ಸಬ್ಬಕ್ಕಿ/ಸಾಬುದಾನ ಟಿಕ್ಕಿ

By: Divya pandith
Subscribe to Boldsky

ಸಬ್ಬಕ್ಕಿ/ಸಾಬುದಾನ ಟಿಕ್ಕಿ ಮಹಾರಾಷ್ಟ್ರದ ಜನಪ್ರಿಯ ತಿಂಡಿ. ಉಪವಾಸದ ಸಮಯದಲ್ಲಿ ಹೆಚ್ಚಾಗಿ ತಯಾರಿಸಲ್ಪಡುವ ಈ ತಿಂಡಿ ಆಲೂಗಡ್ಡೆ, ಸಬ್ಬಕ್ಕಿ ಹಾಗೂ ಕೆಲವು ಮಸಾಲಾ ಪದಾರ್ಥಗಳಿಂದ ಕೂಡಿರುತ್ತದೆ. ಸಬ್ಬಕ್ಕಿ/ಸಾಬುದಾನ ನೆನೆಯುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎನ್ನುವುದನ್ನು ಬಿಟ್ಟರೆ, ಟಿಕ್ಕಿ ಪಾಕವಿಧಾನ ಬಲು ಸರಳ ಹಾಗೂ ಸುಲಭ. ಸಾಬುದಾನ ಟಿಕ್ಕಿ ಹೊರ ಭಾಗದಲ್ಲಿ ಗರಿಗರಿಯಾಗಿ ಹಾಗೂ ಒಳ ಭಾಗದಲ್ಲಿ ಮೃದುವಾಗಿರುತ್ತದೆ.

ಉಪವಾಸದ ಸಂದರ್ಭದಲ್ಲಿ ಹೆಚ್ಚು ಶಕ್ತಿಯನ್ನು ನೀಡಬಲ್ಲ ಈ ತಿಂಡಿ, ಸಾಯಂಕಾಲದ ಒಂದು ಕಪ್ಪು ಟೀ ಸವಿಯುವಾಗ ಹೆಚ್ಚು ರುಚಿಯನ್ನು ನೀಡುತ್ತದೆ. ಇದನ್ನು ಕೊತ್ತಂಬರಿ ಚಟ್ನಿ, ಆಮ್ಚೂರ್ ಚಟ್ನಿ ಅಥವಾ ಕೆಚಪ್ ಜೊತೆ ಸವಿಯಬಹುದು. ಸಬ್ಬಕ್ಕಿ/ಸಾಬುದಾನ ವಡೆಯ ಪ್ರತಿ ರೂಪವೇ ಸಾಬುದಾನ ಟಿಕ್ಕಿ. ಇದರ ಮಸಾಲಾ ಪದಾರ್ಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿರುವುದನ್ನು ನೋಡಬಹುದು. ವಡೆಯನ್ನು ಬಾಣಲಿಯಲ್ಲಿ ಹುರಿದರೆ, ಟಿಕ್ಕಿಯನ್ನು ಎಣ್ಣೆಯಲ್ಲಿ ಕರಿಯುತ್ತಾರೆ. ಎಲ್ಲಾ ಸಮಯದಲ್ಲೂ ತಯಾರಿಸಬಹುದಾದ ಲಘು ಹಾಗೂ ಸರಳವಾದ ಟಿಕ್ಕಿಯನ್ನು ಮಾಡಲು ನೀವು ಹೆಚ್ಚು ಉತ್ಸುಕರಾಗಿದ್ದರೆ, ನಾವಿಲ್ಲಿ ನೀಡಿರುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಮಾಹಿತಿ ಪಡೆದುಕೊಳ್ಳಿ...

sabudana tikki recipe
ಸಾಬುದಾನ ಟಿಕ್ಕಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಾಬುದಾನ ವಡಾ ರೆಸಿಪಿ | ಸಾಬುದಾನ ಕಟ್ಲೇಟ್ ರೆಸಿಪಿ |ಸಾಬುದಾನ ಟಿಕ್ಕಿ ವಿಡಿಯೋ ರೆಸಿಪಿ | ಸಬುದಾನಾ ಪ್ಯಾಟಿಸ್ ರೆಸಿಪಿ
ಸಾಬುದಾನ ಟಿಕ್ಕಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಾಬುದಾನ ವಡಾ ರೆಸಿಪಿ | ಸಾಬುದಾನ ಕಟ್ಲೇಟ್ ರೆಸಿಪಿ |ಸಾಬುದಾನ ಟಿಕ್ಕಿ ವಿಡಿಯೋ ರೆಸಿಪಿ | ಸಬುದಾನಾ ಪ್ಯಾಟಿಸ್ ರೆಸಿಪಿ
Prep Time
8 Hours
Cook Time
30M
Total Time
8 Hours 30 Mins

Recipe By: ಮೀನಾ ಭಂಡಾರಿ

Recipe Type: ಕುರುಕಲು ತಿಂಡಿ/ ಸ್ನ್ಯಾಕ್ಸ್

Serves: 12 ಟಿಕ್ಕಿ

Ingredients
 • ಸಬ್ಬಕ್ಕಿ/ಸಾಬುದಾನ - 1/2 ಕಪ್

  ಸಿಪ್ಪೆ ತೆಗೆದು ಬೇಯಿಸಿಕೊಂಡ ಆಲೂಗಡ್ಡೆ - 3

  ಶುಂಠಿ ಪೇಸ್ಟ್ - 2 ಟೀಚಮಚ

  ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 2 ಟೀಚಮಚ

  ರುಚಿಗೆ ತಕ್ಕಷ್ಟು ಉಪ್ಪು

  ಕಾರ್ನ್ ಹಿಟ್ಟು - 1 ಟೀಚಮಚ

  ಹುರಿದ ಕಡಲೆಕಾಯಿ/ಶೇಂಗಾ - ಟೇಬಲ್ ಚಮಚ

  ಕರಿಯಲು ಎಣ್ಣೆ

  ನೀರು - 1/2 ಕಪ್+ತೊಳೆಯಲು

Red Rice Kanda Poha
How to Prepare
 • 1. ಸಬ್ಬಕ್ಕಿ/ಸಾಬುದಾನ ಜರಡಿ ಹಿಡಿದು, ನಂತರ ಗಂಜಿ ಹೋಗುವವರೆಗೆ ಚೆನ್ನಾಗಿ ತೊಳೆಯಿರಿ.

  2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ 1/2 ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.

  3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು.

  4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.

  5. ಇನ್ನು ಒಂದು ಬೌಲ್‍ನಲ್ಲಿ ಸಿಪ್ಪೆ ತೆಗೆದು ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಿ.

  6. ನಂತರ ನೆನೆಸಿಕೊಂಡ ಸಬ್ಬಕ್ಕಿ/ಸಾಬುದಾನವನ್ನು ಬೆರೆಸಿ

  7. ಇನ್ನು ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ ಮತ್ತು ಶುಂಠಿ ಪೇಸ್ಟ್ ಅನ್ನು ಸೇರಿಸಿ.

  8. ಬಿಳಿ ಎಳ್ಳು ಹಾಗೂ ಉಪ್ಪನ್ನು ಹಾಕಿ.

  9. ಇವೆಲ್ಲವನ್ನು ಒಟ್ಟಿಗೆ ಮಿಶ್ರಗೊಳಿಸಿ, ಒಂದು ಹಿಟ್ಟಿನ ಮುದ್ದೆಯಂತೆ ಮಾಡಿ.

  10. ನಂತರ ಹುರಿದ ಕಡಲೆಕಾಯಿ/ಶೇಂಗಾ ಮತ್ತು ಕಾರ್ನ್ ಹಿಟ್ಟನ್ನು ಸೇರಿಸಿ ಇನ್ನೊಮ್ಮೆ ನಾದಿ ಮಿಶ್ರಗೊಳಿಸಿ.

  11. ಅಂಗೈನಲ್ಲಿ ಸ್ವಲ್ಪ ಮಿಶ್ರಣವನ್ನು ಇಟ್ಟು ಉಂಡೆ ಮಾಡಿ. ನಂತರ ಬೆರಳುಗಳಿಂದ ಸ್ವಲ್ಪ ಚಪ್ಪಟೆಯ ಆಕಾರಕ್ಕೆ ತಿರುಗಿಸಿ.

  12. ಇದರ ನಡುವೆಯೇ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

  13. ಬಿಸಿಯಾದ ಎಣ್ಣೆಯಲ್ಲಿ ಟಿಕ್ಕಿಯನ್ನು ಬಿಡಿ.

  14. ತಿರುಗಿಸಿ ತಿರುಗಿಸಿ ಬೇಯಿಸಬೇಕು.

  15. ಹೊಂಬಣ್ಣಕ್ಕೆ ಬರುವವರೆಗೆ, ಎರಡು ಬದಿಯಲ್ಲಿ ಚೆನ್ನಾಗಿ ಬೇಯಿಸಿ.

Instructions
 • 1. ಸಬ್ಬಕ್ಕಿ/ಸಾಬುದಾನವನ್ನು ತೊಳೆಯುವಾಗ ಗಂಜಿಯನ್ನು ಸರಿಯಾಗಿ ತೆಗೆಯಬೇಕು. ಇಲ್ಲವಾದರೆ ಟಿಕ್ಕಿ ತುಂಬಾ ಜಿಗುಟಾಗಿರುತ್ತದೆ.
 • 2. ಸಬ್ಬಕ್ಕಿ ಹೆಚ್ಚಿನ ನೀರನ್ನು ಕುಡಿಯುತ್ತದೆ. ಹಾಗಾಗಿ ಸಾಕಷ್ಟು ನೀರನ್ನು ಮಾತ್ರ ಹಾಕಿ ನೆನೆಯಿಡಿ. ನೆನೆದ ಮೇಲೆ ಉಳಿದ ನೀರನ್ನು ಸಂಪೂರ್ಣವಾಗಿ ತೆಗೆಯಿರಿ.
 • 3. ಉಪವಾದ ಸಂದರ್ಭದಲ್ಲಿ ನಿತ್ಯ ಬಳಸುವ ಉಪ್ಪಿಗೆ ಬದಲಾಗಿ ಸೈಂದವ ಉಪ್ಪನ್ನು ಬಳಸಬಹುದು.
 • 4. ಟಿಕ್ಕಿಯನ್ನು ಅತಿಹೆಚ್ಚು ಗರಿಗರಿಯಾಗುವಂತೆ ಕರಿಯಬಹುದು.
Nutritional Information
 • ಸರ್ವಿಂಗ್ ಸೈಜ್ - 1 ಟಿಕ್ಕಿ
 • ಕ್ಯಾಲೋರಿ - 40 ಕ್ಯಾಲ್
 • ಫ್ಯಾಟ್ - 7 ಗ್ರಾಂ.
 • ಪ್ರೋಟೀನ್ - 1 ಗ್ರಾಂ.
 • ಕಾರ್ಬೋಹೈಡ್ರೇಟ್ - 11 ಗ್ರಾಂ.
 • ಸಕ್ಕರೆ - 1 ಗ್ರಾಂ

ಸಬ್ಬಕ್ಕಿ/ಸಾಬುದಾನ ಟಿಕ್ಕಿ ಮಾಡುವ ವಿಧಾನ:

1. ಸಬ್ಬಕ್ಕಿ/ಸಾಬುದಾನ ಜರಡಿ ಹಿಡಿದು, ನಂತರ ಗಂಜಿ ಹೋಗುವವರೆಗೆ ಚೆನ್ನಾಗಿ ತೊಳೆಯಿರಿ.

sabudana tikki recipe
sabudana tikki recipe
sabudana tikki recipe

2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ 1/2 ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.

sabudana tikki recipe
sabudana tikki recipe

3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು.

sabudana tikki recipe

4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.

sabudana tikki recipe

5. ಇನ್ನು ಒಂದು ಬೌಲ್‍ನಲ್ಲಿ ಸಿಪ್ಪೆ ತೆಗೆದು ಬೇಯಿಸಿಕೊಂಡ ಆಲೂಗಡ್ಡೆಯನ್ನು ತುರಿದುಕೊಳ್ಳಿ.

sabudana tikki recipe

6. ನಂತರ ನೆನೆಸಿಕೊಂಡ ಸಬ್ಬಕ್ಕಿ/ಸಾಬುದಾನವನ್ನು ಬೆರೆಸಿ.

sabudana tikki recipe

7. ಇನ್ನು ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ ಮತ್ತು ಶುಂಠಿ ಪೇಸ್ಟ್ ಅನ್ನು ಸೇರಿಸಿ.

sabudana tikki recipe
sabudana tikki recipe

8. ಬಿಳಿ ಎಳ್ಳು ಹಾಗೂ ಉಪ್ಪನ್ನು ಹಾಕಿ.

sabudana tikki recipe
sabudana tikki recipe

9. ಇವೆಲ್ಲವನ್ನು ಒಟ್ಟಿಗೆ ಮಿಶ್ರಗೊಳಿಸಿ, ಒಂದು ಹಿಟ್ಟಿನ ಮುದ್ದೆಯಂತೆ ಮಾಡಿ.

sabudana tikki recipe

10. ನಂತರ ಹುರಿದ ಕಡಲೆಕಾಯಿ/ಶೇಂಗಾ ಮತ್ತು ಕಾರ್ನ್ ಹಿಟ್ಟನ್ನು ಸೇರಿಸಿ ಇನ್ನೊಮ್ಮೆ ನಾದಿ ಮಿಶ್ರಗೊಳಿಸಿ.

sabudana tikki recipe
sabudana tikki recipe

11. ಅಂಗೈನಲ್ಲಿ ಸ್ವಲ್ಪ ಮಿಶ್ರಣವನ್ನು ಇಟ್ಟು ಉಂಡೆ ಮಾಡಿ. ನಂತರ ಬೆರಳುಗಳಿಂದ ಸ್ವಲ್ಪ ಚಪ್ಪಟೆಯ ಆಕಾರಕ್ಕೆ ತಿರುಗಿಸಿ.

sabudana tikki recipe

12. ಇದರ ನಡುವೆಯೇ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

sabudana tikki recipe

13. ಬಿಸಿಯಾದ ಎಣ್ಣೆಯಲ್ಲಿ ಟಿಕ್ಕಿಯನ್ನು ಬಿಡಿ.

sabudana tikki recipe

14. ತಿರುಗಿಸಿ ತಿರುಗಿಸಿ ಬೇಯಿಸಬೇಕು.

sabudana tikki recipe

15. ಹೊಂಬಣ್ಣಕ್ಕೆ ಬರುವವರೆಗೆ, ಎರಡು ಬದಿಯಲ್ಲಿ ಚೆನ್ನಾಗಿ ಬೇಯಿಸಿ.

sabudana tikki recipe
sabudana tikki recipe
[ 5 of 5 - 11 Users]
Subscribe Newsletter