Just In
Don't Miss
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Technology
ಶಿಯೋಮಿ 'ರೆಡ್ಮಿ ಕೆ30' ಸ್ಮಾರ್ಟ್ಫೋನ್ ಬಿಡುಗಡೆ!.ಬೆಲೆ ಎಷ್ಟು?.ಫೀಚರ್ಸ್ ಏನು?
- Automobiles
ಮೊದಲ ಬಾರಿಗೆ ಪ್ರದರ್ಶಿತವಾದ ಹೊಸ ತಲೆಮಾರಿನ ಪಜೆರೊ ಸ್ಪೋರ್ಟ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವರಾತ್ರಿ ವಿಶೇಷ: ಸಬ್ಬಕ್ಕಿ ಲಾಡು ರೆಸಿಪಿ
ಹಬ್ಬ ಹಾಗೂ ವ್ರತಾಚರಣೆಯ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ವಿಶೇಷ ಸಿಹಿ ತಿಂಡಿ ಸಬ್ಬಕ್ಕಿ ಲಾಡು/ಲಡ್ಡೂ. ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾದ ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ಸಬ್ಬಕ್ಕಿ, ತೆಂಗಿನ ತುರಿ ಮತ್ತು ಸಕ್ಕರೆ ಪುಡಿಯೊಂದಿಗೆ ತಯಾರಿಸಲಾಗುವ ಈ ಲಾಡು ಸವಿಯಲು ರುಚಿಕರವಾಗಿರುತ್ತದೆ.
ಸಬ್ಬಕ್ಕಿಯನ್ನು ಹುರಿದು, ಪುಡಿಮಾಡಿ ತಯಾರಿಸಲಾಗುವ ಈ ಲಾಡನ್ನು ತಮಿಳುನಾಡಿನಲ್ಲಿ ಜವ್ವಾರಿಸಿ ಲಾಡು ಎಂದು ಕರೆಯುತ್ತಾರೆ. ಹೆಚ್ಚು ಜನಪ್ರಿಯವಾದ ಈ ತಿಂಡಿಯನ್ನು ತಯಾರಿಸಲು ಒಂದು ಗಂಟೆ ಬೇಕಾಗುವುದು. ಆದರೆ ಮಾಡುವ ವಿಧಾನ ಸುಲಭ. ಹಬ್ಬದ ಸಂದರ್ಭದಲ್ಲಿ ನೀವು ಈ ಸಿಹಿಯನ್ನು ಮಾಡಬೇಕೆಂಬ ಹವಣಿಕೆಯಲ್ಲಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಚಿತ್ರವಿವರಣೆಯ ಮೊರೆ ಹೋಗಿ.
Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 10 ಲಾಡು
-
ಸಬ್ಬಕ್ಕಿ - 1 ಕಪ್
ಒಣ ಕೊಬ್ಬರಿ ತುರಿ - 3/4 ಕಪ್
ತುಪ್ಪ - 5 ಟೇಬಲ್ ಚಮಚ
ಹೆಚ್ಚಿಕೊಂಡ ಗೋಡಂಬಿ - 1/4 ಕಪ್
ಏಲಕ್ಕಿ ಪುಡಿ - 1 ಟೀ ಚಮಚ
ಜಾಯಕಾಯಿ ಪುಡಿ - 1/4 ಟೀ ಚಮಚ
ಸಕ್ಕರೆ ಪುಡಿ - 1,1/2 ಕಪ್
-
1. ಸಬ್ಬಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ.
2. ತಿಳಿ ಹೊಂಬಣ್ಣಕ್ಕೆ ತಿರುಗುವವರೆಗೂ ಒಣದಾಗಿಯೇ (ಡ್ರೈ ರೋಸ್ಟ್) ಸಬ್ಬಕ್ಕಿಯನ್ನು ಹುರಿಯಿರಿ.
3. ನಂತರ 5 ನಿಮಿಷಗಳ ಕಾಲ ಆರಲು ಬಿಡಿ.
4. ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ, ನುಣುಪಾದ ಪುಡಿಯನ್ನಾಗಿ ರುಬ್ಬಿಕೊಳ್ಳಿ.
5. ಬಿಸಿಯಾದ ಪಾತ್ರೆಗೆ ಒಣ ಕೊಬ್ಬರಿ ತುರಿಯನ್ನು ಹಾಕಿ.
6. 30 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಒಣದಾಗಿಯೇ(ಡ್ರೈ ರೋಸ್ಟ್) ಹುರಿದುಕೊಳ್ಳಿ.
7. ನಂತರ ಸಬ್ಬಕ್ಕಿ ಪುಡಿಯನ್ನು ಸೇರಿಸಿ.
8. ಚೆನ್ನಾಗಿ ಮಿಶ್ರಗೊಳಿಸಿ, ಒಂದು ನಿಮಿಷ ಹುರಿದು ಒಂದೆಡೆ ಇಡಿ.
9. ಇನ್ನೊಂದು ಪಾತ್ರೆಯಲ್ಲಿ 2 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.
10. ಹೆಚ್ಚಿಕೊಂಡ ಗೋಡಂಬಿ ಚೂರನ್ನು ಸೇರಿಸಿ, ತಿಳಿ ಹೊಂಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.
11. ತೆಂಗಿನಕಾಯಿ ಮತ್ತು ಸಬ್ಬಕ್ಕಿ ಮಿಶ್ರಣವನ್ನು ಸೇರಿಸಿ.
12. ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಗೊಳಿಸಿ, ಹುರಿಯಿರಿ.
13. ಏಲಕ್ಕಿ ಮತ್ತು ಜಾಯಕಾಯಿ ಪುಡಿಯನ್ನು ಸೇರಿಸಿ.
14. ಸಕ್ಕರೆ ಪುಡಿಯನ್ನು ಸೇರಿಸಿ 2 ನಿಮಿಷ ಚೆನ್ನಾಗಿ ಮಿಶ್ರಗೊಳಿಸಿ.
15. ಸಕ್ಕರೆ ಪುಡಿಯು ಕರಗಿದ ಮೇಲೆ 2 ಟೇಬಲ್ ಚಮಚ ತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.
16. ಉರಿಯನ್ನು ಆರಿಸಿ, 2-3 ನಿಮಿಷಗಳ ಕಾಲ ಆರಲು ಬಿಡಿ.
17. ಇನ್ನೊಮ್ಮೆ 1 ಟೇಬಲ್ ಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
18. ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು ಉಂಡೆಯನ್ನಾಗಿ ಮಾಡಿ.
- 1. ತೆಂಗಿನ ತುರಿಯ ತೇವಾಂಶವನ್ನು ತೆಗೆಯಲು, ತಾಜಾ ತೆಂಗಿನ ತುರಿಯನ್ನು ಬಿಸಿಲಿಗೆ ಒಣಗಿಸಿ ನಂತರ ಲಾಡಿಗೆ ಸೇರಿಸಬಹುದು.
- 2. ಸಬ್ಬಕ್ಕಿಗೆ ಸೇರಿಸುವ ಮುನ್ನವೇ ತೆಂಗಿನ ತುರಿಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಆಗ ತೆಂಗಿನಕಾಯಿಯ ಕಚ್ಚಾ ಪರಿಮಳವನ್ನು ತೆಗೆಯಬಹುದು.
- 3. ನಿಮಗೆ ಇಷ್ಟವಾಗುವ ಒಣ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
- 4. ತುಪ್ಪದ ಬದಲಿಗೆ ತೆಂಗಿನ ಎಣ್ಣೆಯನ್ನು ಬಳಸಬಹುದು.
- ಸರ್ವಿಂಗ್ ಸೈಜ್ - 1 ಲಾಡು
- ಕ್ಯಾಲೋರಿ - 283.5 ಕ್ಯಾಲ್
- ಫ್ಯಾಟ್ - 53.9 ಗ್ರಾಂ.
- ಪ್ರೋಟೀನ್ - 7.9 ಗ್ರಾಂ.
- ಕಾರ್ಬೋಹೈಡ್ರೇಟ್ - 109.3 ಗ್ರಾಂ.
ಹಂತ ಹಂತವಾದ ಚಿತ್ರ ವಿವರಣೆ: