For Quick Alerts
ALLOW NOTIFICATIONS  
For Daily Alerts

ನವರಾತ್ರಿ 2020: ಶೇಂಗಾ ಹೋಳಿಗೆ ರೆಸಿಪಿ

|

ನವರಾತ್ರಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರರಂಭವಾಗಿದೆ. 2020ನೇ ಸಾಲಿನಲ್ಲಿ ಅಕ್ಟೋಬರ್‌ 17ರಿಂದ 25ರವರೆಗೆ ನವರಾತ್ರಿ ಇದ್ದು, 26 ವಿಜಯ ದಶಮಿ ಆಚರಿಸಲಾಗುತ್ತಿದೆ. ಹಬ್ಬಕ್ಕೆಂದು ದಿನಕ್ಕೊಂದು ಸಿಹಿ ಖಾದ್ಯ ಮಾಡುವುದು ಹಿಂದೂ ಸಂಪ್ರದಾಯದ ವಾಡಿಕೆ.

ಆದರೆ ನಿತ್ಯ ಸಿಹಿಖಾದ್ಯ ಮಾಡುವುದರಿಂದ ಕಷ್ಟಕರವಾದ ಅಥವಾ ಸಾಕಷ್ಟು ಪ್ರಕ್ರಿಯಾ ಹಂತದ, ಸಮಯ ತೆಗೆದುಕೊಳ್ಳುವ ಖಾದ್ಯ ಮಾಡುವುದು ಕಷ್ಟವಧೇ ಹೌದು. ಅದಕ್ಕಾಗಿಯೇ ಕೇವಲ 1 ಗಂಟೆಯ ತಯಾರಾಗುವ ಸಿಹಿಖಾದ್ಯಗಳನ್ನು ಸರಣಿಯಾಗಿ ನೀಡುತ್ತಲೇ ಇದ್ದೇವೆ. ಅಂತಹ ಸಿಹಿ ಖಾದ್ಯದ ಸಾಲಿಗೆ ಅಂದರೆ ಸುಲಭವಾಗಿ ತಯಾರಿಸಬಹುದಾದ ಸಿಹಖಾದ್ಯದ ಪಟ್ಟಿಗೆ ಶೇಂಗಾ ಹೋಳಿಗೆ ಸಹ ಸೇರುತ್ತದೆ.

ಹೌದು, ಶೇಂಗಾ ಹೋಳಿಗೆ ಮೂಲತಃ ಉತ್ತರ ಕರ್ನಾಟಕದ ಖ್ಯಾತ ಸಿಹಿಖಾದ್ಯಗಳ ಸಾಲಿಗೆ ಸೇರುತ್ತದೆ. ಕಡಲೆಬೀಜ ಪ್ರಿಯರಿಗಂತೂ ಶೇಂಗಾ ಹೋಳಿಗೆ ಅಚ್ಚುಮೆಚ್ಚಿನ ಸಿಹಿತಿಂಡಿ ಆಗುವುದರಲ್ಲಿ ಸಂಶಯವಿಲ್ಲ. ಕಡಲೆಬೀಜ, ಬೆಲ್ಲ, ಎಳ್ಳು ಹೀಗೆ ಸಿಂಪಲ್‌ ಅಡಿಗೆ ವಸ್ತುಗಳಿಂದಲೇ ತಯಾರಾಗುವ ಈ ತಿಂಡಿ ಹಲವು ದಿನಗಳ ಕಾಲ ಇಟ್ಟು ಸೇವಿಸಬಹುದು.

ಈ ನವರಾತ್ರಿ ವಿಶೇಷ ನಾವಿಲ್ಲಿ ಶೇಂಗಾ ಹೋಳಿಗೆ ಮಾಡುವ ಹಂತ-ಹಂತದ ವಿಧಾನವನ್ನು ನಾವಿಲ್ಲಿ ವಿವರಿಸಲಿದ್ದೇವೆ:

Shenga Holige Recipe/ ಶೇಂಗಾ ಹೋಳಿಗೆ ರೆಸಿಪಿ
Shenga Holige Recipe/ ಶೇಂಗಾ ಹೋಳಿಗೆ ರೆಸಿಪಿ
Prep Time
30 Mins
Cook Time
20M
Total Time
50 Mins

Recipe By: kavya

Recipe Type: Sweet

Serves: 10

Ingredients
 • ಬೇಕಾಗುವ ಸಾಮಾಗ್ರಿಗಳು

  1. ಕಡಲೆಬೀಜ - 1 ಕಪ್

  2. ಎಣ್ಣೆ - ಹುರಿಯಲು

  3. ಎಳ್ಳು - ಒಂದು ಕಪ್

  4. ಹಾಲು - ಅರ್ಧ ಕಪ್

  5. ಮೈದಾ - ಮುಕ್ಕಾಲು ಕಪ್

  6. ರವೆ - ಕಾಲು ಕಪ್

  7. ಬೆಲ್ಲ - ಮುಕ್ಕಾಲು ಬೌಲ್

  8. ನೀರು - ಅರ್ಧ ಕಪ್

  9. ಉಪ್ಪು - ಒಂದು ಪಿಂಚ್

  10. ಏಲಕ್ಕಿ ಪುಡಿ - ಒಂದು ಚಮಚ

Red Rice Kanda Poha
How to Prepare
 • ತಯಾರಿಸುವ ವಿಧಾನ

  1. ಒಂದು ಬಟ್ಟಲಿಗೆ ಮೈದಾ, ರವೆ ಮತ್ತು ಉಪ್ಪು ಸೇರಿಸಿ.

  2. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

  3. ನೀರನ್ನು ಸ್ವಲ್ಪ ಸೇರಿಸಿ ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ.

  4. ಇದನ್ನು 5 ನಿಮಿಷಗಳ ಕಾಲ ಬಿಡಿ.

  5. ಒಂದು ಪ್ಯಾನ್‌ನಲ್ಲಿ ಕಡಲೆಕಾಯಿಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದು ಜಾರ್‌ಗೆ ಸೇರಿಸಿ.

  7. ಎಳ್ಳನ್ನು ಹುರಿದು, ಬೆಲ್ಲ, ಏಲಕ್ಕಿ ಸೇರಿಸಿ ಕಡಲೆಬೀಜ ಸೇರಿದಂತೆ ಎಲ್ಲವನ್ನು ಪೂರ್ಣವಾಗಿ ಪುಡಿಮಾಡಿ.

  8. ಮಿಶ್ರಣಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.

  9. ಈಗ ಮೈದಾ ಹಿಟ್ಟನ್ನು ತೆಗೆದುಕೊಂಡು ಸಣ್ಣದಾಗಿ ಅದನ್ನು ಹೊಸೆದು ಅದರ ನಡುವೆ ಒಂದು ಚಮಚ ಕಡಲೆ ಹೂರಣವನ್ನು ಸೇರಿಸಿ

  10. ಈಗ ಮೈದಾದಲ್ಲಿ ಕಡಲೆ ಮಿಶ್ರಣ ಪೂರ್ಣ ಮುಚ್ಚುವಂತೆ ಕೈಯಲ್ಲೇ ವೃತ್ತಾಕಾರವಾಗಿಸಿ.

  11. ಈಗ ಮೈದಾ ಹಿಟ್ಟಿನ ಸಹಾಯದಿಂದ ಚಪಾತಿ ಹದಕ್ಕೆ ಅದನ್ನು ನಯವಾಗಿ ಹೊಸೆದುಕೊಳ್ಳಿ.

  12. ನಂತರ ಅದನ್ನು ತವಾ ಮೇಲೆ ಸಣ್ಣ ಉರಿಯಲ್ಲಿ ಎರಡೂ ಬದಿಗಳನ್ನು ತಿರುಗಿಸಿ ಫ್ರೈ ಮಾಡಿ.

  13. ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ಅಂಚುಗಳು ಗರಿಗರಿಯಾಗುವವರೆಗೆ ಫ್ರೈ ಮಾಡಿ.

Instructions
 • 1. ಹಿಟ್ಟಿಗೆ ಹೂರಣ ಹಾಕಿ ಹೊಸೆಯವಾಗ ಜಾಗರೂಕರಾಗಿರಿ, ಏಕೆಂದರೆ ಅದು ಸುಲಭವಾಗಿ ಮುರಿದು ಹೋಗಬಹುದು. 2. ಕೆಲವು ಬಾರಿ ಅಂಚುಗಳಿಗೆ ಹೂರಣ ಸರಿಯಾಗಿ ಹರಡುವುದಿಲ್ಲ, ಬೇಕಿದ್ದರೆ ಅದನ್ನು ನಿಧಾನವಾಗಿ ಚಾಕು ಅಥವಾ ಸ್ಪೂನ್‌ನಿಂದ ತೆಗೆಯಬಹುದು.
Nutritional Information
 • ಗಾತ್ರ - 1 ಹೋಳಿಗೆ
 • ಕ್ಯಾಲೋರಿ - 115 -
 • ಕಾರ್ಬೋಹೈಡ್ರೇಟ್‌ - 17 ಗ್ರಾಂ
 • ಪ್ರೋಟೀನ್ - - 11 ಗ್ರಾಂ
[ 5 of 5 - 22 Users]
X