Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಹಿತಮಿತ ಊಟಕ್ಕಾಗಿ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ!
ಈ ಖಾದ್ಯವು ಒಂದು ಒಳ್ಳೆಯ ರುಚಿಕರವಾದ ಮತ್ತು ಅದೇ ಸಮಯಕ್ಕೆ ಲಘುವಾದ ಊಟವನ್ನು ಮಾಡಬೇಕೆಂದು ಕೊಂಡಲ್ಲಿ ಒಂದು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ. ಸಾಮಾನ್ಯವಾಗಿ ತೆಂಗಿನಕಾಯಿಂದ ಮಾಡಲಾಗುವ ಖಾದ್ಯಗಳು ತಮ್ಮ ಅದ್ಭುತವಾದ ರುಚಿ ಮತ್ತು ಸರಳತೆಗಾಗಿ ಪ್ರಸಿದ್ಧಿಯನ್ನು ಪಡೆದಿವೆ. ಇದರಲ್ಲಿ ಬಳಸಲಾಗುವ ಸರಳ ಪದಾರ್ಥಗಳು ಮತ್ತು ಗಿಡ ಮೂಲಿಕೆಗಳು ಇದರ ಅದ್ಭುತ ರುಚಿಗೆ ಕಾರಣವಾಗಿರುತ್ತವೆ. ಇಂತಹ ಆಹಾರಗಳಲ್ಲಿ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಸಹ ಒಂದು. ರುಚಿ ರುಚಿಯಾದ ತರಕಾರಿಗಳಿಂದ ಮಾಡಿದ ಅನ್ನದ ಖಾದ್ಯ
ಇದು ನಿಮ್ಮ ರುಚಿ ಗ್ರಂಥಿಗಳಿಗೆ ಅದ್ಭುತವಾದ ರುಚಿಯನ್ನು ತೋರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಥಾಯ್ ತೆಂಗಿನಕಾಯಿ ರೈಸನ್ನು ಭಾರತೀಯ ಶೈಲಿಯ ಕರಿಗಳ ಜೊತೆಗೆ ಸವಿಯಲು ನೀಡಬಹುದು. ಇದರಲ್ಲಿ ಬಳಸಲಾಗುವ ತೆಂಗಿನಹಾಲು ಈ ಖಾದ್ಯಕ್ಕೆ ವಿಶೇಷವಾದ ರುಚಿಯನ್ನು ಒದಗಿಸುತ್ತದೆ. ಈ ಖಾದ್ಯವನ್ನು ಥಾಯ್ ಜಾಸ್ಮಿನ್ ಪರಿಮಳದ ಅಕ್ಕಿಯ ಜೊತೆಗೆ ತಯಾರಿಸಿದಲ್ಲಿ ಮತ್ತಷ್ಟು ರುಚಿಕರವಾಗಿರುತ್ತದೆ. ಈ ಅಕ್ಕಿಯು ಸೂಪರ್ ಮಾರ್ಕೆಟ್‍ಗಳಲ್ಲಿ ಸುಲಭವಾಗಿ ದೊರೆಯುತ್ತದೆ.

ಒಂದು ವೇಳೆ ಈ ಅಕ್ಕಿಯು ನಿಮಗೆ ದೊರೆಯದಿದ್ದಲ್ಲಿ, ಸುಲಭವಾಗಿ ಸಿಗುವ ಬಾಸುಮತಿ ಅಕ್ಕಿಯಲ್ಲಿ ಇದನ್ನು ಮಾಡಬಹುದು. ಈ ಥಾಯ್ ರೆಸಿಪಿಯನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು. ಯಾವುದೇ ಶ್ರಮವಿಲ್ಲದೆ ಒಂದು ವಿಶೇಷವಾದ ರಾತ್ರಿಯ ಊಟವನ್ನು ಮಾಡಬೇಕಾದಲ್ಲಿ ಇದು ಒಳ್ಳೆಯ ಆಯ್ಕೆಯಾಗಿರುತ್ತದೆ. ಬನ್ನಿ ಇನ್ನು ತಡ ಮಾಡದೆ ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಯನ್ನು ಮನೆಯಲ್ಲಿಯೇ ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ಮಧ್ಯಾಹ್ನ ಊಟದ ಸವಿಯನ್ನು ಹೆಚ್ಚಿಸುವ ಕ್ಯಾರೆಟ್ ಅನ್ನ
*ಪ್ರಮಾಣ: 4 ಜನರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆ ಮಾಡಲು ತಗುಲುವ ಸಮಯ: 20 ನಿಮಿಷಗಳು
ಪದಾರ್ಥಗಳು
*ಜಾಸ್ಮಿನ್ ಸೆಂಟೆಡ್ ಅಕ್ಕಿ ಅಥವಾ ಬಾಸುಮತಿ ಅಕ್ಕಿ - 1½ ಕಪ್‍ಗಳು
*ತೆಂಗಿನ ಹಾಲು - 1 ಕಪ್
*ತೆಂಗಿನ ತುರಿ - ½ ಕಪ್
*ಸಕ್ಕರೆ - 1 ಟೀ. ಚಮಚ
*ನಿಂಬೆ ಎಲೆಗಳು - 2-3
*ಉಪ್ಪು - ಒಂದು ಚಿಟಿಕೆ
*ಕೊತ್ತಂಬರಿ ಸೊಪ್ಪು - 2 ಟೀ.ಚಮಚ (ಕತ್ತರಿಸಿದಂತಹುದು)
*ಎಣ್ಣೆ - 1 ಟೀ.ಚಮಚ
*ನೀರು - 1½ ಕಪ್ ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ
ತಯಾರಿಸುವ ವಿಧಾನ
1. ಅಕ್ಕಿಯನ್ನು ನೀರಿನಲ್ಲಿ ತೊಳೆದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ.
2. ಆಳವಾದ ತಳವಿರುವ ಒಂದು ಪಾತ್ರಗೆ ಎಣ್ಣೆಯನ್ನು ಹಾಕಿ, ಅದಕ್ಕೆ ತೆಂಗಿನ ಹಾಲು, ನೀರು, ಸಕ್ಕರೆ, ನಿಂಬೆ ಎಲೆಗಳು ಮತ್ತು ಉಪ್ಪನ್ನು ಹಾಕಿ.
3. ಈಗ ಈ ಪಾತ್ರೆಯನ್ನು ಒಲೆಯ ಮೇಲೆ ಇಡಿ ಮತ್ತು ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ.
4. 5-6 ನಿಮಿಷಗಳ ನಂತರ ಇದಕ್ಕೆ ಅನ್ನವನ್ನು ಹಾಕಿ, ಚೆನ್ನಾಗಿ ಕಲೆಸಿ.
5. ಉರಿಯನ್ನು ಕಡಿಮೆ ಮಾಡಿ ಮತ್ತು ಅದರ ಮೇಲೆ ಮುಚ್ಚಳವನ್ನು ಮುಚ್ಚಿ.
6. ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷಗಳ ಇದನ್ನು ಬೇಯಿಸಿ.
7. 15 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು, ತೆಂಗಿನ ತುರಿಯನ್ನು ಅದರಲ್ಲಿ ಹಾಕಿ.
8. ಚಮಚದ ಸಹಾಯದೊಂದಿಗೆ ನಿಂಬೆ ಎಲೆಗಳನ್ನು ತೆಗೆಯಿರಿ.
9. ಈಗ ಒಲೆಯನ್ನು ಆರಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅನ್ನವನ್ನು ಅಲಂಕರಿಸಿ. ಥಾಯ್ ತೆಂಗಿನಕಾಯಿ ರೈಸ್ ರೆಸಿಪಿ ಈಗ ತಯಾರಾಗಿದೆ. ನಿಮಗೆ ಇಷ್ಟ ಬಂದ ಕರಿಯ ಜೊತೆಗೆ ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ಬಡಿಸಬಹುದು.



Click it and Unblock the Notifications