky

ಸಿಂಗಾರೆ ಹಿಟ್ಟಿನಿಂದ ಮಾಡಿರುವ ಪಕೋಡ ಉತ್ತರ ಭಾರತೀಯರ ತಿನಿಸಾಗಿದ್ದು ಹೆಚ್ಚಾಗಿ ಇದನ್ನು ವೃತ ಇಲ್ಲವೇ ಉಪವಾಸ ಸಮಯಗಳಲ್ಲಿ ಸೇವಿಸುತ್ತಾರೆ. ಇದರಿಂದ ಹಿಟ್ಟನ್ನು ತಯಾರಿಸಿಕೊಂಡು ವ್ರತದ ದಿನದಂದು ಸೇವಿಸಲು ಬಳಸಿಕೊಳ್ಳುತ್ತಾರೆ. ಇಂದಿನ ಲೇಖನದಲ್ಲಿ ಬಿಸಿಬಿಸಿಯಾಗಿ ಸವಿಯಬಹುದಾದ ಸಿಂಗಾರೆ ಪಕೋಡಾವನ್ನು ತಯಾರಿಸುವ ವಿಧಾನವನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಇದರ ಜೊತೆಗೆ ಆಲೂಗಡ್ಡೆ, ಮತ್ತು ಇನ್ನಿತರ ಮಸಾಲೆ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಪಕೋಡಾವನ್ನು ತಯಾರಿಸಲಾಗುತ್ತದೆ.

ಈ ಪಕೋಡಾದೊಂದಿಗೆ ಫಲಹಾರಿ ಚಟ್ನಿಯನ್ನು ತಯಾರಿಸಿ ಸೇವಿಸಬಹುದಾಗಿದ್ದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ನವರಾತ್ರಿ, ಏಕಾದಶಿ ಮತ್ತು ಇತರ ಹಬ್ಬಗಳ ಉಪವಾಸ ಕ್ರಮಕ್ಕಾಗಿ ಸಿಂಗಾರೆ ಹುಡಿಯಿಂದ ಮಾಡಿದ ಆಹಾರಗಳನ್ನು ಸೇವಿಸುತ್ತಾರೆ. ಹೊರಗಿನಿಂದ ಗರಿಗರಿಯಾಗಿ ಒಳಗಿನ ಭಾಗ ಮೃದುವಾಗಿ ಈ ಪಕೋಡಾವನ್ನು ಸಿದ್ಧಪಡಿಸಲಾಗುತ್ತದೆ. ಈ ಹಿಟ್ಟಿಗೆ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸುವುದರಿಂದ ರುಚಿ ಇಮ್ಮಡಿಗೊಳ್ಳುತ್ತದೆ. ಹಾಗಿದ್ದರೆ ಈ ಕೆಳಗೆ ನಾವು ನೀಡಿರುವ ಪಕೋಡಾ ಸಿದ್ಧಪಡಿಸುವ ಹಂತ ಹಂತದ ವಿಧಾನಗಳನ್ನು ಅರಿತುಕೊಳ್ಳಿ.

ಸಿಂಗಾರೆ ಕೇ ಪಕೋಡಾ ವಿಡಿಯೋ ರೆಸಿಪಿ

singhare ke pakore recipe
ಸಿಂಗಾರೆ ಕೇ ಪಕೋಡಾ ರೆಸಿಪಿ | ಸಿಂಗಾರೆ ಹಿಟ್ಟಿನ ಪಕೋಡಾ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಿಂಗಾರೆ ಕೇ ಪಕೋಡ ರೆಸಿಪಿ | ವ್ರತಕ್ಕೆ ಪಕೋಡಾ ರೆಸಿಪಿ | ಸಿಂಗಾರೆ ಕೇ ಪಕೋಡಾ ವಿಡಿಯೋ ರೆಸಿಪಿ
ಸಿಂಗಾರೆ ಕೇ ಪಕೋಡಾ ರೆಸಿಪಿ | ಸಿಂಗಾರೆ ಹಿಟ್ಟಿನ ಪಕೋಡಾ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಿಂಗಾರೆ ಕೇ ಪಕೋಡ ರೆಸಿಪಿ | ವ್ರತಕ್ಕೆ ಪಕೋಡಾ ರೆಸಿಪಿ | ಸಿಂಗಾರೆ ಕೇ ಪಕೋಡಾ ವಿಡಿಯೋ ರೆಸಿಪಿ
Prep Time
15 Mins
Cook Time
10M
Total Time
25 Mins

Recipe By: ಮೀನಾ ಭಂಡಾರಿ

Recipe Type: ಸ್ನ್ಯಾಕ್ಸ್

Serves: 3

Ingredients
 • ಬೇಯಿಸಿದ ಆಲೂಗಡ್ಡೆ (ಸಿಪ್ಪೆ ಸುಲಿದು ಇದನ್ನು ಎರಡು ಭಾಗಗಳನ್ನಾಗಿ ತುಂಡರಿಸಿದ್ದು) - 2

  ಕಲ್ಲುಪ್ಪು ರುಚಿಗೆ

  ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು) 1/2 ಕಪ್

  ಹಸಿಮೆಣಸು (ಸಣ್ಣಗೆ ಹೆಚ್ಚಿದ್ದು) 2 ಚಮಚ

  ಸಿಂಗಾರೆ ಹುಡಿ - 1 ಕಪ್

  ನೀರು - 1/4 ಕಪ್

  ಎಣ್ಣೆ - ಕರಿಯಲು

Red Rice Kanda Poha
How to Prepare
 • 1. ಮೊದಲಿಗೆ ಮಿಕ್ಸಿಂಗ್ ಬೌಲ್‌ಗೆ ಆಲೂಗಡ್ಡೆಗಳನ್ನು ಹಾಕಿ.

  2. ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಕಲ್ಲುಪ್ಪು ಹಾಕಿ.

  3. ಕತ್ತರಿಸಿದ ಹಸಿಮೆಣಸು ಸೇರಿಸಿ.

  4. ಚೆನ್ನಾಗಿ ಕಲಸಿಕೊಳ್ಳಿ.

  5. ಇದಕ್ಕೆ ಸಿಂಗಾರೆ ಹುಡಿಯನ್ನು ಸೇರಿಸಿಕೊಳ್ಳಿ.

  6. ಮೊದಲಿಗೆ ಸ್ವಲ್ಪ ನೀರು ಹಾಕಿ ಮತ್ತು ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.

  7. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

  8. ಚಮಚ ಅಥವಾ ಬೆರಳಿನಿಂದ ಹಿಟ್ಟನ್ನು ತೆಗೆದುಕೊಂಡು ಪಕೋಡಾ ಗಾತ್ರದಲ್ಲಿ ಒಂದರ ಮೇಲೊಂದರಂತೆ ಎಣ್ಣೆಗೆ ಬಿಡಿ.

  9. ಚಿನ್ನದ ಬಣ್ಣಕ್ಕೆ ತಿರುಗವವರೆಗೆ ಪಕೋಡಾವನ್ನು ಚೆನ್ನಾಗಿ ಕರಿಯಿರಿ.

  10. ಎಣ್ಣೆಯಿಂದ ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.

Instructions
 • 1. ಇಡ್ಲಿ ಹಿಟ್ಟಿನಂತೆ ಸಿಂಗಾರೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
 • 2. ಆಲೂಗಡ್ಡೆಯ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿಕೊಳ್ಳಿ.
Nutritional Information
 • ಬಡಿಸುವ ಪ್ರಮಾಣ - 5 ತುಂಡುಗಳು
 • ಕ್ಯಾಲೊರಿ - 402 ಕ್ಯಾಲೊ
 • ಕೊಬ್ಬು - 4 ಗ್ರಾಮ್
 • ಪ್ರೊಟೀನ್ - 15 ಗ್ರಾಮ್
 • ಕಾರ್ಬೊಹೈಡ್ರೇಟ್ಸ್ - 85 ಗ್ರಾಮ್
 • ಸಕ್ಕರೆ - 3 ಗ್ರಾಮ್
 • ಫೈಬರ್ - 12 ಗ್ರಾಮ್

ಸ್ಟೆಪ್ ಬೈ ಸ್ಟೆಪ್ ಸಿಂಗಾರೆ ಕೇ ಪಕೋಡ ರೆಸಿಪಿ

1. ಮೊದಲಿಗೆ ಮಿಕ್ಸಿಂಗ್ ಬೌಲ್‌ಗೆ ಆಲೂಗಡ್ಡೆಗಳನ್ನು ಹಾಕಿ.

singhare ke pakore recipe

2. ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಕಲ್ಲುಪ್ಪು ಹಾಕಿ.

singhare ke pakore recipe
singhare ke pakore recipe

3. ಕತ್ತರಿಸಿದ ಹಸಿಮೆಣಸು ಸೇರಿಸಿ.

singhare ke pakore recipe

4. ಚೆನ್ನಾಗಿ ಕಲಸಿಕೊಳ್ಳಿ.

singhare ke pakore recipe

5. ಇದಕ್ಕೆ ಸಿಂಗಾರೆ ಹುಡಿಯನ್ನು ಸೇರಿಸಿಕೊಳ್ಳಿ.

singhare ke pakore recipe
singhare ke pakore recipe

6. ಮೊದಲಿಗೆ ಸ್ವಲ್ಪ ನೀರು ಹಾಕಿ ಮತ್ತು ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.

singhare ke pakore recipe
singhare ke pakore recipe

7. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

singhare ke pakore recipe

8. ಚಮಚ ಅಥವಾ ಬೆರಳಿನಿಂದ ಹಿಟ್ಟನ್ನು ತೆಗೆದುಕೊಂಡು ಪಕೋಡಾ ಗಾತ್ರದಲ್ಲಿ ಒಂದರ ಮೇಲೊಂದರಂತೆ ಎಣ್ಣೆಗೆ ಬಿಡಿ.

singhare ke pakore recipe
singhare ke pakore recipe

9. ಚಿನ್ನದ ಬಣ್ಣಕ್ಕೆ ತಿರುಗವವರೆಗೆ ಪಕೋಡಾವನ್ನು ಚೆನ್ನಾಗಿ ಕರಿಯಿರಿ.

singhare ke pakore recipe

10. ಎಣ್ಣೆಯಿಂದ ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.

singhare ke pakore recipe
singhare ke pakore recipe
[ 3.5 of 5 - 72 Users]
Story first published: Thursday, September 14, 2017, 12:32 [IST]
Subscribe Newsletter