Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ರುಚಿ ರುಚಿಯಾದ ತರಕಾರಿಗಳಿಂದ ಮಾಡಿದ ಅನ್ನದ ಖಾದ್ಯ
ನಮ್ಮ ಜೀವನದಲ್ಲಿ ಆಹಾರ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರದಿಂದ ಹಿಡಿದು ರಾತ್ರಿಯ ಊಟದವರೆಗೆ ನಾವು ರುಚಿಯಾಗಿರುವ ಆಹಾರವನ್ನೇ ಬಯಸುತ್ತೇವೆ. ಪ್ರತಿಯೊಬ್ಬರಿಗೂ ಆಹಾರ ತಯಾರಿ ಮತ್ತು ಸವಿಯುವುದು ತುಂಬಾ ಮಹತ್ವಪೂರ್ಣವಾಗಿರುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದೇ ರೀತಿಯ ಆಹಾರವನ್ನು ತಯಾರಿಸುವ ನಾವು ಆಹಾರಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ಹಾಕಿ ಅದರಂತೆ ನಡೆಯುವವರು.
ನಮ್ಮ ಮಧ್ಯಾಹ್ನದ ಊಟ ಅಚ್ಚುಕಟ್ಟಾಗಿ ಮತ್ತು ರುಚಿಯಾಗಿರಬೇಕೆಂದು ಬಯಸುವವರು ನಾವು. ಕಚೇರಿಗೆ ಹೋಗುವವರು, ಶಾಲೆಗೆ ಹೋಗುವ ಮಕ್ಕಳು ಹೀಗೆ ಪ್ರತಿಯೊಬ್ಬರೂ ರುಚಿಯಾದ ಬುತ್ತಿ ಊಟವನ್ನೇ ಮಧ್ಯಾಹ್ನಕ್ಕೆ ಬಯಸುತ್ತಾರೆ. ಈ ಊಟ ಅನ್ನದಿಂದ ತಯಾರಿಸಿದ್ದಾಗಿದ್ದರೆ ಅದಕ್ಕೆ ತುಸು ಸೊಗಸು ಹೆಚ್ಚು ಎಂದೇ ಹೇಳಬಹುದು.

ಇಂದಿನ ಲೇಖನದಲ್ಲಿ ಅನ್ನದಿಂದ ತಯಾರಿಸುವ ವೆಜಿಟೇಬಲ್ ರೈಸ್ (ತರಕಾರಿ ಅನ್ನ) ದೊಂದಿಗೆ ನಾವು ಬಂದಿದ್ದು ಇದನ್ನು ತಯಾರಿಸಲು ಬಳಸುವ ತರಕಾರಿ ಇಲ್ಲಿ ಮಹತ್ವದ್ದಾಗಿದೆ. ಹೆಚ್ಚು ಮಸಾಲೆಯನ್ನು ಹಾಕದೇ ಆರೋಗ್ಯಕರ ಬೇರೆ ಬೇರೆ ತರಕಾರಿಗಳನ್ನು ಬಳಸಿ ತಯಾರಿಸಿದ ಈ ತರಕಾರಿ ಅನ್ನ ನಿಮ್ಮ ಮಧ್ಯಾಹ್ನದ ಊಟಕ್ಕೆ ಉತ್ತಮ ಸಂಗಾತಿ.
ಇಂತಹ ತರಕಾರಿ ಮಿಶ್ರಿತ ಅನ್ನದ ರೆಸಿಪಿ ಪ್ರತಿಯೊಬ್ಬರಿಗೂ ಇಷ್ಟವಾಗುವುದು ಖಂಡಿತ. ಇದನ್ನು ತಯಾರಿಸಲು ಬಳಸುವ ಅಕ್ಕಿ ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗಿದ್ದರೆ ಈ ತರಕಾರಿ ಅನ್ನವನ್ನು ತಯಾರಿಸುವ ಪಾಕ ವಿಧಾನವನ್ನು ನಾವಿಲ್ಲಿ ಕೆಳಗೆ ನೀಡಿದ್ದು ನಿಮಗೆ ಇದನ್ನು ಸ್ವಲ್ಪ ಸಮಯದಲ್ಲೇ ತಯಾರಿಸಬಹುದಾಗಿದೆ.
ಬಾಯಿಯಲ್ಲಿ ನೀರೂರಿಸುವ ರುಚಿಯಾದ ಕ್ಯಾಪ್ಸಿಕಮ್ ಬಾತ್
ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 1/2 ಗಂಟೆ
ಸಾಮಾಗ್ರಿಗಳು
*ಕಪ್ ಬೆಳ್ತಿಗೆ ಅನ್ನ (ಬಾಸುಮತಿ ಅಥವಾ ಸೋನಾಮಸೂರಿ ಅಕ್ಕಿ) - 1 1/2 ಕಪ್
*ಬೀನ್ಸ್ - 20-30
*ಮಧ್ಯಮ ಗಾತ್ರದ ಕ್ಯಾರೇಟ್ -2
*ಸಣ್ಣ ಆಲೂಗಡ್ಡೆ -2
*ಬಟಾಣಿ - 1/2 ಕಪ್
*ಟೊಮೇಟೊ - 1 (ಕತ್ತರಿಸಿದ್ದು)
*ಮಧ್ಯಮ ಗಾತ್ರದ ಈರುಳ್ಳಿ - 1 (ಕತ್ತರಿಸಿದ್ದು)
*ಬೆಳ್ಳುಳ್ಳಿ - 6-8
*ಶುಂಠಿ - 1/2 ಇಂಚು
*ಕರಿಬೇವಿನೆಲೆ - 8-10 ಎಸಳು
*ಕೊತ್ತಂಬರಿ ಸೊಪ್ಪು - 4-6 ಎಸಳು
*ಹಸಿಮೆಣಸು - 3-4
*ತಾಜಾ ಲಿಂಬೆ ರಸ - 1 1/2 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ತುಪ್ಪ - 4-5 ಚಮಚ
*ಜೀರಿಗೆ - 1/2 ಚಮಚ
*ಸಾಸಿವೆ - 1 ಚಮಚ
*ಸ್ವಲ್ಪ ಅರಶಿನ ಹುಡಿ
ಮಾಡುವ ವಿಧಾನ
1.ಮೊದಲಿಗೆ ಬೀನ್ಸ್, ಕ್ಯಾರೇಟ್, ಟೊಮೇಟೊ, ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
2.ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹಸಿಮೆಣಸನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಕೊನೆಗೆ ಶುಂಠಿ ಬೆಳ್ಳುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಿ (ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಬಳಸಬಹುದು)
3.ಈರುಳ್ಳಿಯನ್ನು ದಪ್ಪಗೆ ಹೆಚ್ಚಿಕೊಳ್ಳಿ.
4.ಇನ್ನು ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು ಪಕ್ಕದಲ್ಲಿಡಿ.
5.4-5 ಚಮಚ ತುಪ್ಪ, ಸಾಸಿವೆ ಜೀರಿಗೆಯನ್ನು ಪ್ರೆಶ್ಶರ್ ಕುಕ್ಕರ್‌ನಲ್ಲಿ ಬಿಸಿ ಮಾಡಿ ಎಣ್ಣೆಯೊಂದಿಗೆ ಹುರಿಯಿರಿ. ಇದು ಸಿಡಿಸ ಒಡನೆ ಶುಂಠಿ ಬೆಳ್ಳುಳ್ಳಿಯನ್ನು 2 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಇದಕ್ಕೆ ಕತ್ತರಿಸಿದ ಹಸಿಮೆಣಸು, ಕರಿಬೇವಿನೆಲೆ, ಅರಶಿನ, ಈರುಳ್ಳಿ ಉಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
6.ತದನಂತರ ಇದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಇದನ್ನು 1-2 ನಿಮಿಷಗಳ ಕಾಲ ಹುರಿಯಿರಿ. ಇದಕ್ಕೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ 1-2 ನಿಮಿಷಗಳ ಕಾಲ ಹುರಿದುಕೊಳ್ಳಿ. ನಿಮ್ಮ ಅಕ್ಕಿಯ ಅಳತೆಗೆ ಅನುಗುಣವಾಗಿ 3 ಕಪ್‌ಗಳಷ್ಟು ನೀರನ್ನು ಸೇರಿಸಿ. ಉಪ್ಪು ಹಾಕಿ ಮಿಶ್ರ ಮಾಡಿಕೊಳ್ಳಿ. (3 ವಿಶಲ್ ಬರುವರೆಗೆ ಬೇಯಿಸಿಕೊಳ್ಳಿ).
6.ಒಮ್ಮೆ ಕುಕ್ಕರ್ ತಣಿದ ನಂತರ ಇದಕ್ಕೆ ಲಿಂಬೆ ರಸವನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಇಷ್ಟ ರಾಯಿತ/ಮೊಸರು ಗೊಜ್ಜನ್ನು ತಯಾರಿಸಿ ಮತ್ತು ಬಿಸಿಯಾಗಿ ಬಡಿಸಿ. ವೆಜಿಟೇಬಲ್ ರೈಸ್ (ತರಕಾರಿ ಅನ್ನ) ಸವಿಯಲು ಸಿದ್ಧವಾಗಿದೆ.



Click it and Unblock the Notifications