Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿಕರವಾಗಿರುವ ಟೊಮೆಟೊ ಚಿತ್ರಾನ್ನ ರೆಸಿಪಿ
ಬಾಯಿಯಲ್ಲಿ ನೀರೂರಿಸುವ ಟೊಮೆಟೊ ಚಿತ್ರಾನ್ನ ರುಚಿಕರವಾಗಿ ಹಾಗೂ ಸ್ವಾದಿಷ್ಟದಿಂದ ಕೂಡಿದ್ದು, ಬೆಳಗಿನ ಜಾವದ ಉಪಹಾರಕ್ಕೆ ಇದನ್ನು ಸುಲಭವಾಗಿ ತಯಾರಿಸಬಹುದು, ಇಂತಹ ಸ್ವಾದಿಷ್ಟಭರಿತವಾಗಿರುವ ದಕ್ಷಿಣ ಭಾರತದ ರೆಸಿಪಿಯನ್ನು ಮಾಡುವುದರೊಂದಿಗೆ ನಿಮ್ಮ ಬೆಳೆಗಿನ ಜಾವದ ಉಪಹಾರವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿ. ಹಾಗಾದರೆ ಇನ್ನೇಕೆ ತಡ? ಬನ್ನಿ ಟೊಮೆಟೊ ಚಿತ್ರಾನ್ನ ಮಾಡುವ ವಿಧಾನವನ್ನು ಪ್ರಯತ್ನಿಸಿ.
ಬಾಯಲ್ಲಿ ನೀರೂರಿಸುವ ಡಿನ್ನರ್ ರೆಸಿಪಿಗಳು!

ಬೇಕಾಗುವ ಸಾಮಗ್ರಿಗಳು:
1. ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
2.ಈರುಳ್ಳಿ - ಒಂದು ಅಥವಾ ಎರಡು
3. ಹಸಿಮೆಣಸಿನಕಾಯಿ - ಎರಡು
4. ಎಣ್ಣೆ - ಸ್ವಲ್ಪ (ಒಗ್ಗರಣೆಗೆ)
5. ಕಡ್ಲೆಬೇಳೆ - ಒಂದು ಚಮಚ
5.ಉದ್ದಿನ ಬೇಳೆ - ಒಂದು ಚಮಚ
6.ಸಾಸಿವೆ - ಕಾಲು ಚಮಚ
7.ಜೀರಿಗೆ - ಕಾಲು ಚಮಚ
8.ಅರಿಶಿಣ - ಚಿಟಿಕೆ
9.ಕರಿಬೇವು ಸ್ವಲ್ಪ
10.ಕೊತ್ತುಂಬರಿ ಸೊಪ್ಪು
11. ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು
ರುಚಿಕರವಾಗಿರುವ ಮೊಸರು ಅನ್ನ ರೆಸಿಪಿ
ತಯಾರಿಸುವ ವಿಧಾನ:
1.ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
2. ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ.
3. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
4. ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.



Click it and Unblock the Notifications
